ನಾಪೋಕ್ಲು, ಅ. ೧೫ : ನಗರದಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಕೇರಳ ರಾಜ್ಯದ ಪಾಣತ್ತೂರ್ ನಿವಾಸಿ ಥೋಮಸ್ (೪೭) ಶುಕ್ರವಾರ ತಾನು ವಾಸವಿದ್ದ ಕೋಣೆಯಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾನೆ. ಅನಾರೋಗ್ಯದಿಂದ ಸಾವು ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ನಾಪೋಕ್ಲು ಪೊಲೀಸರು ಶವ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.