ಮಡಿಕೇರಿ, ಅ. ೨೦: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ, ನಾಪೋಕ್ಲು ಗ್ರಾಮ ಪಂಚಾಯಿತಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ನಾಪೋಕ್ಲು ಇವುಗಳ ಸಂಯುಕ್ತಾಶ್ರಯದಲ್ಲಿ ನಾಪೋಕ್ಲು ಬೇತುವಿನ ಪಿ.ಎ.ಜಿ. ಗೆಳೆಯರ ಬಳಗದ ವತಿಯಿಂದ ತಾ. ೨೫ರಂದು ನಾಪೋಕ್ಲು ಕರ್ನಾಟಕ ಪಬ್ಲಿಕ್ ಸ್ಕೂಲ್ (ಜೂನಿಯರ್ ಕಾಲೇಜು ಆವರಣ)ನಲ್ಲಿ ಕೊಡಗು ಜಿಲ್ಲಾಮಟ್ಟ ಯುವ ಜನೋತ್ಸವ ಏರ್ಪಡಿಸ ಲಾಗಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಯುವ ಜನೋತ್ಸವದಲ್ಲಿ ಜಾನಪದ ನೃತೃ, ಜಾನಪದ ಗೀತೆ, ಏಕಾಂಕ ನಾಟಕ, ಶಾಸ್ತಿçÃಯ ಗಾಯನ, ಶಾಸ್ತಿçÃಯ ವಾದನ, ಶಾಸ್ತಿçಯ ನೃತ್ಯ, ಹಾರ್ಮೊನಿಯಂ, ಗಿಟಾರ್ ವಾದನ, ಆಶುಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ೧೫ ರಿಂದ ೩೫ ವರ್ಷದೊಳಗಿನ ಜಿಲ್ಲೆಯ ಯುವಕ, ಯುವತಿಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾತ್ರ ಭಾಗಹಿಸಬಹುದಾಗಿದೆ. ವಯೋಮಿತಿಗೆ ಸಂಬAಧಿಸಿದAತೆ ಹತ್ತನೇ ತರಗತಿ ಅಂಕಪಟ್ಟಿ, ಶಾಲಾ ವರ್ಗಾವಣೆ ಪತ್ರ ಅಥವಾ ಹುಟ್ಟಿದ ದಿನಾಂಕದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಕೋವಿಡ್ ನೆಗೆಟಿವ್ ವರದಿಯನ್ನು ಸ್ಪರ್ಧಿಗಳು ಹೊಂದಿರಬೇಕು.

ಅAದು ಬೆಳಿಗ್ಗೆ ೯.೩೦ ಗಂಟೆಗೆ ಸಮಾರಂಭವನ್ನು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ನಾಪೋಕ್ಲು ಗ್ರಾ.ಪಂ. ಅಧ್ಯಕ್ಷೆ ಹೆಚ್.ಎಸ್. ಪಾರ್ವತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಪ್ಪಚ್ಚುರಂಜನ್, ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಸಂಜೆ ೫.೩೦ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಕೆ.ಜಿ. ಬೋಪಯ್ಯ ವಹಿಸಲಿದ್ದು, ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ, ನಾಪೋಕ್ಲು ಗ್ರಾ.ಪಂ. ಉಪಾಧ್ಯಕ್ಷ ಮಹಮ್ಮದ್ ಖುರೇಷಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸ್ಪರ್ಧಾ ನಿಯಮಗಳು

ಜಾನಪದ ನೃತ್ಯದಲ್ಲಿ ಯುವಕ - ಯುವತಿಯರು ಒಟ್ಟಾಗಿ ಭಾಗವಹಿಸಬಹುದಾಗಿದ್ದು, ಸ್ಪರ್ಧಿಗಳ ಸಂಖ್ಯೆ ೨೦ಕ್ಕೆ ಮೀರಬಾರದು. ೧೫ ನಿಮಿಷಗಳ ಕಾಲಾವಕಾಶವಿದ್ದು, ಸಿಡಿ, ಮೈಕ್ರೊಚಿಪ್ ಅಳವಡಿಸಲು ಅವಕಾಶ ವಿಲ್ಲ. ಜಾನಪದ ಗೀತೆಯಲ್ಲಿ ಸ್ಪರ್ಧಿ ಗಳ ಸಂಖ್ಯೆ ೧೦ ಮೀರುವಂತಿಲ್ಲ. ೭ ನಿಮಿಷ ಕಾಲಾವಕಾಶವಿದ್ದು, ಚಲನಚಿತ್ರ ಗೀತೆಗಳಿಗೆ ಅವಕಾಶವಿಲ್ಲ. ಏಕಾಂಕ ನಾಟಕದಲ್ಲೂ ಸ್ಪರ್ಧಿಗಳ ಸಂಖ್ಯೆ ೧೦ ಮೀರಬಾರದು. ನಾಟಕವು ಹಿಂದಿ ಮತ್ತು ಇಂಗ್ಲೀಷ್ ಭಾಷೆ ಯಲ್ಲಿರಬೇಕು. ೭ ನಿಮಿಷಗಳ ಕಾಲಾವಕಾಶವಿರುತ್ತದೆ. ವೈಯಕ್ತಿಕ ವಿಭಾಗದಲ್ಲಿ ಶಾಸ್ತಿçÃಯ ಗಾಯನದಲ್ಲಿ ೧೫ ನಿಮಿಷ ಸಮಯಾವಕಾಶವಿರು ತ್ತದೆ. ಚಲನಚಿತ್ರ ಗೀತೆಗಳಿಗೆ ಅವಕಾಶ ಇರುವುದಿಲ್ಲ. ವೈಯಕ್ತಿಕ ವಿಭಾಗದಲ್ಲಿ ಶಾಸ್ತಿçÃಯ ವಾದನದಲ್ಲಿ ೧೦ ನಿಮಿಷಗಳ ಸಮಯಾವಕಾಶ ಇರುತ್ತದೆ. ಪರಿಕರವನ್ನು ಸ್ಪರ್ಧಾಗಳುಗಳೇ ತರಬೇಕು. ಹಾರ್ಮೊನಿಯಂ, ಗಿಟಾರ್ ವಾದನ, ಶಾಸ್ತಿçÃಯ ನೃತ್ಯ ಸ್ಪರ್ಧೆಗಳು ವೈಯಕ್ತಿಕ ವಿಭಾಗದಲ್ಲಿ ನಡೆಯಲಿದ್ದು, ತಲಾ ಹತ್ತು ನಿಮಿಷಗಳ ಕಾಲಾವಕಾಶ ಇರುತ್ತದೆ. ಆಶುಭಾಷಣ ಸ್ಪರ್ಧೆಯೂ ವೈಯಕ್ತಿಕ ವಿಭಾಗದಲ್ಲಿ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ನಡೆಯಲಿದ್ದು, ೪ ನಿಮಿಷಗಳ ಕಾಲಾವಕಾಶ ಇರುತ್ತದೆ.

ಹೆಚ್ಚಿನ ವಿವರಗಳಿಗೆ ೯೪೮೧೨೧೩೯೨೦, ೯೪೪೯೯೫೨೦೦೮ ದೂರವಾಣಿಯನ್ನು ಸಂಪರ್ಕಿಸ ಬಹುದೆಂದು ಸುಕುಮಾರ್ ತಿಳಿಸಿದ ರಲ್ಲದೆ, ಯುವ ಭವನ ಕಟ್ಟಡವನ್ನು ಯುವ ಒಕ್ಕೂಟಕ್ಕೆ ಹಸ್ತಾಂತರಿಸ ಬೇಕೆಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಕೂಡಂಡ ಸಾಬ ಸುಬ್ರಮಣಿ, ಪಿ.ಎ.ಜಿ. ಗೆಳೆಯ ಬಳಗದ ಮಿಟ್ಟು ಸೋಮಯ್ಯ, ಎ.ಎನ್. ಉಮೇಶ್ ಉಪಸ್ಥಿತರಿದ್ದರು.