ಶಾಸಕ ಕೆ.ಜಿ. ಬೋಪಯ್ಯ

ವೀರಾಜಪೇಟೆ, ಅ. ೨೦: ವೀರಾಜಪೇಟೆ ತಾಲೂಕಿನ ಕೋಟೆಕೊಪ್ಪ ಹಾಗೂ ಪುದುಕೋಟೆ ಗ್ರಾಮಕ್ಕೆ ಕೇಂದ್ರ ಸರಕಾರದ ಜಲಜೀವನ್ ಯೋಜನೆಯಲ್ಲಿ ರೂ. ೮೫ ಲಕ್ಷ ಅನುದಾನದಲ್ಲಿ ಪ್ರತಿ ಮನೆ ಮನೆಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡುವುದಾಗಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಸಮೀಪದ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಕೊಪ್ಪ-ಪುದುಕೋಟೆ ರಸ್ತೆಗೆ ೨೦೧೯-೨೦ನೇ ಸಾಲಿನ ಮಳೆ ಪರಿಹಾರ ಕಿರುನೀರು ಯೋಜನೆಯಲ್ಲಿ ರೂ. ೨೦ ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ತಡೆಗೋಡೆ ಉದ್ಘಾಟನೆ ಹಾಗೂ ಪುದುಕೋಟೆ ಗ್ರಾಮದ ದೇವಸ್ಥಾನ ಬಳಿಯ ರಸ್ತೆ ಕುಸಿದಿರುವುದಕ್ಕೆ ಮಳೆಹಾನಿ ಪರಿಹಾರದ ರೂ. ೨೦ ಲಕ್ಷ ಅನುದಾನದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಕೋಟೆಕೊಪ್ಪದ ಅಂಗನವಾಡಿ ಕೇಂದ್ರದ ಬಳಿ ರೂ. ೧೦ ಲಕ್ಷ ಅನುದಾನದಲ್ಲಿ ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ಯೋಜನೆ ಉದ್ಘಾಟಿಸಿದ ಶಾಸಕ ಬೋಪಯ್ಯ ಅವರು ಅಂಗನವಾಡಿ ಯಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮದಲ್ಲಿ ಮನೆ ಇಲ್ಲದ ಬಡ ಕುಟುಂಬಗಳಿಗೆ ಸರಕಾರ ಮನೆ ಕಟ್ಟಿ ಕೊಡುವ ಯೋಜನೆ ಇದೆ. ಎಲ್ಲಾ ಗ್ರಾಮಗಳ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಗೊಳಿಸಲಾಗುವುದು ಎಂದರು.

ಈ ವೇಳೆ ಅಲ್ಲಿನ ಗ್ರಾಮಸ್ಥರು ಅಂಗನವಾಡಿ ಕೇಂದ್ರ ಬೀಳುವ ಸ್ಥಿತಿಯಲ್ಲಿದೆ. ದುರಸ್ತಿಪಡಿಸುವಂತೆ ಶಾಸಕರನ್ನು ಕೋರಿದಾಗ ಅಧಿಕಾರಿಗಳೊಂದಿಗೆ ಚರ್ಚಿಸಿ ಸರಿಪಡಿಸುವ ಭರವಸೆ ನೀಡಿದರು.

ಈ ಸಂದರ್ಭ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಗೆ ಬರುವ ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ಸಾಲದು. ಶಾಸಕರು ಸರಕಾರದಿಂದ ಹೆಚ್ಚಿನ ಅನುದಾನ ಒದಗಿಸಿ ಕೊಡುವಂತೆ ಪಂಚಾಯಿತಿಯ ಸದಸ್ಯರುಗಳು ಶಾಸಕ ಬೋಪಯ್ಯ ಅವರಿಗೆ ಮನವಿ ಸಲ್ಲಿಸಿದರು.

ಆ ಭಾಗದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿ ಸುಬ್ರಮಣಿ ಮಾತನಾಡಿ, ವೀರಾಜಪೇಟೆ ಕೊಡವ ಸಮಾಜದ ಬಳಿಯಿಂದ ಚೆಂಬೆ ಬೆಳ್ಳೂರು ಗ್ರಾಮದವರೆಗೆ ರಸ್ತೆ ಡಾಂಬ ರೀಕರಣ ಮತ್ತು ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. ೨.೫ ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಯಲಿದೆ.

ಕೋಟೆಕೊಪ್ಪಕ್ಕೆ ಕುಡಿಯುವ ನೀರಿನ ಯೋಜನೆಗೆ ರೂ. ೧೦ ಲಕ್ಷ, ಪುದಕಾಲೋನಿಗೆ ರೂ. ೧೦ ಲಕ್ಷ, ದೇವಣಗೇರಿ ಈಶ್ವರ ದೇವಸ್ಥಾನ ಬಳಿ ರೂ. ೮ ಲಕ್ಷ ಹಾಗೂ ಚೆಂಬೆಬೆಳ್ಳೂರು ಈಶ್ವರ ದೇವಸ್ಥಾನಕ್ಕೆ ರೂ. ೩ ಲಕ್ಷದ ೭೫ ಸಾವಿರ ಅನುದಾನವನ್ನು ಕುಡಿಯುವ ನೀರಿನ ಯೋಜನೆಗೆ ಬಳಸುವುದಾಗಿ ತಿಳಿಸಿದರು.

ಗ್ರಾಮದ ವಿ.ಎಸ್.ಎಸ್.ಎನ್. ನಿರ್ದೇಶಕ ವಿ.ಎಲ್. ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉದ್ಘಾಟನೆ ಮತ್ತು ಭೂಮಿಪೂಜೆ ಸಂದರ್ಭ ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೂಕೊಂಡ ಉಮೇಶ್, ಸದಸ್ಯರಾದ ವಿ.ಪಿ. ಡಾಲು, ಮಂಡೆಪAಡ ಚಿಟ್ಟಿಯಪ್ಪ, ಟಿ.ಡಿ. ವಾಸು, ಹೆಚ್.ಟಿ. ಲಲಿತ, ಹೆಚ್.ಎಸ್. ಜಾನಕಿ, ಗ್ರಾಮದ ಹಿರಿಯರಾದ ವಿ.ಬಿ. ಅಪ್ಪಣ್ಣ, ಮಲ್ಲಂಡ ಮದು ದೇವಯ್ಯ, ಸುರೇಶ್, ನಾಗೇಶ್, ವಿ.ಬಿ. ಧಶರತ್ ದೇವಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.೪