ಗೋಣಿಕೊಪ್ಪಲು, ಅ. ೧೩: ಸಂಘವು ಲಾಕ್‌ಡೌನ್ ಸಂದರ್ಭ ದಲ್ಲಿಯೂ ಸದಸ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ರೂ. ೨೫೯ ಕೋಟಿ ವ್ಯವಹಾರ ನಡೆಸಿ ಒಂದು ಕೋಟಿ ನಲ್ವತ್ತೊಂಬತ್ತು ಸಾವಿರ ಲಾಭ ಗಳಿಸಿದೆ ಎಂದು ಗೋಣಿಕೊಪ್ಪ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಪ್ಪಂಡ ವಿಜು ಚಿಟ್ಟಿಯಪ್ಪ ತಿಳಿಸಿದರು.

ಗೋಣಿಕೊಪ್ಪಲುವಿನ ಜಿಆರ್‌ಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ೬೭ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಸದಸ್ಯರ ಪಾಲಿನ ಹಣದಿಂದ ಉತ್ತಮವಾಗಿ ಅಭಿವೃದ್ಧಿಯತ್ತ ಸಾಗಿದೆ. ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದೆ. ವಾರ್ಷಿಕವಾಗಿ ಶೇ. ೨೫ ಡಿವಿಡೆಂಡÀÄ್ನ ಸದಸ್ಯರಿಗೆ ನೀಡುತ್ತಿದೆ. ವ್ಯಾಪಾರ ವಿಭಾಗದಲ್ಲಿ ಲಾಭ ಗಳಿಸಲಾಗಿದ್ದು ಸದಸ್ಯರಿಗೆ ಅಗತ್ಯವಿರುವ ಗೊಬ್ಬರ ಹಾಗೂ ಹತ್ಯಾರು ಸಾಮಗ್ರಿಗಳನ್ನು ಖರೀದಿಸಿ ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎರಡು ಕೋಟಿಗೂ ಅಧಿಕ ಹಣವು ಬರಲು ಬಾಕಿ ಇದ್ದು, ಪ್ರಸಕ್ತ ಸಾಲಿನಲ್ಲಿ ಸಂಘವು ಎ ತರಗತಿಯಲ್ಲಿ ಮುಂದುವರೆಯುತ್ತಿದೆ. ಸಂಘದ ವತಿಯಿಂದ ಮೋದಿಕೇರ್ ವ್ಯಾಪಾರ ಮಳಿಗೆಯನ್ನು ತೆರೆಯಲಾಗಿದ್ದು, ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಸಂಘವು ಮುಂದಿನ ದಿನಗಳಲ್ಲಿ ನಾಲ್ಕು ಅಂತಸ್ತುಗಳ ಕಟ್ಟಡವನ್ನು ನಿರ್ಮಿಸಲು ನಿರ್ಧರಿಸಲಿದ್ದು ಮಹಾಸಭೆ ಅನುಮತಿ ನೀಡುವಂತೆ ಸಭೆಯಲ್ಲಿ ಮನವಿ ಮಾಡಿದರು.

ಈ ವೇಳೆ ನೂತನ ಕಟ್ಟಡದ ನಿರ್ಮಾಣದ ಬಗ್ಗೆ ಸಂಘದ ಸದಸ್ಯರಾದ ಜಮ್ಮಡ ಎಸ್. ಮಾದಪ್ಪ, ಕೊಕ್ಕಂಡ ಎ. ಬಿದ್ದಪ್ಪ, ಕುಪ್ಪಂಡ ಗಣೇಶ್, ಪೊನ್ನಿಮಾಡ ಸುರೇಶ್, ಕಾಡ್ಯಮಾಡ ಪೂಣಚ್ಚ, ಮುಂತಾದವರು ಚರ್ಚೆ ನಡೆಸಿದರು. ಸರ್ವ ಸದಸ್ಯರ ತೀರ್ಮಾನದಂತೆ ಕಟ್ಟಡ ನಿರ್ಮಾಣ ಮಾಡಲು ಮಹಾ ಸಭೆ ಅನುಮತಿ ನೀಡಿತು.

ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವಿ.ಕೆ. ಪ್ರತಾಪ್ ಮರಣ ನಿಧಿಯಲ್ಲಿ ಸದಸ್ಯರು ನೀಡುವ ಹಣದ ೫ ಪಾಲನ್ನು ಸದಸ್ಯರ ಮರಣ ನಂತರ ಸಂಬAಧಿಸಿದವರಿಗೆ ನೀಡಲಾಗುತ್ತಿದೆ. ಹೊಸದಾಗಿ ಮರಣ ನಿಧಿಗೆ ಹಣ ನೀಡುವವರಿಂದ ೧೦ ಸಾವಿರವನ್ನು ಪಡೆಯಲಾಗುತ್ತಿದೆ. ಅಗತ್ಯವಿದ್ದರೆ ಎರಡು ಕಂತುಗಳಲ್ಲಿ ಹಣವನ್ನು ಪಾವತಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.

ವಾಹನ ಸಾಲವನ್ನು ಪ್ರಸ್ತುತವಿರುವ ೧೦ ಲಕ್ಷದ ಬದಲಾಗಿ ೧೫ ಲಕ್ಷ ನೀಡುವಂತೆ ಸದಸ್ಯರು ಮಹಾಸಭೆಯಲ್ಲಿ ಆಡಳಿತ ಮಂಡಳಿಗೆ ಸಲಹೆ ನೀಡಿದರು. ಮುಂದಿನ ಆಡಳಿತ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಉಪಾಧ್ಯಕ್ಷ ಜಮ್ಮಡ ಮೋಹನ್ ಸಭೆಗೆ ಮಾಹಿತಿ ಒದಗಿಸಿದರು.

ಉಪಾಧ್ಯಕ್ಷ ಕಬ್ಬಚ್ಚಿರ ಎಂ. ಸುಬ್ರಮಣಿ, ನಿರ್ದೇಶಕರಾದ ಜಮ್ಮಡ ಸಿ. ಮೋಹನ್, ಬೆಲ್ಲತಂಡ ಸಿ. ಮಾದಯ್ಯ, ಚೆಪ್ಪುಡೀರ ಟಿ. ಗಣಪತಿ, ಕುಲ್ಲಚಂಡ ಎಸ್. ಗಣಪತಿ, ಕಾಡ್ಯಮಾಡ ಪಿ. ದೇವಯ್ಯ, ಕೊಕ್ಕಲೆಮಾಡ ಎಂ. ಪಾರ್ವತಿ, ಜಮ್ಮಡ ಎ. ಸೌಮ್ಯ, ವೇದಪಂಡ ಬಿ. ಕಿರಣ್, ಪಿ.ವಿ. ಶೋಭಿತ್, ಹೆಚ್.ಎಸ್. ಗಣೇಶ್, ವೈ.ಬಿ. ಗಪ್ಪು ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವಿ.ಕೆ. ಪ್ರತಾಪ್ ಸ್ವಾಗತಿಸಿ, ಸದಸ್ಯರಾದ ಚೇದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು. ನಿರ್ದೇಶಕ ಸಿ. ಮಾದಯ್ಯ ವಂದಿಸಿದರು. ಸಭೆಯಲ್ಲಿ ಸಂಸ್ಥೆಯ ಸಿಬ್ಬಂದಿಗಳು ಇದ್ದರು. ಆರಂಭದಲ್ಲಿ ಮೃತಪಟ್ಟ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.