ಮುಳ್ಳೂರು, ಅ. ೧೬: ಸಮೀಪದ ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ಮತ್ತು ೬೩ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಆರ್.ಲಕ್ಷö್ಮಶೆಟ್ಟಿ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎನ್.ಬಸಪ್ಪ ಸಂಘದ ಹಿಂದಿನ ಸಾಲಿನ ವಾರ್ಷಿಕ ವರದಿ ಹಾಗೂ ಆಡಿಟ್ ವರದಿಯನ್ನು ಮಂಡಿಸಿದರು. ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೨೦೨೧ನೇ ಸಾಲಿಗೆ ಅನ್ವಯವಾಗುವಂತೆ ೨೫೦೩ ಮಂದಿ ಸದಸ್ಯರಿದ್ದು ರೂ. ೧ ಕೋಟಿ ೩೮ ಲಕ್ಷದ ೩೪ ಸಾವಿರದ ೪೭೪ ಪಾಲು ಬಂಡವಾಳ ಇದ್ದು ಸಂಘದಲ್ಲಿ ೨೦೨೧ ಮಾರ್ಚ್ ಅಂತ್ಯಕ್ಕೆ ರೂ. ೩ ಕೋಟಿ ೫೫ ಲಕ್ಷದ ೨೧ ಸಾವಿರದ ೧೮೫ ಠೇವಣಿ ಇದೆ ಎಂದರು. ಸಂಘವು ೨೦೨೦-೨೧ನೇ ಸಾಲಿಗೆ ಕೊಡಗು ಡಿಸಿಸಿ ಬ್ಯಾಂಕಿನಿAದ ರೂ.೧೧ ಕೋಟಿ ೫೯ ಲಕ್ಷದ ೬೯ ಸಾವಿರದ ೧೬೨ ಕೆ.ಸಿ.ಸಿ ಸಾಲ ಪಡೆದಿದ್ದು ಈ ಪೈಕಿ ಸಂಘದ ೭೩೭ ಮಂದಿ ಸದಸ್ಯರಿಗೆ ಒಟ್ಟು ರೂ. ೧೨ ಕೋಟಿ ೯೦ ಲಕ್ಷದ ೨ ಸಾವಿರ ಕೆ.ಸಿ.ಸಿ ಸಾಲ ವಿತರಿಸಿದ್ದು ಸಂಘದ ವ್ಯಾಪ್ತಿಯ ೪ ಸ್ವ-ಸಹಾಯ ಗುಂಪು ಸಾಲವಾಗಿ ರೂ. ೬ ಲಕ್ಷದ ೫೯ ಸಾವಿರದ ೨೩೬ ವಿತರಿಸಿದೆ. ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೭೩ ಲಕ್ಷದ ೬೨ ಸಾವಿರದ ೨೨೭ ವಿವಿಧ ವ್ಯಾಪಾರ ವಹಿವಾಟು ನಡೆಸಿ ರೂ. ೪ ಲಕ್ಷದ ೯೭ ಸಾವಿರದ ೫೪ ಲಾಭಗಳಿಸಿದ್ದು ಹಂಡ್ಲಿ ಕೃಷಿ ಪತ್ತಿನ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೧೮ ಲಕ್ಷದ ೭೩ ಸಾವಿರದ ೧೫೯ ನಿವ್ವಳ ಲಾಭಗಳಿಸಿದೆ ಎಂದರು.
ಆಡಳಿತ ಮಂಡಳಿಯವರು ವಾರ್ಷಿಕ ಆಡಿಟ್ ವರದಿಗಳ ಪ್ರತಿಯನ್ನು ಪಿಡಿಎಫ್ ತೆಗೆದು ಅದನ್ನು ಸಂಘದಲ್ಲಿರುವ ಪ್ರತಿಯೊಬ್ಬ ಸದಸ್ಯರ ವಾಟ್ಸಾö್ಯಪ್‌ಗೆ ಕಳಿಸುವ ವ್ಯವಸ್ಥೆ ಮಾಡಿದರೆ ಗೊಂದಲವಾಗುವುದಿಲ್ಲ ಹಾಗೂ ಸಂಘದ ಹೆಸರಿನಲ್ಲಿ ವಾಟ್ಸಾö್ಯಪ್ ಗ್ರೂಪ್ ರಚಿಸಿ ಅದರಲ್ಲಿ ಸಂಘದ ಎಲ್ಲಾ ಸದಸ್ಯರನ್ನು ಸೇರಿಸಿಕೊಳ್ಳುವಂತೆ ಸದಸ್ಯ ಅಭಿಲಾಷ್ ಸಲಹೆ ನೀಡಿದರು. ಈ ಕುರಿತು ಸಹಕಾರಿ ಇಲಾಖೆ ಅಧಿಕಾರಿಗಳನ್ನು ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಸಿಇಒ ಬಸಪ್ಪ ಹೇಳಿದರು. ವಾರ್ಷಿಕ ಆಡಿಟ್ ವಿಷಯಕ್ಕೆ ಸಂಬAಧಪಟ್ಟ ಚರ್ಚೆಯಲ್ಲಿ ಭಾಗವಹಿಸಿದ ಸದಸ್ಯರು ಸಂಘದಲ್ಲಿ ವಾರ್ಷಿಕ ಆಡಿಟ್ ನಡೆಸುವುದರ ಬದಲು ಪ್ರತಿ ೩ ತಿಂಗಳಿಗೊಮ್ಮೆ ಆಡಿಟ್ ನಡೆಸುವುದರಿಂದ ಸಂಘದ ಲಾಭ-ನಷ್ಟಗಳ ಬಗ್ಗೆ ಸದಸ್ಯರಿಗೆ ಸಂಪೂರ್ಣ ಮಾಹಿತಿ ಸಿಗುತ್ತದೆ ಎಂದು ಸದಸ್ಯರಾದ ವೇದಕುಮಾರ್, ಮೋಹನ್ ಸಲಹೆ ನೀಡಿದರು. ಅಧ್ಯಕ್ಷ ಲಕ್ಷö್ಮಶೆಟ್ಟಿ ೩ ತಿಂಗಳಿಗೊಮ್ಮೆ ಸಂಘದ ಆಡಿಟ್ ನಡೆಸಲು ಕ್ರಮಕೈಗೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.
ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಆರ್.ಲಕ್ಷö್ಮಶೆಟ್ಟಿ- ಸಂಘದ ಅಭಿವೃದ್ದಿಗೆ ಸಹಕಾರಿ ಸದಸ್ಯರು ಸಹಕಾರ ನೀಡಬೇಕು, ಆಡಳಿತ ಮಂಡಳಿಗೆ ಸಲಹೆ ಸಹಕಾರ ನೀಡುತ್ತಿರಬೇಕು, ನಮ್ಮ ಸಂಘವು ಪ್ರಸ್ತುತ ಸಾಲಿನಲ್ಲಿ ೧೮ ಲಕ್ಷ ಕ್ಕಿಂತಲೂ ಅಧಿಕ ನಿವ್ವಳ ಲಾಭಗಳಿಸಿದ್ದು ಮುಂದಿನ ಸಾಲಿನಲ್ಲಿ ಮತ್ತಷ್ಟು ಲಾಭಗಳಿಸುವ ನಿರೀಕ್ಷೆಯನ್ನಿಟ್ಟಿದ್ದೇವೆ, ನಮ್ಮ ಸಂಘವು ಸದಸ್ಯರಿಗೆ ಸರಕಾರದ ಶೂನ್ಯ ಬಡಿಯಲ್ಲಿ ಕೃಷಿ ಸಾಲ ವಿತರಿಸುವ ಮೂಲಕ ಉತ್ತಮ ಸಾಲ ವಸೂಲಾತಿಯಾಗುತ್ತಿದೆ ಎಂದರು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಎಸ್.ಜೆ.ಕುಸುಮ, ನಿರ್ದೇಶಕರಾದ ಎಸ್.ಆರ್.ವೀರೇಂದ್ರಕುಮಾರ್, ಕೆ.ಪಿ.ಯಶೋಧ, ಎಸ್.ಎಸ್.ಗಣೇಶ್, ರವಿಕುಮಾರ್, ಜಯರಾಂ, ಕೆ.ಎಸ್.ಮಧು, ನಾಗೇಶ್, ನಿರಂಜನ್, ದೇವರಾಜ್, ಕೆಡಿಸಿಸಿ ಪರ ಮೇಲ್ವೀಚಾರಕ ಭರತ್, ಹೆಚ್.ಟಿ.ನವೀನ್‌ಕುಮಾರ್ ಕಚೇರಿ ಸಿಬ್ಬಂದಿ ಹಾಜರಿದ್ದರು. -ಭಾಸ್ಕರ್ ಮುಳ್ಳೂರು