ಸೋಮವಾರಪೇಟೆ,ಅ.೧೬: ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದಿಂದ ತಲಕಾವೇರಿಗೆ ಪಾದಯಾತ್ರೆ ಕೈಗೊಳ್ಳಲಾಗಿದ್ದು, ಇಲ್ಲಿನ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಕಾವೇರಿ ತೀರ್ಥೋದ್ಭವ ಹಿನ್ನೆಲೆ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಸೇರಿದಂತೆ ಪದಾಧಿಕಾರಿಗಳು ಪಾದಯಾತ್ರೆ ಕೈಗೊಂಡಿದ್ದು, ತಾ. ೧೭ರಂದು (ಇಂದು) ತೀರ್ಥೋದ್ಭವದ ನಂತರ ಪವಿತ್ರ ತೀರ್ಥವನ್ನು ಸೋಮವಾರಪೇಟೆಗೆ ತಂದು ಸಾರ್ವಜನಿಕರಿಗೆ ವಿತರಿಸಲಾಗುವುದು.