ಗೋಣಿಕೊಪ್ಪ ವರದಿ, ಅ. ೧೬: ನಡಿಕೇರಿ ಗೋವಿಂದಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಕಾರ್ಯ ಶುಕ್ರವಾರ ಭಕ್ತಿಭಾವದಿಂದ ನಡೆಯಿತು. ದೇವಸ್ಥಾನದಲ್ಲಿ ದೀಪದ ಅಲಂಕಾರ ಮಾಡುವ ಮೂಲಕ ಗ್ರಾಮಸ್ಥರು ದೇವರನ್ನು ಪ್ರಾರ್ಥಿಸಿದರು. ರಾತ್ರಿ ದೀಪ ಹಚ್ಚಿ ಸಂಭ್ರಮಿಸಿದರು.
೯ ದಿನ ನಡೆದ ಕಾರ್ಯಕ್ರಮದಲ್ಲಿ ಚಂದ್ರಘAಟಾ ಪೂಜೆ, ಕಾತ್ಯಾಯಿನಿ ಮಾತಾ ಪೂಜೆ ನಡೆಯಿತು. ಚಂದ್ರಕಲಾ ಮತ್ತು ತಂಡದಿAದ ಸಂಗೀತ ಕಾರ್ಯಕ್ರಮ ತಲೆದೂಗುವಂತೆ ಮಾಡಿತು. ಗ್ರಾಮಸ್ಥ ಭಕ್ತರು ಒಂದಾಗಿ ಸೇರಿ ಪುನೀತರಾದರು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೋಳೇರ ಶರಿ, ಕಾರ್ಯದರ್ಶಿ ಕೋಳೇರ ಅಜಿತ್ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.