ಮಡಿಕೇರಿ,ಅ.೧೬: ಮೈಸೂರಿನ ವಿಜಯನಗರದಲ್ಲಿರುವ ಕೊಡಗು ಗೌಡ ಸಮಾಜದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ೨೦೨೧-೨೩ನೇ ಸಾಲಿಗೆ ಚುನಾವಣೆ ನಡೆದು, ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ತೋಟಂಬೈಲು ಈ. ಮನೋಹರ್ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಕುಯ್ಯಮುಡಿ ಬಿ.ರಾಮಪ್ಪ, ಗೌರವ ಕಾರ್ಯದರ್ಶಿಯಾಗಿ ಕುಂಟಿಕಾನ ಎಸ್. ಗಣಪತಿ, ಸಹಕಾರ್ಯದರ್ಶಿಯಾಗಿ ಕಾಳೇರಮ್ಮನ ನಾಣಯ್ಯ, ಖಜಾಂಚಿಯಾಗಿ ಕೊಂಬAಡ ಯು.ಭೀಮಯ್ಯ, ನಿರ್ದೇಶಕರುಗಳಾಗಿ ಹೊಸೊಕ್ಲು ಜಿ.ಸೋಮಣ್ಣ, ಕೊಂಬಾರನ ಯು.ಬಸಪ್ಪ, ಚೆರಿಯಮನೆ ಉಮೇಶ, ಕಡ್ಯದ ರವಿ ಭೀಮಯ್ಯ, ನಡುವಟ್ಟಿರ ಗೀತಾ ಲಕ್ಷö್ಮಣ, ನಡುವಟ್ಟಿರ ಗಣಪತಿ ಲಕ್ಷö್ಮಣ, ತೋಟಂಬೈಲು ಇಂದಿರಾ ಅವರುಗಳು ಆಯ್ಕೆಯಾಗಿದ್ದಾರೆ.