ಪೊನ್ನಂಪೇಟೆ, ಅ. ೧೬: ಸರ್ಕಾರ ರೈತರಿಗೆ ಈಗಾಗಲೇ ಶೂನ್ಯ ಬಡ್ಡಿ ದರದಲ್ಲಿ ರೂಪಾಯಿ ಮೂರು ಲಕ್ಷ ಸಾಲ ನೀಡುತ್ತಿರುವುದು ಸ್ವಾಗತಾರ್ಹ. ಆದರೆ ಈ ಮಿತಿಯನ್ನು ಸರ್ಕಾರ ಈ ಕೂಡಲೇ ಮಾರ್ಪಾಡು ಮಾಡಿ ರೂಪಾಯಿ ಹತ್ತು ಲಕ್ಷದವರೆಗೆ ವಿಸ್ತರಿಸುವಂತೆ ಜಿಲ್ಲಾ ಪ್ರಗತಿ ಪರ ನಾಗರಿಕ ವೇದಿಕೆಯ ಅಧ್ಯಕ್ಷ ಮಲವಂಡ ಅರವಿಂದ ಅವರು ಒತ್ತಾಯಿಸಿದರು.

ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಅವರು ಮಾತನಾಡಿದರು. ಕೊಡಗು ಜಿಲ್ಲೆಯ ಕೃಷಿ ಹಾಗೂ ನಾಗರಿಕ ವೇದಿಕೆಯ ಅಧ್ಯಕ್ಷ ಮಲವಂಡ ಅರವಿಂದ ಅವರು ಒತ್ತಾಯಿಸಿದರು.

ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಅವರು ಮಾತನಾಡಿದರು. ಕೊಡಗು ಜಿಲ್ಲೆಯ ಕೃಷಿ ಹಾಗೂ ಕಲ್ಪಿಸಬೇಕು ಎಂದು ಅಭಿಪ್ರಾಯಿಸಿದರು.

ವಿಷಮ ಸ್ಥಿತಿಯಲ್ಲಿರುವ ರೈತರಿಗೆ ಹಾಗೂ ಜನರಿಗೆ ಹಲವಾರು ಬ್ಯಾಂಕುಗಳು ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ಕಿರುಕುಳ ಕೊಡುವ ಪ್ರಯತ್ನ ಮಾಡುತ್ತಾ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರಣೆ ನೀಡುತ್ತಿವೆ ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ನಾರಾಯಣ ಸ್ವಾಮಿ ನಾಯ್ಡು ಅವರು ಆರೋಪ ಮಾಡಿದರು. ಸರ್ಕಾರ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಗೋಷ್ಠಿಯಲ್ಲಿ ವೇದಿಕೆ ಗೌರವ ಅಧ್ಯಕ್ಷ ಕೆ.ಆರ್ ಬಾಲಕೃಷ್ಣ ರೈ ಉಪಸ್ಥಿತರಿದ್ದರು.