ಉತ್ತರಾಖಂಡ್‌ನಲ್ಲಿ ಧಾರಾಕಾರ ಮಳೆ-ಮೃತರ ಸಂಖ್ಯೆ ೧೬ಕ್ಕೆ ಏರಿಕೆ

ಡೆಹ್ರಾಡೂನ್, ಅ. ೧೯: ಕಳೆದೆರಡು ದಿನಗಳಿಂದ ಉತ್ತರಾಖಂಡ್ ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪ್ರವಾಹ, ಭೂ ಕುಸಿತದಿಂದಾಗಿ ಮೃತಪಟ್ಟವರ ಸಂಖ್ಯೆ ೧೬ಕ್ಕೆ ಏರಿಕೆಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಚಾರ್‌ದಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂದು ಬೆಳಿಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ತಲೆದೋರಿಸುವ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ರಾಜ್ಯದಲ್ಲಿನ ಮಳೆ ಪರಿಸ್ಥಿತಿ ಬಗ್ಗೆ ಪ್ರಧಾನಿ ಮಾಹಿತಿ ಪಡೆದಿದ್ದು, ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲಿದೆ ಎಂಬ ಆಶ್ವಾಸನೆ ನೀಡಿದ್ದೇನೆ. ಮೂರು ಹೆಲಿಕಾಫ್ಟರ್‌ಗಳೊಂದಿಗೆ ನೆರವು ನೀಡುವಂತೆ ಭಾರತೀಯ ಸೇನೆಯನ್ನು ಕೇಳಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ನೈನಿತಾಲ್ ಜಿಲ್ಲೆಯ ಮುಕ್ತೇಶ್ವರ ಹಳ್ಳಿಯ ಚೌಕೌಟ ಬಳಿ ನಾಲ್ವರು ಮೃತಪಟ್ಟಿದ್ದು, ರಾಜ್ಯದಾದ್ಯಂತ ಭೂ ಕುಸಿತದಿಂದಾಗಿ ಸೋಮವಾರದವರೆಗೂ ಆರು ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು. ೧೩ ಜಿಲ್ಲೆಯಾದ್ಯಂತ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ೩೪ ತಂಡಗಳನ್ನು ರಾಜ್ಯ ಸರ್ಕಾರ ಈಗಾಗಲೇ ನಿಯೋಜಿಸಿದೆ. ಈ ಮಧ್ಯೆ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ರಾಷ್ಟçಪತಿ ಪ್ರಣವ್ ಮುಖರ್ಜಿ ಅವರ ಮಗಳು ಶರ್ಮಿಷ್ಠಾ ಮುಖರ್ಜಿ ರಾಣಿಖೇಟ್ ಬಳಿ ಪ್ರವಾಹದಲ್ಲಿ ಸಿಲುಕಿಕೊಂಡಿರುವುದಾಗಿ ಟ್ವೀಟ್ ಮಾಡಿದ್ದಾರೆ. ರಾಣಿಖೇಟ್ ಬಳಿ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಬೆಳಿಗ್ಗೆಯಿಂದ ವಿದ್ಯುತ್ ಇಲ್ಲ, ದೊಡ್ಡದಾದ ಮರಗಳು ರಸ್ತೆ ಮೇಲೆ ಉರುಳಿ ಬಿದ್ದಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಮುಂದಿನ ಕೆಲ ದಿನಗಳವರೆಗೂ ವಾಪಸ್ ಮರಳದಂತಾಗಿದೆ ಎಂದು ಬರೆದುಕೊಂಡಿದ್ದಾರೆ.

ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಯೋಧರು

ಶ್ರೀನಗರ, ಅ. ೧೯: ಪಾಕಿಸ್ತಾನದಲ್ಲಿ ತರಬೇತಿ ಪಡೆದ ಆರು ಭಯೋತ್ಪಾದಕರು ಪಾಕ್ ಬೆಂಬಲಿತ ಉಗ್ರಗಾಮಿ ಗುಂಪು ಲಷ್ಖರ್-ಎ-ತೊಯ್ಬಾದ ಆರು ಸಶಸ್ತç ಸಜ್ಜಿತ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಕಾಶ್ಮೀರ ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಯಲು ಉಗ್ರರು ಯೋಜಿಸಿದ್ದರು ಎಂದು ವರದಿಯಾಗಿದೆ. ರಾಜೌರಿ ಸೆಕ್ಟರ್‌ನ ದಟ್ಟಾರಣ್ಯದಲ್ಲಿ ೧೬ ಕಾರ್ಪ್ಸ್ ಕಮಾಂಡರ್ ಯೋಧರ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿ ನಡೆದಿದ್ದು, ಆರು ಉಗ್ರರು ಭಾರತೀಯ ಯೋಧರ ಗುಂಡೇಟಿಗೆ ಬಲಿಯಾಗಿದ್ದಾರೆ. ರಾಜೌರಿ ಅರಣ್ಯದಲ್ಲಿ ೯ ಭಾರತೀಯ ಯೋಧರನ್ನು ಕಳೆದುಕೊಂಡ ನಂತರ ಸಿಡಿಎಸ್ ಜನರಲ್ ಬಿಪಿನ್ ರಾವತ್ ತಾ. ೧೭ ರಂದು ಆ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಆ ಪ್ರದೇಶದಲ್ಲಿ ಉಗ್ರ-ವಿರೋಧಿ ಕಾರ್ಯಾಚರಣೆಗಳು ಮತ್ತು ಶೋಧಗಳು ತೀವ್ರಗೊಂಡಿದ್ದವು. ಪಾಕಿಸ್ತಾನದಿಂದ ಒಂಬತ್ತರಿAದ ೧೦ ಲಷ್ಕರ್ ಉಗ್ರರು ಕಳೆದ ಎರಡು ಮೂರು ತಿಂಗಳಲ್ಲಿ ರಾಜೌರಿ-ಪುಂಚ್ ಜಿಲ್ಲೆಯ ಗಡಿಯಲ್ಲಿ ಕಾಡಿನೊಳಗೆ ನುಸುಳಿದ್ದಾರೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಹೆಚ್ಚಿನ ಉಗ್ರರು ಒಳನುಸುಳಲು ಕಾಯುತ್ತಿದ್ದಾರೆ ಎಂದು ವರದಿಯಾಗಿದೆ.

ಚೀನಾ ಸೇನಾ ಪಡೆಯ ಚಟುವಟಿಕೆ-ಭಾರತೀಯ ಸೇನೆ ತೀವ್ರ ನಿಗಾ

ದೆಹಲಿ, ಅ. ೧೯: ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾ ಸೇನಾ ಪಡೆಯ ಚಟುವಟಿಕೆ ಹೆಚ್ಚಾಗಿದ್ದು, ಅಲ್ಲಿ ಭಾರತೀಯ ಸೇನೆ ತೀವ್ರ ನಿಗಾವಹಿಸಿದೆ ಎಂದು ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಮಂಗಳವಾರ ಹೇಳಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಡೆಸುವ ವಾರ್ಷಿಕ ತರಬೇತಿ ಸಮರಾಭ್ಯಾಸ, ಚಟುವಟಿಕೆಗಳ ಮಟ್ಟದಲ್ಲಿ ಸ್ವಲ್ಪ ಏರಿಕೆ ಕಂಡುಬAದಿದೆ. ಆದರೆ ಅದು ಕೇವಲ ಆಳವಾದ ಪ್ರದೇಶಗಳಲ್ಲಿ ಮಾತ್ರ ನಡೆಯುತ್ತಿವೆೆ. ಪಿಎಲ್‌ಎಯ ಕೆಲವು ಮೀಸಲು ಪಡೆಗಳು ಉಳಿದುಕೊಂಡಿದ್ದು, ಅವರು ಅಲ್ಲಿ ಗಸ್ತು ತಿರುಗುತ್ತಿದ್ದಾರೆ. ಹಾಗಾಗಿ ನಾವು ಎಲ್‌ಎಸಿ ಮತ್ತು ಆಳದ ಪ್ರದೇಶಗಳಲ್ಲಿ ನಮ್ಮ ಕಣ್ಗಾವಲನ್ನು ಹೆಚ್ಚಿಸಿದ್ದೇವೆ ಎಂದು ಲೆಫ್ಟಿನೆಂಟ್ ಜನರಲ್ ಪಾಂಡೆ ಹೇಳಿದ್ದಾರೆ. ಪೂರ್ವ ಸೈನ್ಯದ ಕಮಾಂಡರ್ ಪ್ರಕಾರ, ಎಲ್‌ಎಸಿ ಬಳಿ ಎರಡೂ ಕಡೆಯವರು ಮೂಲಸೌಕರ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಇದು ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತಿವೆÉ. ಈಗಾಗಲೇ ನಿಯೋಜನೆಗೊಂಡಿರುವ ಗಡಿ ರಕ್ಷಣಾ ಪಡೆಗಳಲ್ಲಿ ಅಲ್ಪ ಹೆಚ್ಚಳ ಕಂಡುಬAದಿದೆ. ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ವಾಸ್ತವ ನಿಯಂತ್ರಣ ರೇಖೆಯಲ್ಲಿ ಸೇನೆಯನ್ನು ಹೆಚ್ಚಿಸುವುದು ಮುಖ್ಯ ಗುರಿಯಾಗಿದೆ ಎಂದಿದ್ದಾರೆ.

ಸೆಲ್ಲರ್‌ಗೆ ಬಿದ್ದು ಬಾಲಕ ದುರ್ಮರಣ

ಬೆಂಗಳೂರು, ಅ. ೧೯: ನಗರದ ಕೆಜಿ ಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಸೆಲ್ಲರ್‌ಗೆ ಬಿದ್ದು ೧೪ ವರ್ಷದ ಬಾಲಕ ಮೃತಪಟ್ಟಿದ್ದಾನೆ. ಸೆಲ್ಲರ್‌ಗೆ ಬಿದ್ದು ಮೃತಪಟ್ಟ ಬಾಲಕನನ್ನು ೧೪ ವರ್ಷದ ಚಂದ್ರು ಎಂದು ಗುರುತಿಸಲಾಗಿದೆ. ಆಟ ವಾಡುತ್ತಿದ್ದಾಗ ಆಯತಪ್ಪಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಬಾಲಕನ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಾಗಿದೆ ಬೆಂಗಳೂರಿನಲ್ಲಿ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂಸಾಚಾರ-ಇAದು ಸುಪ್ರೀಂನಲ್ಲಿ ವಿಚಾರಣೆ

ನವದೆಹಲಿ, ಅ. ೧೯: ಅಕ್ಟೋಬರ್ ೩ ರಂದು ಉತ್ತರ ಪ್ರದೇಶದ ಲಖೀಂಪರ್ ಖೇರಿಯಲ್ಲಿ ಸಂಭವಿಸಿದ್ದ ಹಿಂಸಾಚಾರ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ತಾ. ೨೦ ರಂದು (ಇಂದು) ಕೈಗೆತ್ತಿಕೊಳ್ಳಲಿದೆ. ರೈತರ ಪ್ರತಿಭಟನೆ ಹಿಂಸಾಚಾರಗಿ ತಿರುಗಿ ನಾಲ್ವರು ರೈತರು ಸೇರಿದಂತೆ ೮ ಮಂದಿ ಹತ್ಯೆಯಾಗಿದ್ದರು. ಎಂಟು ಮಂದಿಯ ಬರ್ಬರ ಹತ್ಯೆ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಅಕ್ಟೋಬರ್ ೮ ರಂದು ಅತೃಪ್ತಿ ವ್ಯಕ್ತಪಡಿಸಿದ್ದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ, ತಾ. ೨೦ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿತ್ತು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ಈವರೆಗೆ ಹತ್ತು ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಘಟನೆ ಬಗ್ಗೆ ಸಿಬಿಐ ಸೇರಿದಂತೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಆಗಬೇಕು ಎಂದು ಇಬ್ಬರು ವಕೀಲರು ಸಿಜೆಐಗೆ ಪತ್ರ ಬರೆದ ನಂತರ ಉನ್ನತ ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ.

ಸಂಸದ ಸ್ಥಾನಕ್ಕೆ ಬಾಬುಲ್ ರಾಜೀನಾಮೆ

ದೆಹಲಿ, ಅ. ೧೯: ಬಿಜೆಪಿ ತೊರೆದು ಟಿಎಂಸಿ ಸೇರಿರುವ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ, ಇಂದು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯಲ್ಲಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ ಬಾಬುಲ್ ಸುಪ್ರಿಯೋ, ಬಿಜೆಪಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸುಪ್ರಿಯೋ ಸಲ್ಲಿಸಿರುವ ರಾಜೀನಾಮೆಯನ್ನು ಸ್ಪೀಕರ್ ಓಂ ಬಿರ್ಲಾ ಅಂಗೀಕರಿಸಿದರು.

ಮಹಿಳೆಯರಿಗೆ ಶೇ. ೪೦ ರಷ್ಟು ಟಿಕೆಟ್-ಕಾಂಗ್ರೆಸ್ ನಿರ್ಧಾರ

ಲಖನೌ, ಅ. ೧೯: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗಲೇ ಕಾಂಗ್ರೆಸ್ ಮಹತ್ವದ ನಿರ್ಧಾರ ಪ್ರಕಟಿಸಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಶೇ. ೪೦ ರಷ್ಟು ಟಿಕೆಟ್ ನೀಡುವುದಾಗಿ ಘೋಷಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಚುನಾವಣೆಯಲ್ಲಿ ಶೇ. ೪೦ ರಷ್ಟು ಟಿಕೆಟ್‌ನ್ನು ಮಹಿಳೆಯರಿಗೆ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಈ ಟಿಕೆಟ್‌ಗಳನ್ನು ಕೇವಲ ಜಾತಿ ಅಥವಾ ಧರ್ಮದ ಆಧಾರದ ಮೇಲೆ ನೀಡದೆ ಅರ್ಹತೆ ಆಧಾರದ ಮೇರೆಗೆ ನೀಡಲಾಗುವುದು ಎಂದರು. ಮಹಿಳೆಯರ ಸಬಲೀಕರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೇರೆ ಇತರ ರಾಜಕೀಯ ಪ್ರೇರಿತ, ಅಜೆಂಡಾದೊAದಿಗೆ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.