ಮುಳ್ಳೂರು, ಅ. ೧೩: ಮೈಸೂರಿನಲ್ಲಿ ದಸರಾ ಪ್ರಯುಕ್ತ ನಡೆದ ಕ್ರೀಡಾಕೂಟದ ಅಂಬಾರಿ ಕಪ್ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸಮೀಪದ ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ತಂಡ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕ್ಲಬ್‌ನ ಸದಸ್ಯರಾದ ಎ.ಎಸ್. ರಾಮಣ್ಣ ಮತ್ತು ಎಸ್.ಜೆ. ಪ್ರಸನ್ನಕುಮಾರ್ ಇವರುಗಳು ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಎಂ.ಇ. ವೆಂಕಟೇಶ್ ತಿಳಿಸಿದ್ದಾರೆ.