ಕುಶಾಲನಗರ, ಅ ೧೬: ಕುಶಾಲನಗರ ಆರ್ಯವೈಶ್ಯ ಮಹಿಳಾ ಮಂಡಳಿ ವತಿಯಿಂದ ಪುಟ್ಟ ಹೆಣ್ಣು ಮಕ್ಕಳಿಗೆ ಪಾದ ಪೂಜೆ ಕಾರ್ಯಕ್ರಮ ನಡೆಯಿತು.
ಕನ್ನಿಕಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ೧೨ ಪುಟಾಣಿ ಕನ್ನಿಕೆಯರು ಪಾಲ್ಗೊಂಡರು. ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಸತ್ಯ ನೇತೃತ್ವದಲ್ಲಿ ಆರ್ಯವೈಶ್ಯ ಜನಾಂಗದ ಹಲವು ಮಹಿಳೆಯರು ಪಾದ ಪೂಜೆ ನೆರವೇರಿಸಿದರು.
ಕನ್ನಿಕೆಯರ ಪಾದ ಪೂಜೆಯಿಂದ ಕನ್ನಿಕಾ ದೇವಿ ಮತ್ತಷ್ಟು ಸಂತೃಪ್ತಳಾಗಿ ಆಶೀರ್ವದಿಸುವ ಬಗ್ಗೆ ಉಲ್ಲೇಖವಿರುವುದರಿಂದ ಪ್ರತಿ ವರ್ಷ ನವರಾತ್ರಿಯಲ್ಲಿ ಈ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ ಎಂದು ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ತಿಳಿಸಿದರು.