ಮಡಿಕೇರಿ,ಅ.೧೬; ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯ ಕ್ರಿಕೆಟ್ ಪಂದ್ಯಾವಳಿಗಾಗಿ ಕೊಡಗು ಜಿಲ್ಲಾ ಕ್ರಿಕೆಟ್ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ತಾ. ೧೨ರಂದು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ತಂಡಕ್ಕೆ ಆಟಗಾರರನ್ನು ನೇಮಕ ಮಾಡಲಾಗಿದೆ. ಐ.ಎಸ್. ವೈಭವ್ ನಾಯಕತ್ವದ ತಂಡದಲ್ಲಿ ಎಸ್.ಪಿ.ರುತ್ವಿಕ್(ವಿಕೆಟ್ ಕೀಪರ್), ಶಾಶ್ವಿತ್ ಸೋಮಣ್ಣ, ಡಿ.ಯು.ಪೂರ್ವಿತ್, ಜಸ್ವಿತ್ ಬೋಪಣ್ಣ, ಸಿ.ಪಿ.ಗುರುದರ್ಶನ್, ಎ.ಎ.ನಾಣಯ್ಯ, ಗೌರವ್ ಅಪ್ಪಣ್ಣ, ಕೆ.ರೆನಾಯ್ ರಾಜ್, ಡಿ.ಪಿ.ಜೀವನ್, ಡಿ.ಎಸ್.ನಂದನ್, ಟಿ.ಯು.ಅಯ್ಯಪ್ಪ, ಆದಿತ್ಯ ಆರ್. ಶೆಟ್ಟಿ, ಮೌರ್ಯ ಸೋಮಣ್ಣ, ಎ.ಕೆ.ತನ್ಮಯ್, ಹಾಗೂ ಹೆಚ್ಚುವರಿ ಆಟಗಾರರಾಗಿ ಎನ್.ಎಂ.ಬೊಳ್ಳಿಯಪ್ಪ, ವಂಶಿ ಪ್ರಸಾದ್, ಪ್ರಶಿಶ್ ಪಿ.ಆಳ್ವ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಾಂಡರ‍್ಸ್ ಕ್ಲಬ್‌ನ ಕಾರ್ಯದರ್ಶಿ ರಘು ಮಾದಪ್ಪ ತಿಳಿಸಿದ್ದಾರೆ.