ಮಡಿಕೇರಿ, ಅ. ೨೦: ನಾಪೋಕ್ಲುವಿನ ನಾಲ್ನಾಡ್ ಪ್ಲಾಂರ‍್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ತಾ. ೨೩ ರಂದು ಚೆರಿಯಪರಂಬುವಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ರಾಜ್ಯಮಟ್ಟದ ಮುಕ್ತ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅಸೋಸಿ ಯೇಷನ್ ಪ್ರಮುಖರು ಈ ಬಗ್ಗೆ ಮಾಹಿತಿ ನೀಡಿದರು. .೨೨ ರೈಫಲ್ ೫೦ ಮೀಟರ್ ಅಂತರದ ವಿಭಾಗದಲ್ಲಿ ಮೊದಲ ಬಹುಮಾನವಾಗಿ ೫೦ ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಲಾಗುವುದು. ನಗದು ಬಹುಮಾನವನ್ನು ಎಮ್ಮೆಮಾಡುವಿನ ಕೆ.ಎ. ಪಳಂಗಪ್ಪ ಜ್ಞಾಪಕಾರ್ಥ ಕೇಟೋಳಿರ ಶಾರದ ಹಾಗೂ ಮಕ್ಕಳಾದ ವಿನೋದ್, ಮೋಹನ್ ಪ್ರಾಯೋಜಿಸಿದ್ದಾರೆ.

(ಮೊದಲ ಪುಟದಿಂದ) ದ್ವಿತೀಯ ಬಹುಮಾನವಾಗಿ ರೂ. ೩೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುತ್ತಿದ್ದು, ನಗದು ಬಹುಮಾನವನ್ನು ಬೆಂಗಳೂರಿನ ಚಿಯಕಪೂವಂಡ ಪೂವಯ್ಯ, ನಿವೃತ್ತ ಎಸ್‌ಪಿ ಕಮಲಾಕ್ಷಿ ಹಾಗೂ ಪುತ್ರ ವೇಣು ಪ್ರಾಯೋಜಿಸಿದ್ದಾರೆ.

ತೃತೀಯ ಬಹುಮಾನವಾಗಿ ರೂ.೨೦ ಸಾವಿರ ನಗದು ಮತ್ತು ಟ್ರೋಫಿಯನ್ನು ಇಡಲಾಗಿದ್ದು, ನಗದು ಬಹುಮಾನವನ್ನು ಕುಂಜಿಲದ ಕಲಿಯತಂಡ ಕೆ. ಮುತ್ತಪ್ಪ ಹಾಗೂ ಮಕ್ಕಳು ಉಮೇಶ್, ಗಿರೀಶ್ ಹಾಗೂ ಯತೀಶ್ ಜಾಜಿ ದೇವಕ್ಕಿ ಜ್ಞಾಪಕಾರ್ಥ ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು. ೩೦ ಮೀಟರ್ ಅಂತರದ ೧೨ ಬೋರ್ ವಿಭಾಗದಲ್ಲಿ ಮೊದಲ ಬಹುಮಾನವಾಗಿ ೧೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ನಗದು ಬಹುಮಾನವನ್ನು ಪುಲಿಕೋಟುವಿನ ಕರವಂಡ ಬೆಲ್ಲು ಬೆಳ್ಯಪ್ಪ ಹಾಗೂ ಕರವಂಡ ಲವನಾಣಯ್ಯ ತಮ್ಮ ಪೋಷಕರ ಜ್ಞಾಪಕಾರ್ಥ ನೀಡಿದ್ದಾರೆ. ದ್ವಿತೀಯ ಬಹುಮಾನವಾಗಿ ೫ ಸಾವಿರ ನಗದು, ಟ್ರೋಫಿ ಇದ್ದು, ನಗದು ಬಹುಮಾನವನ್ನು ಕೊಳಕೇರಿಯ ಸೋಮಣ್ಣ ಹಾಗೂ ದಿನೇಶ್ ಅಯ್ಯಪ್ಪ ಅವರ ಜ್ಞಾಪಕಾರ್ಥ ಕೇಟೋಳಿರ ಹರೀಶ್ ಪೂವಯ್ಯ ಕೊಡುಗೆಯಾಗಿ ನೀಡಿದ್ದಾರೆ.

ತೃತೀಯ ಬಹುಮಾನವಾಗಿ ೩ ಸಾವಿರ ನಗದು ಹಾಗೂ ಟ್ರೋಫಿಯಿದ್ದು, ನಗದು ಬಹುಮಾನವನ್ನು ಕೊಳಕೇರಿಯ ಸುಬ್ರಮಣಿ ಅವರ ಜ್ಞಾಪಕಾರ್ಥ ಅವರ ಪುತ್ರ ಕುಂಡ್ಯೋಳAಡ ಕಂದಾ ಮುತ್ತಪ್ಪ ನೀಡಿದ್ದಾರೆ ಎಂದು ಮಾಹಿತಿಯಿತ್ತರು. ಏರ್‌ಗನ್ ಮೂಲಕ ಮೊಟ್ಟೆಗೆ ಗುಂಡು ಹಾರಿಸುವ ಸ್ಪರ್ಧೆಯಲ್ಲಿ ಪ್ರಥಮ ೫ ಸಾವಿರ, ಟ್ರೋಫಿ, ದ್ವಿತೀಯ ೩ ಸಾವಿರ ಹಾಗೂ ಟ್ರೋಫಿ, ತೃತೀಯ ೨ ಸಾವಿರ ಮತ್ತು ಟ್ರೋಫಿ ನೀಡಲಾಗುತ್ತಿದ್ದು, ನಗದು ಬಹುಮಾನಗಳನ್ನು ಕಕ್ಕಬೆಯ ಬಾಚಮಂಡ ಯು. ಪೂವಣ್ಣ ಕೊಡುಗೆಯಾಗಿ ನೀಡಿದ್ದಾರೆ. ಸ್ಪರ್ಧೆಯ ಎಲ್ಲಾ ಟ್ರೋಫಿಗಳನ್ನು ಕ್ಲಬ್ ಮಹೀಂದ್ರಾ ಕೊಡುಗೆಯಾಗಿ ನೀಡಿದೆ. ತಾ. ೨೩ ರಂದು ಬೆಳಿಗ್ಗೆ ೯ ಗಂಟೆಗೆ ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ನಾಪೋಕ್ಲು ಕಾಫಿ ಬೆಳೆಗಾರ ಮೂವೆರ ಜಿ. ಬೆಳ್ಯಪ್ಪ, ಎನ್‌ಪಿಆರ್‌ಎ ಮಾಜಿ ಅಧ್ಯಕ್ಷ ಕುಂಡAಡ ಜಯಾ ಕರುಂಬಯ್ಯ, ಸಿಎನ್‌ಸಿ ಅಧ್ಯಕ್ಷ ನಂದಿನೆರವAಡ ಯು. ನಾಚಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸಂಜೆ ೪ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎನ್‌ಪಿಆರ್‌ಎ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ವಹಿಸಲಿದ್ದು, ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರುಗಳಾದ ಶಾಂತೆಯAಡ ವೀಣಾ ಅಚ್ಚಯ್ಯ, ಮಂಡೆಪAಡ ಸುನಿಲ್ ಸುಬ್ರಮಣಿ, ಕರ್ನಾಟಕ ಸರ್ಕಾರ ಮಾಜಿ ಅಡ್ವೊಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರುಗಳು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಎನ್‌ಪಿಆರ್‌ಎ ಅಧ್ಯಕ್ಷ ಬಾಚಮಂಡ ಲವಚಿಣ್ಣಪ್ಪ, ಉಪಾಧ್ಯಕ್ಷ ಅರೆಯಡ ಎಂ. ರತ್ನಪೆಮ್ಮಯ್ಯ, ಕಾರ್ಯದರ್ಶಿ ಚಿಯಕಪೂವಂಡ ಎಂ. ಅಪ್ಪಚ್ಚು, ಜಂಟಿಕಾರ್ಯದರ್ಶಿ ಕೇಟೋಳಿರ ಹರೀಶ್ ಪೂವಯ್ಯ, ಖಜಾಂಚಿ ಕರವಂಡ ಬೆಲ್ಲು ಬೆಳ್ಯಪ್ಪ, ನಿರ್ದೇಶಕ ಕುಂಡ್ಯೋಳAಡ ಬೋಪಣ್ಣ ಉಪಸ್ಥಿತರಿದ್ದರು.