ಮಡಿಕೇರಿ, ಅ. ೨೦: ಕೊಡಗು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ನವೆಂಬರ್ ೬ ಮತ್ತು ೭ರಂದು ಗೋಣಿಕೊಪ್ಪ ಕಾಲ್ಸ್ನ ಅಥ್ಲೆಟಿಕ್ಸ್ ಮೈದಾನದಲ್ಲಿ ಜಿಲ್ಲಾಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಏರ್ಪಡಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಂ.ವಿ. ಲೋಕೇಶ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ೧೨, ೧೪, ೧೬ ಮತ್ತು ೧೮ ವರ್ಷದ ಬಾಲಕ ಬಾಲಕಿಯರಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಭಾರದ ಗುಂಡು ಎಸೆತ, ಎತ್ತರ ಜಿಗಿತ, ಉದ್ದ ಜಿಗಿತ, ಜಾವೆಲಿನ್ ಹಾಗೂ ಡಿಸ್ಕಸ್ ಎಸೆತ ಮತ್ತಿತರ ಕ್ರೀಡೆಗಳು ನಡೆಯಲಿದ್ದು, ಭಾಗವಹಿಸುವ ಸ್ಪರ್ಧಿಗಳು ಆಧಾರ್ ಕಾರ್ಡ್ ಮತ್ತು ವಯಸ್ಸಿಗೆ ಸಂಬAಧಪಟ್ಟ ದಾಖಲಾತಿಗಳನ್ನು ಹಾಜರುಪಡಿಸಬೇಕು.
ಯುಐಡಿ ಸಂಖ್ಯೆ ಹೊಂದಿರುವವರು ಅದನ್ನು ಹಾಜರುಪಡಿಸಬೇಕು ಪ್ರತಿಯೊಬ್ಬ ಸ್ಪರ್ಧಿ ೨ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಬಹುದಾಗಿದೆ. ಪ್ರವೇಶ ಉಚಿತವಾಗಿದ್ದು, ೧೪ ಮತ್ತು ೧೬ ವರ್ಷದವರ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ೧೪ ಸ್ಪರ್ಧಿಗಳನ್ನು ರಾಷ್ಟçಮಟ್ಟದ ಚಾಂಪಿಯನ್‌ಶಿಪ್‌ಗೆ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ೯೯೮೦೫೨೩೪೪೩, ೮೨೯೬೫೦೮೮೭೮ ದೂರವಾಣಿಯನ್ನು ಸಂಪರ್ಕಿಸಬಹುದು. ಹೆಸರು ನೋಂದಣಿಗೆ ನ. ೧ ಕೊನೆಯ ದಿನಾಂಕವಾಗಿದೆ. ಣತಿiಟಿಟಞeಣomಥಿಚಿಣhಛಿoಚಿಛಿh@gmಚಿiಟ.ಛಿom ವಿಳಾಸದಲ್ಲೂ ಮಾಹಿತಿ ಪಡೆಯಬಹುದು ಎಂದು ಲೋಕೇಶ್ ಹೇಳಿದರು.
ಅಸೋಸಿಯೇಷನ್ ಉಪಾಧ್ಯಕ್ಷ ರವಿ ತಮ್ಮಯ್ಯ ಮಾತನಾಡಿ ಜಿಲ್ಲಾ ಕ್ರೀಡಾಂಗಣದ ದುರವಸ್ಥೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಿ ಸರಿಪಡಿಸಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಎ. ಜಿ. ಜನಾರ್ಧನ್, ಸದಸ್ಯ ಎಂ.ಬಿ. ರವಿ, ಕಾಲ್ಸ್ನ ಹಾಕಿ ಕೋಚ್ ಎ.ಕೆ. ಚೇತನ್ ಉಪಸ್ಥಿತರಿದ್ದರು.