ಸೋಮವಾರಪೇಟೆ,ಅ.೧೬: ಪೂಜೆಗಿಂತ ಶ್ರೇಷ್ಠವಾದದ್ದು ಪ್ರೀತಿ ತುಂಬಿದ ಹೃದಯ. ನಮ್ಮೊಳಗಿನ ದ್ವೇಷ ಅಸೂಯೆಗಳಿಂದ ಹೊರಬಂದು ಜೀವನ ನಡೆಸುವಂತಹ ಸಮಾಜ ನಿರ್ಮಾಣವಾಗಬೇಕಿದೆ ಎಂದು ಬಸವಪಟ್ಟಣದ ತೋಂಟದಾರ್ಯ ಸಂಸ್ಥಾನ ಮಠಾಧೀಶರಾದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ಬಸವೇಶ್ವರ ದೇವಾಲಯದ ಆವರಣದಲ್ಲಿ ವೀರಶೈವ ಸಮಾಜ, ವೀರಶೈವ ಲಿಂಗಾಯತ ಸಂಘಟನಾವೇದಿಕೆ, ಅಕ್ಕನಬಳಗ, ಬಸವೇಶ್ವರ ಯುವಕಸಂಘ ಇವರ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನವರಾತ್ರಿ ಸಂದರ್ಭದಲ್ಲಿ ಜಗನ್ಮಾತೆ ೯ ಅವತಾರಗಳನ್ನೆತ್ತಿ ದುಷ್ಟ ರಾಕ್ಷಸರ ಸಂಹಾರ ಮಾಡಿದಂತೆ ನಾವು ನಮ್ಮೊಳಗಿರುವ ರಾಕ್ಷಸ ರೂಪದ ದ್ವೇಷ, ಅಸೂಯೆ, ಅನುಮಾನ, ಅಪನಂಬಿಕೆ, ಅಹಂಕಾರ ಮುಂತಾದ ಪ್ರವೃತ್ತಿಗಳನ್ನು ಸಂಹರಿಸಬೇಕು ಎಂದರು.
ಹಿರಿಯರನ್ನು ಗೌರವಿಸುವ ಮೂಲಕ ಅವರ ಅಂತ್ಯಕಾಲದಲ್ಲಿ ಆಸರೆಯಾಗಬೇಕು. ಆಗ ಮಾತ್ರ ವೃದ್ಧಾಶ್ರಮ ಸಂಸ್ಕೃತಿಯನ್ನು ಹೊಡೆದೋಡಿಸಬಹುದೆಂದು ಆಶಿಸಿದರು. ಕಾರ್ಯಕ್ರಮದಲ್ಲಿ ಇಲ್ಲಿನ ಶ್ರಿ ಜಗದ್ಗುರು ಮುರುಘರಾಜೇಂದ್ರ ಎಸ್ಟೇಟ್ನ ವ್ಯವಸ್ಥಾಪಕ ಶಶಿಧರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಯಜಮಾನ ಶಿವಕುಮಾರ್,ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ಅಕ್ಕನಬಳಗ ಅಧ್ಯಕ್ಷೆ ಜಲಜಾ ಶೇಖರ್, ಪ್ರಮುಖರಾದ ಗೀತಾರಾಜು, ಸಚಿನ್, ಉಷಾರಾಣಿ, ರಮೇಶ್, ಅನಿಲ್, ಶೇಖರ್ ಸೇರಿದಂತೆ ಸಮಾಜ ಭಾಂದವರು ಹಾಗೂ ಭಕ್ತಾದಿಗಳು ಹಾಜರಿದ್ದರು.