ಮಡಿಕೇರಿ, ಅ. ೧೯: ಅಖಿಲ ಭಾರತ ಸನ್ಯಾಸಿಗಳ ಸಂಘ ಮತ್ತು ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿಯ ನೇತೃತ್ವದಲ್ಲಿ ಸ್ವಚ್ಛ ಕಾವೇರಿ ಅಭಿಯಾನದ ಸಂಬAಧ ತಲಕಾವೇರಿ-ಪೂಂಪ್‌ಹಾರ್ ೧೧ ನೆಯ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆ ತಾ. ೨೩ರಂದು ತಲಕಾವೇರಿ ಕ್ಷೇತ್ರದಿಂದ ಚಾಲನೆಗೊಳ್ಳಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ. ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದ ಅವರು, ಕುಶಾಲನಗರದ ಕಾವೇರಿ ರಿವರ್ ಸೇವಾ ಟ್ರಸ್ಟ್ ಮತ್ತು ತಮಿಳುನಾಡಿನ ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ೨೦೧೦ ರಿಂದ ಜೀವನದಿ ಕಾವೇರಿಯ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಈ ಬಾರಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ಸಾಧು ಸಂತರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಯಾತ್ರೆ ತಾ. ೨೩ ರಂದು ಬೆಳಿಗ್ಗೆ ತಲಕಾವೇರಿ ಕ್ಷೇತ್ರದಲ್ಲಿ ಪೂಜೆ

(ಮೊದಲ ಪುಟದಿಂದ) ಸಲ್ಲಿಸಿದ ನಂತರ ಬೆಳಿಗ್ಗೆ ೯ ಗಂಟೆಗೆ ಚಾಲನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಅಂದು ತಲಕಾವೇರಿಯಲ್ಲಿ ವೀರಾಜಪೇಟೆ ಅರಮೇರಿ ಮಠಾಧೀಶರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ತಲಕಾವೇರಿಯಿಂದ ತಮಿಳುನಾಡಿನ ಪೂಂಪ್‌ಹಾರ್ ಕಡೆಗೆ ಹೊರಡುವ ಯಾತ್ರೆಗೆ ಗಣ್ಯರು ಚಾಲನೆ ನೀಡಲಿದ್ದಾರೆ.

ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರು ಯಾತ್ರೆಯ ರಥಕ್ಕೆ ಚಾಲನೆ ನೀಡುವರು ಎಂದು ಮಾಹಿತಿ ನೀಡಿದರು. ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್ ತನಕ ಸಾಗಲಿರುವ ಈ ಜಾಗೃತಿ ಯಾತ್ರೆಯಲ್ಲಿ ಕಾವೇರಿ ನದಿ ತಟದ ಉದ್ದಕ್ಕೂ ಜನರಲ್ಲಿ ನದಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಲಿದೆ.

ಯಾತ್ರೆ ಹಿನ್ನೆಲೆಯಲ್ಲಿ ತಮಿಳುನಾಡಿನ ಪೇರೂರು ಅಧೀನಂ ಸಂಸ್ಥಾನದ ಹಿರಿಯ ಶ್ರೀಗಳಾದ ಮರುತಾಚಲ ಅಡಿಗಳವರು, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಂಸ್ಥಾಪಕ ಶ್ರೀ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಅಖಿಲ ಭಾರತ ಸನ್ಯಾಸಿ ಸಂಘದ ಉಪಾಧ್ಯಕ್ಷ ಶ್ರೀ ರಮಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ತಲಕಾವೇರಿಯಿಂದ ಚಾಲನೆಗೊಳ್ಳುವ ಯಾತ್ರೆ ಕುಶಾಲನಗರ ಮೂಲಕ ಸಾಗಲಿದೆ.

ತಾ. ೨೩ ರಂದು ಸಂಜೆ ೪ ಗಂಟೆಗೆ ಕುಶಾಲನಗರ ಕಾವೇರಿ ಆರತಿ ಕ್ಷೇತ್ರದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೀವನದಿ ಕಾವೇರಿಗೆ ವಿಶೇಷ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಚಂದ್ರಮೋಹನ್ ತಿಳಿಸಿದರು.

ಆ ನಂತರ ಯಾತ್ರಾ ತಂಡ ಕೂಡಿಗೆ ಕಣಿವೆ ಮೂಲಕ ಜಿಲ್ಲೆಯ ಗಡಿ ದಾಟಿ ರಾಮನಾಥಪುರದತ್ತ ಸಾಗಲಿದೆ. ತಂಡ ರಾಮನಾಥಪುರದಲ್ಲಿ ವಾಸ್ತವ್ಯ ಹೂಡಿ ೨೪ ರಂದು ಬೆಳಿಗ್ಗೆ ಶ್ರೀರಂಗಪಟ್ಟಣ ತಲುಪಿ ರಾಮನಗರ ಮಾರ್ಗವಾಗಿ ತಮಿಳುನಾಡಿನ ಕಡೆಗೆ ಸಾಗಿ ನವೆಂಬರ್ ೧೧ ರಂದು ಪೂಂಪ್‌ಹಾರ್‌ನಲ್ಲಿ ಯಾತ್ರೆ ಸಮಾರೋಪಗೊಳ್ಳಲಿದೆ.

ತಲಕಾವೇರಿ ಕ್ಷೇತ್ರದಿಂದ ಪೂಜೆ ಸಲ್ಲಿಸಿ ೫ ಕಳಸಗಳಲ್ಲಿ ಒಯ್ಯುವ ಪವಿತ್ರ ಕಾವೇರಿ ತೀರ್ಥವನ್ನು ತಮಿಳುನಾಡು ಪೂಂಪ್‌ಹಾರ್ ಬಳಿ ಕಾವೇರಿ ನದಿ ಸಂಗಮವಾಗುವ ಬಂಗಾಳಕೊಲ್ಲಿ ಸಮುದ್ರದಲ್ಲಿ ವಿಸರ್ಜನೆ ಮಾಡುವ ಕಾರ್ಯ ನಡೆಯಲಿದೆ.

ಕಾವೇರಿ ಜಾಗೃತಿ ಯಾತ್ರೆಯಲ್ಲಿ ತಮಿಳುನಾಡಿನ ಮತ್ತು ಕರ್ನಾಟಕ ರಾಜ್ಯದ ಸಾಧುಸಂತರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ನಮಾಮಿ ಗಂಗೆ ಸಂಚಾಲಕರಾದ ರೀನಾ ಪ್ರಕಾಶ್ ಮಾತನಾಡಿ, ಕಾವೇರಿ ಕಲುಷಿತ ತಪ್ಪಿಸಲು ಹಾಗೂ ನದಿ ಅಭಿವೃದ್ಧಿಗೆ ಯೋಜನೆ ರೂಪಿಸಲು ಕೋರಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಧ್ಯದಲ್ಲಿಯೇ ನಿಯೋಗ ತೆರಳಲಾಗುವುದು ಈಗಾಗಲೇ ಮುಖ್ಯಮಂತ್ರಿಗಳು ಜೀವನದಿ ಕಾವೇರಿಯ ನದಿ ಸಂರಕ್ಷಣೆ ಬಗ್ಗೆ ಯೋಜನೆ ರೂಪಿಸುವ ಕುರಿತು ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಕಾವೇರಿ ರಿವರ್ ಸೇವಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಮಂಡೇಪAಡ ಬೋಸ್ ಮೊಣ್ಣಪ್ಪ ಮಾತನಾಡಿ, ನದಿ ಮಲಿನಗೊಳ್ಳದಂತೆ ಎಚ್ಚರ ವಹಿಸಬೇಕು. ಎಲ್ಲ ಸಂಘ ಸಂಸ್ಥೆಗಳು ನದಿ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುವಂತೆ ಕರೆ ನೀಡಿದರು. ಸಮಿತಿಯ ಗೌರವ ಸಲಹೆಗಾರ ಚೆಯ್ಯಂಡ ಸತ್ಯ ಗಣಪತಿ ಮಾತನಾಡಿ ಯಾವುದೇ ರೀತಿಯಲ್ಲಿ ನದಿಯ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಪ್ರತಿಯೊಬ್ಬರೂ ಎಚ್ಚರವಹಿಸ ಬೇಕಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕಾವೇರಿ ರಿವರ್ ಸೇವಾ ಟ್ರಸ್ಟ್ನ ಉಪಾಧ್ಯಕ್ಷರುಗಳಾದ ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದನ್ ಉಪಸ್ಥಿತರಿದ್ದರು.