ಶ್ರೀಮಂಗಲ ೨೦: ಶ್ರೀಮಂಗಲನಾಡು ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ವತಿಯಿಂದ ಕಾವೇರಿ ಸಂಕ್ರಮಣ ಪ್ರಯುಕ್ತ ಕಾವೇರಿ ತೀರ್ಥವನ್ನು ವಿತರಿಸಲಾಯಿತು. ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿಯ ಸದಸ್ಯರು ತಲಕಾವೇರಿಯಿಂದ ಸಂಗ್ರಹಿಸಿ ತಂದಿದ್ದ ತೀರ್ಥವನ್ನು ಪೂಜಿಸಿ ವಿತರಣೆ ಮಾಡಲಾಯಿತು.
ಪೊಮ್ಮಕ್ಕಡ ಪರಿಷತ್‌ನ ಉಪಾಧ್ಯಕ್ಷರಾದ ಶೈಲಾ ಸುಬ್ರಮಣಿ, ಕಾಳಿಮಾಡ ಯಶು, ಮಚ್ಚಾಮಾಡ ನಂದಿತ, ರೇಷ್ಮಗೌರಮ್ಮ, ಕಾಳಿಮಾಡ ಸೀಮ, ಚಂಚಲ್ ಮೊದಲಾದವರು ತೀರ್ಥ ವಿತರಣೆ ಮಾಡಲು ಸಹಕರಿಸಿದ್ದಾಗಿ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷರಾದ ಕಟ್ಟೇರ ಸುಶೀಲಾ ಅಚ್ಚಪ್ಪ ಅವರು ತಿಳಿಸಿದ್ದಾರೆ.