ಮಡಿಕೇರಿ, ಅ. ೧೫: ಟಿ. ಶೆಟ್ಟಿಗೇರಿ ಪಂಚಾಯಿತಿ ಮಟ್ಟದ ಬಿಜೆಪಿ ಕೃಷಿ ಮೋರ್ಚಾ ಪದಾಧಿಕಾರಿಗಳ ವತಿಯಿಂದ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಕಟ್ಟಡದ ಸಭಾಂಗಣದಲ್ಲಿ ರಾಷ್ಟಿçÃಯ ಸ್ವಯಂಸೇವಕ ಸಂಘದ ಸೇವಾ ಭಾರತೀಯ ಟಿ. ಶೆಟ್ಟಿಗೇರಿ ಮಂಡಲ ಶವಸಂಸ್ಕಾರ ಕಾರ್ಯಕರ್ತರಾದ ಕಟ್ಟೇರ ಚೋಟು ಬೋಪಣ್ಣ, ಚೆಟ್ಟಂಗಡ ಮಹೇಶ್ ಮಂದಣ್ಣ, ಮಾಣೀರ ಬೋಪಣ್ಣ, ಅಣ್ಣೀರ ಸಜನ್, ಕರ್ನಂಡ ಚಲನ್ ಇವರುಗಳಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭ ತಾಲೂಕು ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ತಾಲೂಕು ಬಿಜೆಪಿ ಕೃಷಿ ಮೋರ್ಚಾ ಕಾರ್ಯದರ್ಶಿ ಕಟ್ಟೇರ ಕವನ್, ಟಿ. ಶೆಟ್ಟಿಗೇರಿ ಪಂಚಾಯಿತಿ ಕೃಷಿ ಮೋರ್ಚಾ ಅಧ್ಯಕ್ಷ ಕೊಟ್ರಮಾಡ ಮಂಜು, ಟಿ. ಶೆಟ್ಟಿಗೇರಿ ಕೃಷಿ ಮೋರ್ಚಾ ಉಪಾಧ್ಯಕ್ಷ ನೂರೇರ ಅರುಣ, ಟಿ. ಶೆಟ್ಟಿಗೇರಿ ಪಂಚಾಯಿತಿ ಕೃಷಿ ಮೋರ್ಚಾ ಕಾರ್ಯದರ್ಶಿ ಬಾಚೀರ ರಾಜ, ಟಿ. ಶೆಟ್ಟಿಗೇರಿ ಪಂಚಾಯಿತಿ ಕೃಷಿ ಮೋರ್ಚಾ ಸದಸ್ಯ ದೇಕಮಾಡ ವಿನು, ಟಿ. ಶೆಟ್ಟಿಗೇರಿ ಶಕ್ತಿ ಕೇಂದ್ರ ಪ್ರಮುಖ್ ಮಾಣೀರ ಉಮೇಶ್, ಟಿ. ಶೆಟ್ಟಿಗೇರಿ ಪಂಚಾಯಿತಿ ಸದಸ್ಯ ಮನ್ನೆರ ಅಜಿತ್, ಟಿ. ಶೆಟ್ಟಿಗೇರಿ ಓಬಿಸಿ ಅಧ್ಯಕ್ಷ ವಿನು ಹಾಗೂ ಟಿ. ಶೆಟ್ಟಿಗೇರಿ ಪಂಚಾಯಿತಿ ಮಟ್ಟದ ಬೂತ್ ಅಧ್ಯಕ್ಷರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.