ಮಡಿಕೇರಿ, ಅ.೧೬ : ಹತ್ತನೇ ತರಗತಿಯಲ್ಲಿ ಅತಿಹೆಚ್ಚು ಅಂಕ ಪಡೆದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚAಗಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರತಿವರ್ಷ ಪ್ರತಿಭಾ ಪುರಸ್ಕಾರವನ್ನು ನೀಡುತ್ತಾ ಬರಲಾಗುತ್ತಿದ್ದು, ಕೋವಿಡ್ ಕಾರಣದಿಂದ ಒಂದು ವರ್ಷ ಕಾರ್ಯಕ್ರಮ ನಡೆಸಲಾಗಲಿಲ್ಲ. ಈ ಬಾರಿ ನವೆಂಬರ್ ತಿಂಗಳಿನಲ್ಲಿ ನಡೆಯುವ ಸಂಘದ ಮಹಾಸಭೆಯಲ್ಲಿ ೨೦೧೯-೨೦, ೨೦೨೦-೨೧ ನೇ ಸಾಲಿನ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಹೇಳಿದ್ದಾರೆ.
ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ವಿವರದೊಂದಿಗೆ ಇದೇ ನ.೫ ರೊಳಗೆ ಎಸ್.ಎಂ.ಚAಗಪ್ಪ, ಕಿರಗಂದೂರು ಅಂಚೆ, ಮಾದಾಪುರ ೫೭೧೨೫೧ ಅಥವಾ ಸಂಘದ ಕಚೇರಿ (ಒಕ್ಕಲಿಗರ ಸಂಘ, ಕಾಫಿ ಕೃಪಾ ಬಿಲ್ಡಿಂಗ್, ಮಡಿಕೇರಿ) ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ. ೯೪೮೦೯ ೦೬೧೭೭ ನ್ನು ಸಂಪರ್ಕಿಸಬಹುದೆAದು ಎಸ್.ಎಂ.ಚAಗಪ್ಪ ತಿಳಿಸಿದ್ದಾರೆ.