ಮಡಿಕೇರಿ, ಅ. ೧೩: ಹೈದರಾಬಾದಿನ ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿದ ಕೋವ್ಯಾಕ್ಸಿನ್ ಲಸಿಕೆ ಎರಡರಿಂದ ಹದಿನೆಂಟು ವರ್ಷಗಳ ಮಕ್ಕಳಿಗೆ ನೀಡಲು ಸಿದ್ಧವಾಗಿದೆ. ೨೦೨೧ರ ಮೇ ತಿಂಗಳಲ್ಲಿ ಫೇಸ್ ೩ ಕ್ಲಿನಿಕಲ್ ಟ್ರಯಲ್ ಮಾಡಲು ೫೨೫ ಮಕ್ಕಳನ್ನು ನೊಂದಾವಣೆ ಮಾಡಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಲಸಿಕೆಯ ಕುರಿತಾದ ತಾಂತ್ರಿಕ ಸಲಹಾ ಕಮಿಟಿಯು ಈ ಕೋವ್ಯಾಕ್ಸಿನ್ ಲಸಿಕೆಯನ್ನು ಎರಡರಿಂದ ಹದಿನೆಂಟು ವಯಸ್ಸಿನ ಮಕ್ಕಳಲ್ಲಿ ಸುರಕ್ಷಿತವಾಗಿ ಬಳಸಬಹುದೆಂದು ಆಡಿug ಅoಟಿಣಡಿoಟ ಉeಟಿeಡಿಚಿಟ oಜಿ Iಟಿಜiಚಿ (ಆಉಅI) ಡಾ. ವಿ.ಸಿ. ಸೊಮಾನಿಯವರಿಗೆ ತಮ್ಮ ಸಕಾರಾತ್ಮಕ ಅಭಿಪ್ರಾಯವನ್ನು ತಿಳಿಸಿದೆ. ಬಹುತೇಕ ಎಲ್ಲಾ ಸಂದರ್ಭಗಳಲ್ಲಿ ಆಉಅI ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯವನ್ನು ಅಂಗೀಕರಿಸುತ್ತದೆ. ಮಕ್ಕಳಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಸುರಕ್ಷತೆ ಮತ್ತು ಕ್ಷಮತೆ ವಯಸ್ಕರಿಗೆ ಹೋಲಿಸಿದಾಗ ಒಂದೇ ಮಾದರಿಯಲ್ಲಿದೆ ಎಂದು ಈ ಟ್ರಯಲ್ಗಳಿಂದ ತಿಳಿದು ಬಂದಿದೆ. ಕೆಡಿಲಾ ಹೆಲ್ತ್ ಕೇರಿನ ಝೈಕೋವ್ -ಡಿ ಲಸಿಕೆ ೧೨ ವರ್ಷ ಮೇಲ್ಪಟ್ಟವರಿಗೆ ಕೊಡಲು ಸಮ್ಮತಿಯನ್ನು ಈಗಾಗಲೇ ಪಡೆದಿತ್ತು. ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ಸರಕಾರ ತ್ವರಿತವಾಗಿ ಹೇಗೆ ಹಂಚಬಹುದೆAಬುದನ್ನು ಕಾದು ನೋಡಬೇಕಾಗಿದೆ. ರಾಷ್ಟಿçÃಯ ಲಸಿಕಾ ಅಭಿಯಾನದಡಿಯಲ್ಲೂ ಇದನ್ನು ಜೋಡಿಸಬಹುದು ಅಥವಾ ಇದಕ್ಕಾಗಿ ವಿಶೇಷ ಲಸಿಕಾಕರಣದ ಕಾರ್ಯಕ್ರಮವನ್ನು ಆಯೋಜಿಸಬಹುದು. ಮಕ್ಕಳ ಶಿಕ್ಷಣ ಮತ್ತು ಮಾನಸಿಕ ಆರೋಗ್ಯದ ನಿಟ್ಟಿನಲ್ಲಿ ಶಾಲೆಗಳು ಹಿಂದಿನAತೆ ತೆರೆಯುವ ಕಾರಣಕ್ಕಾಗಿ ಮಕ್ಕಳಿಗೆ ನೀಡಬಹುದಾದ ಲಸಿಕೆಗೆ ಅನುಮತಿ ಸಿಗುತ್ತಿರುವುದು ಪೋಷಕರಲ್ಲಿ ಸಂತೋಷಕ್ಕೆ ಕಾರಣವಾಗಿದೆ.
ಮೇಜರ್ ಡಾ. ಕುಶ್ವಂತ್ ಕೋಳಿಬೈಲು