ಚೆಟ್ಟಳ್ಳಿ, ಅ. ೧೬: ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು ರೂ. ೩೬.೫೦ ಲಕ್ಷ ಲಾಭಗಳಿಸಿದ್ದು ೨೦೨೦-೨೧ನೇ ಸಾಲಿನ ಮಹಾಸಭೆ ಹಾಗೂ ಕೃಷಿ ಮಣ್ಣು ಪರೀಕ್ಷಾ ಯಂತ್ರ ಉದ್ಘಾಟನೆ ತಾ. ೨೫ ರಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಘದ ಶ್ರೀ ನರೇಂದ್ರಮೋದಿ ರೈತ ಸಹಕಾರ ಸಭಾಂಗಣದಲ್ಲಿ ನಡೆಯಲಿದೆ.

ಪೂರ್ವಾಹ್ನ ೧೦ ಗಂಟೆಗೆ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ನೂತನವಾಗಿ ಪ್ರಾರಂಭಿಸಲಾಗುವ ಕೃಷಿಮಣ್ಣು ಪರೀಕ್ಷಾ ಕೇಂದ್ರದ ಯಂತ್ರದ ಉದ್ಘಾಟನೆ ನೆರವೇರಲಿದೆ.

ಸರಕಾರದಿಂದ ಬರಬೇಕಿದ್ದ ಸಾಲ ಮೇಲಿನ ಬಡ್ಡಿ ಸಹಾಯಧನ ೨೧.೬೯ ಲಕ್ಷ ಬಂದಿದ್ದರೆ ಈ ಬಾರಿಯ ಲಾಭಾಂಶ ಇನ್ನಷ್ಟು ಹೆಚ್ಚಾಗಲಿತ್ತೆಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದ್ದಾರೆ.

ಏಳನೇ ತರಗತಿಯಿಂದ ಪದವಿವರೆಗೆ ವ್ಯಾಸಂಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಣೆ, ಸಂಘದ ಸಿಮೆಂಟ್ ಮತ್ತೀತರ ಸಾಮಗ್ರಿಗಳನ್ನು ಹೆಚ್ಚು ಹೆಚ್ಚು ಖರೀದಿಸಿ ನೂತನ ಮನೆ ನಿರ್ಮಿಸಿ ಗೃಹ ಪ್ರವೇಶ ಮಾಡಿದ ಸಂಘದ ಸದಸ್ಯರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಅಭಿವೃದ್ಧಿ ಪಥದತ್ತ ಚೆಟ್ಟಳ್ಳಿ ಸಹಕಾರ ಸಂಘ

ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು ಸಹಕಾರ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಸಾಗುವ ಮೂಲಕ ರಾಜ್ಯಮಟ್ಟದಲ್ಲಿ ಹೆಸರುಗಳಿಸಿದೆ. ಯಾವುದೇ ಸಹಕಾರ ಸಂಘÀದಲ್ಲಿ ಕಾಣದಂತ ೫ ರೂಪಾಯಿಗೆ ೨೦ ಲೀಟರ್ ಸಾರ್ವಜನಿಕ ಕುಡಿಯುವ ನೀರಿನ ಘಟಕ, ಕಾಫಿ ಗುಣಮಟ್ಟ ಪರೀಕ್ಷಾ ಕೇಂದ್ರ ಜೊತೆಗೆ ರೈತರಿಗೆ ಅನುಕೂಲವಾಗುವಂತೆ ನೂತನವಾಗಿ ಆಧುನಿಕ ಕೃಷಿ ಮಣ್ಣಿನ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಸಂಘದಿAದ ರೈತರಿಗೆ ದೊರೆಯುವ ಫಸಲು ಸಾಲ, ಚಿನ್ನಾಭರಣ ಸಾಲ, ಕಾಫಿ, ಕರಿಮೆಣಸು ಅಡವುಸಾಲ, ಜಾಮೀನು ಸಾಲ, ಅಸಾಮಿಸಾಲ, ವ್ಯಾಪಾರಾಭಿವೃದ್ಧಿ ಸಾಲ, ವಿದ್ಯಾಭ್ಯಾಸ ಸಾಲ, ವಾಹನ ಸಾಲ, ಅತೀ ಆಕರ್ಷಕ ನಿರಖು ಠೇವಣಿ ಮೇಲಿನ ಬಡ್ಡಿ, ಲಾಕರ್, ಅಂಗಡಿ ಮಳಿಗೆ, ಸಭೆ ಸಮಾರಂಭಗಳಿಗೆ ಬೃಹತ್ ಸಭಾಂಗಣ, ಜೊತೆಗೆ ಸಹಕಾರ ಸಂಘಗಳ ಎಲ್ಲಾ ಸೌಲಭ್ಯ ನೀಡುತ್ತಾ ಬರುತ್ತಿದೆ.