ಮಡಿಕೇರಿ, ಅ. ೧೯: ಜಿಲ್ಲೆಗೆ ಭೇಟಿ ನೀಡಿದ್ದ ರಾಷ್ಟಿçÃಯ ಬುಡಕಟ್ಟು ಆಯೋಗವನ್ನು ಭೇಟಿ ಮಾಡಿ ಕೊಡವ ಬುಡಕಟ್ಟು ಹಕ್ಕೋತ್ತಾಯದ ಗಂಭೀರತೆ ಬಗ್ಗೆ ಮನವರಿಕೆ ಮಾಡಿ ಮನವಿ ಸಲ್ಲಿಸಲಾಯಿತು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಿನ್ನೆ ದಿನ ಎಎನ್‌ಸಿ ನಿಯೋಗ ಪೊನ್ನಂಪೇಟೆ ಅತಿಥಿ ಗೃಹದಲ್ಲಿ ದೆಹಲಿಯ ರಾಷ್ಟಿçÃಯ ಬುಡಕಟ್ಟು ಆಯೋಗದ (ಎನ್‌ಸಿಎಸ್‌ಟಿ) ಸದಸ್ಯ ಮಾಜಿ ಸಂಸದ ಅನಂತನಾಯ್ಕ್, ಆಯೋಗದ ಕಾರ್ಯದರ್ಶಿ ತವಾಂಗ್ ಸಿಂಗ್, ಡೆಪ್ಯುಟಿ ಡೈರೆಕ್ಟರ್ ದುಬೆ, ಅಸಿಸ್ಟೆಂಟ್ ಡೈರೆಕ್ಟರ್ ವಿ. ಅಶೋಕ್‌ವರ್ಧನ್ ಅವರನ್ನು ಭೇಟಿ ಮಾಡಿತು.

ಬುಡಕಟ್ಟು ಪಂಗಡಕ್ಕೆ ಸೇರಿಸಲು ಅನುಸರಿಸುವ ಮಾನದಂಡವಾದ ಲೋಕೂರ್ ಸಮಿತಿಯ ವರದಿಯ ಶಿಫಾರಸ್ಸಿನನ್ವಯ ಗುರುತಿಸಲಾದ ೫ ಅರ್ಹತೆಗಳನ್ನು ಕೊಡವರು ಹೊಂದಿದ್ದಾರೆ.

೩ನಾಲ್ಕನೇ ಪುಟಕ್ಕೆ(ಮೊದಲ ಪುಟದಿಂದ) ಕೊಡವರ ಭಾಷೆ (ಕೊಡವತಕ್ಕ್), ಸಂಸ್ಕೃತಿ, ನಾಗರಿಕತೆ, ಬುಡಕಟ್ಟು ಪೂರ್ವಜತೆ, ಆಹಾರ ಪದ್ಧತಿ, ಆರಾಧನಾ ಪದ್ಧತಿ, ಬೇಟೆ, ಬಾಡಿಗೆ ಬಂಟತ್ವ, ಖಾಂದಾನ್, ವಕ್ಕ, ಸಮಾಜ ಸಂರಚನೆ, ಜೋಗುಳ, ಲಾವಣಿ, ಜನಪದ ಹಾಡು, ಹುಟ್ಟು-ಸಾವಿನ ಆಚಾರ ಪದ್ಧತಿಗಳು, ಸಪ್ತಪದಿ ಇಲ್ಲದ ಮದುವೆ, ೩೦ ರೀತಿಯ ಗೆಡ್ಡೆ ಗೆಣಸನ್ನು ಆಹಾರವಾಗಿ ಸೇವಿಸುವುದು, ಬಿದಿರು ಬೆತ್ತಗಳಿಂದ ಕರಕುಶಲ ನೈಪುಣ್ಯತೆ, ನಾಟಿ ಔಷಧಿ, ಹಬ್ಬಗಳು, ನೃತ್ಯ, ದೇವನೆಲೆಗಳಾದ ‘ಮಂದ್’ ಪ್ರತೀ ವಕ್ಕಕ್ಕೆ ಕ್ಯಾಕೊಳ ಮತ್ತು ತೂಟುಂಗಳ ಇತ್ಯಾದಿಗಳ ಮಹತ್ವವಿದ್ದು, ಇವುಗಳು ಬೇರೆಲ್ಲಿಯೂ ಕಂಡುಬಾರದ ವೈಶಿಷ್ಟö್ಯತೆಯನ್ನು ಹೊಂದಿವೆ. ಕೊಡವರ ಆನ್‌ಟೈಟಲ್ಡ್ ಪೂರ್ವಾರ್ಜಿತ ಪಾರಂಪರಿಕ ಕಮ್ಯುನಲ್ ಪ್ರಾಪರ್ಟಿ, ಜನಪದೀಯ ಸಾಂಪ್ರದಾಯಿಕ ಕಾಯ್ದೆ, ಸೂರ್ಯ-ಚಂದ್ರ, ಗುರು-ಕಾರೋಣ, ಪ್ರಕೃತಿ ದೇವಿ, ಭೂದೇವಿ, ಜಲದೇವಿಯ ಆರಾಧನೆಯೊಂದಿಗೆ ಶಸ್ತಾçಸ್ತç ಬಂದೂಕುಗಳನ್ನು ಧಾರ್ಮಿಕ ಸಂಸ್ಕಾರವೆAದು ಪೂಜಿಸುವ; ಗಂಡು ಮಗುವಿನ ಜನನದ ಸಂದರ್ಭ ಬಾನಿಗೆ ಗುಂಡು ಹಾರಿಸಿ ಸಂಭ್ರಮಿಸುವ ಮಗುವಿನ ನಾಮಕರಣದಂದು ಆ ಪುಟ್ಟ ಮಗುವಿನ ಕೈಗೆ ಸಣ್ಣ ಬಿಲ್ಲನ್ನು ನೀಡಿ ಮಗುವಿನ ಬೆರಳಿನಿಂದ ಬಾನಿಗೆ ಗುರಿಯಿಡುವ ವಿಶೇಷತೆಯ ವಿಶಿಷ್ಟ ಬುಡಕಟ್ಟು ಕೊಡವರು. ಗುಡ್ಡಗಾಡು ಜನರು ಹೌದು, ಪರ್ವತವಾಸಿಗಳೂ ಹೌದು, ೮೪೨ ಖಾಂದಾನುಗಳನ್ನು ಹೊಂದಿರುವ ಕುಟುಂಬದ ಮುಖ್ಯಸ್ಥನ ಮಾರ್ಗದರ್ಶನದಲ್ಲಿ ನಡೆಯುವ ಅಪರೂಪದ ಬುಡಕಟ್ಟು ಸಮುದಾಯವೂ ಹೌದು ಎಂಬುದನ್ನು ಆಯೋಗದ ಪ್ರಮುಖರ ಗಮನಕ್ಕೆ ತರಲಾಯಿತು.

೧೮೮೧ ರಿಂದ ೧೯೩೧ರ ವರೆಗೆ ನಡೆಸಿದ ಎಲ್ಲಾ ಜನಗಣತಿಯಲ್ಲೂ ಬುಡಕಟ್ಟು ಸಮುದಾಯವೆಂದೇ ಗುರುತಿಸಲ್ಪಟ್ಟ ನೈಜ ಬೇಟೆಗಾರರು ಮತ್ತು ಬೇಟೆಯನ್ನೇ ಕಸುಬಾಗಿ ರೂಡಿಸಿಕೊಂಡ ಕೊಡವರನ್ನು ಬುಡಕಟ್ಟು ಪಟ್ಟಿಗೆ ಸೇರಿಸಲು ವಿಳಂಬ ನೀತಿ ಅನುಸರಿಸುತ್ತಿರುವುದೇಕೆ ಎಂಬ ಬಗ್ಗೆಯೂ ಸ್ಪಷ್ಪನೆ ಕೇಳಲಾಯಿತು ಎಂದು ನಾಚಪ್ಪ ಹೇಳಿದರು.

ಕೊಡವ ಸಮುದಾಯವನ್ನು ಸಂವಿಧಾನದ ೩೪೦ ಮತ್ತು ೩೪೨ನೇ ವಿಧಿ ಪ್ರಕಾರ ಬುಡಕಟ್ಟು ಪಟ್ಟಿಗೆ ಸೇರಿಸಬೇಕೆನ್ನುವ ಹಕ್ಕೊತ್ತಾಯ ಮುಂದಿರಿಸಿ ಕಳೆದ ಮೂರು ದಶಕಗಳಿಂದ ಕೊಡವರ ಸಾಕ್ಷಿ ಪ್ರಜ್ಞೆಯಾಗಿ ಶಾಂತಿಯುತ ಆಂದೋಲನ ರೂಪಿಸುತ್ತಾ ಬಂದಿರುವ ಸಿಎನ್‌ಸಿ ಅಹವಾಲನ್ನು ಮನ್ನಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡವರ ಬುಡಕಟ್ಟು ಲಕ್ಷಣಗಳನ್ನು ಗುರುತಿಸುವ ಸಲುವಾಗಿ ಕುಲಶಾಸ್ತç ಅಧ್ಯಯನ ನಡೆಸಲು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು (ಕೆಎಸ್‌ಟಿಆರ್‌ಐ) ಇವರಿಗೆ ೨೦೧೬ರಲ್ಲಿಯೇ ಜವಾಬ್ದಾರಿ ವಹಿಸಿ ಆದೇಶ ನೀಡಿತ್ತು.

ಆದರೆ ಪೂರ್ವಾಗ್ರಹ ಪೀಡಿತರಾದ ಸಂಸ್ಥೆಯ ನಿರ್ದೇಶಕರು ಅಧ್ಯಯನದ ದಿಕ್ಕನ್ನು ಸತತವಾಗಿ ತಪ್ಪಿಸುತ್ತಾ ಕುಲಶಾಸ್ತçದ ಬದಲು ಅಪ್ರಸ್ತುತವಾದ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನ ನಡೆಸಿ ನಕರಾತ್ಮಕ ವರದಿ ನೀಡುವ ಸಂಚನ್ನು ಅರಿತು ಸಿಎನ್‌ಸಿ ಈ ಅನ್ಯಾಯವನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯ ವಿಚಾರಣೆಯ ಅಂತಿಮ ಹಂತದ ವೇಳೆಗೆ ನಕಾರಾತ್ಮಕ ವರದಿ ನೀಡುವ ಮೂಲಕ ಕೊಡವರಿಗೆ ಅನ್ಯಾಯವೆಸಗುವುದರೊಂದಿಗೆ ಸರ್ಕಾರಿ ಆದೇಶವನ್ನು ಧಿಕ್ಕರಿಸಿ ಏಕಪಕ್ಷೀಯ ವರದಿ ನೀಡಲಾಯಿತು. ಆದರೆ ನಮ್ಮ ರಿಟ್ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ವರದಿಯಲ್ಲಿ ಲೋಪವಿದ್ದರೆ ಅರ್ಜಿದಾರರ ಆಕ್ಷೇಪಗಳನ್ನು ಪರಿಗಣಿಸಿ ನ್ಯಾಯಯುತವಾದ ವರದಿ ನೀಡಬೇಕು ಹಾಗೂ ಈ ವರದಿ ಅಂತಿಮವಲ್ಲ, ವರದಿಯಲ್ಲಿ ಸಂಪೂರ್ಣ ಲೋಪವಾಗಿದ್ದರೆ ಮತ್ತೆ ಮರು ಅಧ್ಯಯನ ನಡೆಸಬೇಕೆಂದು ಆದೇಶಿಸಿತ್ತು. ಈ ಆದೇಶದ ಪ್ರಕಾರ ೧೬-೯-೨೦೨೧ರಂದು ರಾಜ್ಯ ಸರ್ಕಾರದ ಬುಡಕಟ್ಟು ಮಂತ್ರಿ ಶ್ರೀರಾಮುಲು ಅವರನ್ನು ಕೂಡ ಭೇಟಿಯಾಗಿದ್ದ ವಿಚಾರವನ್ನು ಆಯೋಗದ ಗಮನಕ್ಕೆ ತರಲಾಯಿತು ಎಂದು ಹೇಳಿದರು.

ಕೊಡವರಿಗೆ ನ್ಯಾಯ ಒದಗಿಸುವ ಸಲುವಾಗಿ ಸಂವಿಧಾನದ ೩೩೮ಎ ಅಡಿಯಲ್ಲಿ ರಾಷ್ಟಿçÃಯ ಬುಡಕಟ್ಟು ಆಯೋಗ ಹೊಂದಿರುವ ತನ್ನ ವಿವೇಚನಾಧಿಕಾರವನ್ನು ಬಳಸಿ ಕೊಡವರ ಕುಲವರ್ಣನೀಯ ಬುಡಕಟ್ಟು ಲಕ್ಷಣಗಳನ್ನು ಗುರುತಿಸಲು ನೇರ ಕ್ರಮ ಕೈಗೊಳ್ಳಬೇಕೆಂದು ಆ ಮೂಲಕ ಕೊಡವ ಸಮುದಾಯವನ್ನು ಸಂರಕ್ಷಿಸಬೇಕು.

ಕೊಡವರ ನೈಸರ್ಗಿಕ ನ್ಯಾಯ ಹಾಗೂ ರಾಜ್ಯಾಂಗದತ್ತ ಹಕ್ಕುಗಳು ಕುಲಶಾಸ್ತçದ ಅಧ್ಯಯನದ ವಿಚಾರದಲ್ಲಿ ಕಸಿಯಲ್ಪಟ್ಟಿರುವುದರಿಂದ ಸಂವಿಧಾನದ ೩೩೮ಎ ವಿಧಿಯ ಅಧಿಕಾರವನ್ನು ಚಲಾಯಿಸುವುದರ ಮೂಲಕ ಕೊಡವರ ಬುಡಕಟ್ಟು ಸ್ಥಾನಮಾನದ ಬೇಡಿಕೆಯನ್ನು ಸಂವಿಧಾನಿಕವಾಗಿ ಸ್ಥಿರೀಕರಿಸಬೇಕೆಂದು ಸಿಎನ್‌ಸಿಯು ಬುಡಕಟ್ಟು ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟಿತು.

ನಿಯೋಗದಲ್ಲಿ ಹೈಕೋರ್ಟ್ ವಕೀಲರು, ಬುಡಕಟ್ಟು ಕುರುಬ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರೂ ಆದ ಲಕ್ಕವಳ್ಳಿ ಮಂಜುನಾಥ್, ಕಲಿಯಂಡ ಪ್ರಕಾಶ್, ಲೆ.ಕರ್ನಲ್ ಬಿ.ಎಂ. ಪಾರ್ವತಿ, ಅಳಮಂಡ ಜೈ, ಅಜ್ಕಿಕುಟ್ಟಿರ ಲೋಕೇಶ್, ಅರೆಯಡ ಗಿರೀಶ್, ಕಾಟುಮಣಿಯಂಡ ಉಮೇಶ್, ಮಂದಪAಡ ಮನೋಜ್, ಮತ್ತು ಕಿರಿಯಮಾಡ ಶರೀನ್ ಭಾಗವಹಿಸಿದ್ದರು ಎಂದು ನಾಚಪ್ಪ ಮಾಹಿಯಿತ್ತರು. ಗೋಷ್ಠಿಯಲ್ಲಿ ಸಿಎನ್‌ಸಿಯ ಮಂದಪAಡ ಮನೋಜ್, ಪುದಿಯೊಕ್ಕಡ ಕಾಶಿ, ಚಂಬAಡ ಜನತ್ ಉಪಸ್ಥಿತರಿದ್ದರು.