ರೆಕಾರ್ಡ್ನಲ್ಲಿ ಸ್ಥಾನ ಪಡೆದ ವೈಷ್ಣವಿ

ಮಡಿಕೇರಿ, ಅ. ೨೦: ಗರಿಷ್ಠ ಸಂಖ್ಯೆಯ ಪ್ರಾಣಿಗಳು ಮತ್ತು ಅವುಗಳ ಮರಿಗಳನ್ನು ಗುರುತಿಸಿ ಹೇಳುವುದರ ಮೂಲಕ ವೈಷ್ಣವಿ ಕೆ.ಡಿ. ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದ್ದಾಳೆ. ಈಕೆ ಕೂಡಕಂಡಿ ಓಂಶ್ರೀ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿಯ ಪ್ರಾಧ್ಯಾಪಕ ಡಾ. ದಯಾನಂದ. ಕೆ.ಸಿ. ಅವರ ಪುತ್ರಿ. ಈಕೆ ಮಡಿಕೇರಿ ಸಂತ ಜೋಸೆಫರ ಶಾಲೆಯ ಒಂದನೆ ತರಗತಿಯ ವಿದ್ಯಾರ್ಥಿನಿ.