ಮಡಿಕೇರಿ, ಅ. ೧೬: ಸಿಪೆಟ್ ಮೈಸೂರು ಉದ್ಯೋಗಾದಾರಿತ ಡಿಪ್ಲೊಮಾ ೨೦೨೧-೨೨ ನೇರ ಪ್ರವೇಶ ಪಡೆಯಲು ತಾ. ೨೦ ರವರೆಗೆ ವಿಸ್ತರಿಸಿದೆ.
ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿAಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಸಂಸ್ಥೆಯು ದೇಶದ ಪಾಲಿಮರ್/ ಪೆಟ್ರೋಕೆಮಿಕಲ್ಸ್/ ಪ್ಲಾಸ್ಟಿಕ್ಸ್ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡಲಾಗುತ್ತಿದೆ. ಭಾರತ ಸರ್ಕಾರದ ಆದೇಶದ ಅನುಸಾರ ಕರ್ನಾಟಕದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲಾವಕಾಶ ನೀಡಲಾಗಿದೆ.
೨೦೨೧-೨೨ನೇ ಸಾಲಿನ ಡಿಪ್ಲೋಮಾ ಮತ್ತು ಪೋಸ್ಟ್ ಗ್ರ‍್ಯಾಜುಯೇಟ್ ಡಿಪ್ಲೋಮಾ ನೇರ ಪ್ರವೇಶ ಪಡೆಯಲು ಕೊನೆಯ ದಿನಾಂಕವನ್ನು ಅಕ್ಟೋಬರ್, ೨೦ ರವರೆಗೆ ವಿಸ್ತರಿಸಲಾಗಿದೆ. ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (ಡಿಪಿಟಿ)-೩ ವರ್ಷ, ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (ಡಿಪಿಎಂಟಿ)- ೩ ವರ್ಷ ಮತ್ತು ಪೋಸ್ಟ್ ಗ್ರ‍್ಯಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಪ್ರೋಸೆಸ್ಸಿಂಗ್ ಮತ್ತು ಟೆಸ್ಟಿಂಗ್(ಪಿಜಿಡಿ-ಪಿಪಿಟಿ)-೨ ವರ್ಷ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಬಹುದು. ಎಸ್‌ಎಸ್‌ಎಲ್‌ಸಿ, ಪಿಯುಸಿ (ವಿಜ್ಞಾನ), ಐಟಿಐ(ಫಿಟ್ಟರ್, ಟರ್ನರ್, ಮೆಕಾನಿಸ್ಟ್) ಮತ್ತು ಬಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು/ ಹಾಜರಾದವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ. ೦೮೨೧-೨೫೧೦೬೧೮, ೯೭೯೧೪೩೧೮೨೭, ೯೪೮೦೨೫೩೦೨೪, ೯೧೪೧೦೭೫೯೬೮ ಹಾಗೂ ವೆಬ್‌ಸೈಟ್ ತಿತಿತಿ.ಛಿiಠಿeಣ.gov.iಟಿ ನ್ನು ಸಂಪರ್ಕಿಸಬಹುದು ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕರು ಮತ್ತು ಮುಖ್ಯಸ್ಥ ಆರ್.ಟಿ. ನಾಗರಳ್ಳಿ ಅವರು ತಿಳಿಸಿದ್ದಾರೆ.