ಪೊನ್ನಂಪೇಟೆ, ಅ. ೧೫: ಉಪಯೋಗಿಸಿ ಬಿಸಾಡಿರುವ ನ್ಯಾಪ್ ಕಿನ್, ಪ್ಯಾಂಪರ್ಸ್, ಸ್ಯಾನಿಟರಿ ಪ್ಯಾಡ್ ಮುಂತಾದ ಪ್ಲಾಸ್ಟಿಕ್ ಮಾದರಿಯ ಮರುಬಳಕೆ ಮಾಡಲಾಗದ ಅನುಪಯುಕ್ತ ವಸ್ತುಗಳನ್ನು ಸುಟ್ಟು ಹಾಕುವುದಕ್ಕಾಗಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಕಸವಿಂಗಡಣೆ ಘಟಕದಲ್ಲಿ ನೂತನ ಇನ್ಸಿನರೇಟರ್ ಯಂತ್ರ (ಬರ್ನಿಂಗ್ ಮಿಷನ್) ಅಳವಡಿಸಲಾಗಿದ್ದು, ವೀರಾಜ ಪೇಟೆ ತಾಲೂಕು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟನೆ ಮಾಡಿದರು.

ಈ ಸಂದರ್ಭ ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ವೆಂಕಟೇಶ್ ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ಸದಾ, ಪಿಡಿಓ ಪುಟ್ಟರಾಜು, ಗ್ರಾ.ಪಂ. ಸದಸ್ಯರಾದ ಮೂಕಳೇರ ಸುಮಿತ ಗಣೇಶ್, ಅಣ್ಣೀರ ಹರೀಶ್, ಮೂಕಳೇರ ಮಧುಕುಮಾರ್, ವಿಜಯ ಕುಮಾರ್, ಅಡ್ಡಂಡ ನಿಲನ್, ಅಮ್ಮತ್ತೀರ ಆರತಿ ಸುರೇಶ್, ರಾಮಕೃಷ್ಣ, ಅಬ್ದುಲ್ ಅಜೀಜ್, ಕೋಳೆರ ಭಾರತಿ, ಮಚ್ಚಮಾಡ ವಿಲ್ಮಾ, ಮಂಜುಳ ಮಣಿಕಂಠ, ಯಮುನ, ರವಿ, ನೇತ್ರಾವತಿ, ಗ್ರಾ.ಪಂ. ಸಿಬ್ಬಂದಿಗಳು, ಹಿರಿಯ ನಾಗರಿಕ ವೇದಿಕೆಯವರು ಹಾಜರಿದ್ದರು.