ಮಡಿಕೇರಿ, ಅ. ೧೬: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಲಲಿತ ಪ್ರಬಂಧ, ಕಥೆ ಮತ್ತು ಕವಿತೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಕಥೆ, ಕವಿತೆ, ಮತ್ತು ಲಲಿತ ಪ್ರಬಂಧ ಸ್ವಂತ ರಚನೆಯಾಗಿರಬೇಕು. ಪ್ರಕಟಿತ ಮತ್ತು ಅನುವಾದಿತ ಬರಹಗಳಿಗೆ ಅವಕಾಶವಿಲ್ಲ. ಕಥೆ, ಲಲಿತ ಪ್ರಬಂಧ ಒಂದು ಸಾವಿರ ಪದಗಳು ಮೀರಬಾರದು. ಕವಿತೆ ೩೦ ಸಾಲುಗಳ ಮಿತಿಯಿಲ್ಲಿರಬೇಕು. ಹೊಸ ಆಲೋಚನೆ, ಹೊಸ ಹೊಳಹುಗಳ ಬರಹವಾಗಿರಬೇಕು.
ಕಥಾ ವಿಭಾಗ, ಕವಿತಾ ವಿಭಾಗ ಹಾಗೂ ಲಲಿತ ಪ್ರಬಂಧ ವಿಭಾಗಗಳಲ್ಲಿ ಪ್ರಥಮ ಬಹುಮಾನ ರೂ. ೩ ಸಾವಿರ, ದ್ವಿತೀಯ ಬಹುಮಾನ ರೂ. ೨ ಸಾವಿರ, ತೃತೀಯ ಬಹುಮಾನ ರೂ. ೧ ಸಾವಿರ ಒಳಗೊಂಡಿದೆ. ಒಬ್ಬರೇ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ. ಬರಹ ಕಳಿಸಲು ನವೆಂಬರ್ ೧೨ ಅಂತಿಮ ದಿನವಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಲಕ್ಷಿö್ಮ ನಾರಾಯಣ ಕಜೆಗದ್ದೆ ಅವರು ತಿಳಿಸಿದ್ದಾರೆ.