ಮಡಿಕೇರಿ, ಅ. ೧೮: ಮಡಿಕೇರಿ ದಸರಾ ಜನೋತ್ಸವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಪೇಟೆ ಶ್ರೀ ರಾಮಮಂದಿರ ದೇವಾಲಯದ ಮಂಟಪದ ಉತ್ಸವ ಮೂರ್ತಿಗಳಿಗೆ ತಾ. ೧೯ ರಂದು (ಇಂದು) ಸಂಜೆ ೭ ಗಂಟೆಗೆ ಶಾಂತಿ ಪೂಜೆ ಏರ್ಪಡಿಸಲಾಗಿದೆ ಎಂದು ದಸರಾ ಸಮಿತಿ ಅಧ್ಯಕ್ಷ ಪವನ್ ಮಕ್ಕಂದೂರು ತಿಳಿಸಿದ್ದಾರೆ.