ಗೋಣಿಕೊಪ್ಪಲು, ಅ. ೧೫ : ಕಳೆದ ಒಂಬತ್ತು ದಿನಗಳಿಂದ ಧಾರ್ಮಿಕ ಕಾರ್ಯಗಳ ನಂತರ ವಿಜಯ ದಶಮಿಯಂದು ರಾತ್ರಿ ಚಾಮುಂಡೇಶ್ವರಿ ದೇವಿ ವಿಸರ್ಜನೆ ಮಾಡುವ ಮೂಲಕ ಗೋಣಿಕೊಪ್ಪ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ನಡೆದ ಸರಳ ದಸರಾಕ್ಕೆ ತೆರೆ ಎಳೆಯಲಾಯಿತು.

ಸ್ಥಳೀಯ ಸ್ವಾತಂತ್ರ‍್ಯ ಹೋರಾಟಗಾರ ಭವನದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ಕಳೆದ ಒಂಬತ್ತು ದಿನಗಳಿಂದ ಪೂಜೆ, ಭಜನೆ ಕಾರ್ಯಕ್ರಮ ನಡೆದಿದ್ದವು. ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ನವರ ಸಮ್ಮುಖದಲ್ಲಿ ದೇವಿಯ ಪ್ರತಿಷ್ಠಾಪನೆ ಕಾರ್ಯ ನಡೆದಿದ್ದವು.

ಸಮಿತಿಯ ಪದಾಧಿಕಾರಿಗಳು ದಿನ ನಿತ್ಯದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ದಶÀ ಮಂಟಪದ ಪದಾಧಿಕಾರಿಗಳು ದಿನಕ್ಕೊಬ್ಬರಂತೆ ಪೂಜೆ ನಡೆಸಿ, ದೇವಿಯ ಆರಾಧನೆಯಲ್ಲಿ ಪಾಲ್ಗೊಂಡರು. ಸರಳ ದಸರಾ ಹಿನ್ನೆಲೆ ಈ ಬಾರಿ ದಶಮಂಟಪ ಶೋಭಾಯಾತ್ರೆ ನಡೆದಿಲ್ಲ. ದೇವಿಯ ಮೂರ್ತಿ ಹೊತ್ತ ಮಂಟಪ ಮಾತ್ರ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ಯಾವುದೇ ರೀತಿಯ ವೇದಿಕೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆದಿಲ್ಲ.

ಶುಕ್ರವಾರ ಸಂಜೆ ಆರು ಗಂಟೆಗೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸಿದ ತರುವಾಯ ಅಲಂಕೃತ ಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ನಗರದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಅಧ್ಯಕ್ಷತೆಯಲ್ಲಿ ಜಿ.ಪಂ. ಮಾಜಿ. ಸದಸ್ಯ ಸಿ.ಕೆ.ಬೋಪಣ್ಣ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಗ್ರಾ.ಪಂ.ಅಧÀ್ಯಕ್ಷೆ ಚೈತ್ರ ಸಮ್ಮುಖದಲ್ಲಿ ಕಾವೇರಿ ದಸರಾ ಸಮಿತಿಯ ಪದಾಧಿಕಾರಿಗಳು, ಭಕ್ತರು ಮೆರವಣಿಗೆಯಲ್ಲಿ ಸಾಗಿದರು. ರಸ್ತೆಯ ಉದ್ದಕ್ಕೂ ಚಾಮುಂಡೇಶ್ವರಿ ದೇವಿಗೆ ಸ್ಥಳೀಯರು ಪೂಜೆ ಸಲ್ಲಿಸಿದರು.

ಪ್ರಮುಖರಾದ ಕಾಡ್ಯಮಾಡ ಚೇತನ್ ಕೆ.ಪಿ. ಬೋಪಣ್ಣ ಸುರೇಶ್ ರೈ, ರಾಜಶೇಖರ್, ಬಿ.ಎನ್.ಪ್ರಕಾಶ್, ಕೆ.ರಾಜೇಶ್, ಚೇತನ್, ಸೌಮ್ಯ ಬಾಲು, ಗೀತಾ, ಪುಷ್ಪಾ, ಬಾಲಕೃಷ್ಣ ರೈ, ಶಿವಾಜಿ, ಚೇಂದAಡ ಸುಮಿ ಸುಬ್ಬಯ್ಯ, ಜ್ಯೋತಿ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.

ಠಾಣಾಧಿಕಾರಿಗಳಾದ ಕುಮಾರ್, ಸಿಬ್ಬಂದಿಗಳು ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು. ಹರಿಶ್ಚಂದ್ರಪುರದ ಕೆರೆಯಲ್ಲಿ ದೇವಿಯ ವಿಸರ್ಜನೆ ಮಾಡಲಾಯಿತು.

- ಹೆಚ್.ಕೆ.ಜಗದೀಶ್