ಮಡಿಕೇರಿ, ಅ. ೧೮: ಹಾಕಿ ಇಂಡಿಯಾ ವತಿಯಿಂದ ಜಾರ್ಖಂಡ್ನಲ್ಲಿ ಏರ್ಪಡಿಸಲಾಗಿರುವ ರಾಷ್ಟಿçÃಯ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಹಾಕಿ ಕರ್ನಾಟಕ ತಂಡದಲ್ಲಿ ಕೊಡಗು ಜಿಲ್ಲೆಯ ಹಾಕಿ ಆಟಗಾರ್ತಿಯರು ಸಿಂಹಪಾಲು ಪಡೆದುಕೊಂಡಿದ್ದಾರೆ. ತಂಡದ ವ್ಯವಸ್ಥಾಪಕಿ ಸೇರಿದಂತೆ ೧೧ ಮಂದಿ ಕೊಡಗಿನವರಿದ್ದಾರೆ.
ಒಟ್ಟು ೧೮ ಮಂದಿ ಆಟಗಾರ್ತಿಯರನ್ನೊಳಗೊಂಡ ತಂಡದಲ್ಲಿ ೧೦ ಮಂದಿ ಆಟಗಾರ್ತಿಯರು ಮೈಸೂರು ಡಿವೈಇಎಸ್ ಹಾಸ್ಟೆಲ್ನವರಾದರೆ ೮ ಮಂದಿ ಮಡಿಕೇರಿ ಸಾಯಿ ಹಾಸ್ಟೆಲ್ನವರಾಗಿದ್ದಾರೆ. ಮೈಸೂರಿನ ಹಾಸ್ಟೆಲ್ನಲ್ಲಿ ತರಬೇತಿ ಪಡೆಯುತ್ತಿರುವ ಎಸ್. ಆದಿರ, ಬಾರಿಕೆ ಜೀವಿತ, ಹೆಚ್.ಎಸ್. ಜಾಹ್ನವಿ, ಸಿ.ಕೆ. ಪ್ರಗತಿ ಕೊಡಗು ಜಿಲ್ಲೆಯವರಾಗಿದ್ದು, ಇನ್ನುಳಿದಂತೆ ಜಿ. ಕಾವ್ಯ, ಕೆ.ಎಸ್. ಅನ್ನಪೂರ್ಣ, ಡಿ.ಎನ್. ತೇಜಸ್ವಿನಿ, ಚಂದನ ಜೆ. ಗೌಡ, ಎಸ್.ಎಸ್. ನಿಶು, ಸಿ.ಎಂ. ಸಹನ ಅವರುಗಳು ಆಯ್ಕೆಯಾಗಿದ್ದಾರೆ.
(ಮೊದಲ ಪುಟದಿಂದ)
ಮಡಿಕೇರಿ ಸಾಯಿ ಹಾಸ್ಟೆಲ್ನಿಂದ ಆಯ್ಕೆಯಾದವರ ಪೈಕಿ ಪಾಂಡAಡ ದೇಚಮ್ಮ, ಪೊನ್ನಿಮಾಡ ಶಿಲ್ಪ, ಬಾದುಮಂಡ ಶಯ, ಕೇಚೆಟ್ಟಿರ ಪಾರ್ವತಿ, ಹೆಚ್.ಪಿ. ಸಿಂಚನ, ಹೆಚ್.ಜಿ. ಧನುಶ್ರೀ ಕೊಡಗಿನವರಾ ಗಿದ್ದು, ಇನ್ನುಳಿದಂತೆ ಎಸ್.ಪಿ. ಲಿಖಿತ, ಲೀಲಾವತಿ ಬಿ. ಕೊಪ್ಪದ್ ಆಯ್ಕೆಯಾಗಿದ್ದಾರೆ.
ತಂಡದ ವ್ಯವಸ್ಥಾಪಕರಾಗಿ ಕಂಬೀರAಡ ರಾಖಿ ಪೂವಣ್ಣ ಆಯ್ಕೆಯಾಗಿದ್ದು, ತರಬೇತುದಾರರಾಗಿ ನಾಗಲಿಂಗಸ್ವಾಮಿ ಕಾರ್ಯನಿರ್ವಹಿ ಸುತ್ತಿದ್ದಾರೆ. ಪಂದ್ಯಾವಳಿಯು ತಾ. ೨೦ ರಿಂದ ಆರಂಭಗೊಳ್ಳಲಿದ್ದು, ಈಗಾಗಲೇ ತಂಡ ಜಾರ್ಖಂಡ್ ತಲುಪಿದೆ.