ಉಗ್ರಪ್ಪಗೆ ನೋಟೀಸ್ - ಸಲೀಂ ಅಮಾನತು

ಬೆಂಗಳೂರು, ಅ. ೧೩: ಕೆಪಿಸಿಸಿ ಕಚೇರಿಯ ವೇದಿಕೆಯಲ್ಲಿ ಸುದ್ದಿಗೋಷ್ಠಿಗೆ ಮುನ್ನ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಅನಧಿಕೃತವಾಗಿ ಮಾತನಾಡಿದ್ದ ಗುಸುಗುಸು ಮಾತು ತಲ್ಲಣ ಉಂಟುಮಾಡಿದ್ದು ವಿ.ಎಸ್. ಉಗ್ರಪ್ಪನವರನ್ನು ಸಂಕಷ್ಟಕ್ಕೀಡು ಮಾಡಿದೆ. ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ವಿ.ಎಸ್. ಉಗ್ರಪ್ಪನವರಿಗೆ ಹೇಳಿಕೆಯ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದೆ. ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ಅವರು ವಿ.ಎಸ್. ಉಗ್ರಪ್ಪನವರಿಗೆ ನೋಟೀಸ್ ಕಳುಹಿಸಿದ್ದಾರೆ. ಡಿ.ಕೆ. ಶಿವಕುಮಾರ್ ಡೀಲ್ ಗಿರಾಕಿ, ಕೋಟಿ ಕೋಟಿ ಡೀಲ್ ನಡೆಸುತ್ತಾರೆ, ಅವರ ಜೊತೆ ಇರುವ ಹುಡುಗರೇ ೫೦ ರಿಂದ ೧೦೦ ಕೋಟಿ ರೂಪಾಯಿಗಳಷ್ಟು ಅಕ್ರಮ ಹಣಗಳಿಸಿದ್ದಾರೆಂದರೆ ಇನ್ನು ಇವರು ಎಷ್ಟು ಭ್ರಷ್ಟ ಇರಬೇಕು. ಕೆದಕಿದರೆ ಎಲ್ಲ ಆಚೆಗೆ ಬರುತ್ತೆ ಎಂದು ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಗೆ ಮುನ್ನ ಅನಧಿಕೃತವಾಗಿ ಸಲೀಂ ವಿ.ಎಸ್. ಉಗ್ರಪ್ಪನವರ ಕಿವಿಯಲ್ಲಿ ಹೇಳಿದ್ದರು. ಅದಕ್ಕೆ ವಿ.ಎಸ್. ಉಗ್ರಪ್ಪನವರು ಅವರನ್ನು ಅಧ್ಯಕ್ಷ ಮಾಡಲು ಎಷ್ಟು ಕಷ್ಟಪಟ್ಟಿದ್ದೆವು ಎಂದು ಸಲೀಂಗೆ ಹೇಳಿದ್ದರು. ಈ ಸಂಬAಧ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ ಅವರನ್ನೂ ಅಮಾನತು ಮಾಡಲಾಗಿದೆ.

ಮನಮೋಹನ್ ಸಿಂಗ್‌ಗೆ ಅನಾರೋಗ್ಯ:ಆಸ್ಪತ್ರೆಗೆ ದಾಖಲು

ನವದೆಹಲಿ, ಅ. ೧೩: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಹದಗೆಟ್ಟ ಹಿನ್ನೆಲೆ ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್ಸಿ÷್ಟಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್)ಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಸಿಂಗ್ ಅವರು ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಈ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ೮೮ ವರ್ಷದ ಮನಮೋಹನ್ ಸಿಂಗ್ ಅವರು ಕಳೆದ ಏಪ್ರಿಲ್ ೧೯ ರಂದು ಕೋವಿಡ್ ಸೋಂಕಿನಿAದ ಯಶಸ್ವಿಯಾಗಿ ಚೇತರಿಸಿಕೊಂಡು ಏಪ್ರಿಲ್ ೨೯ ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ಯೋಧರೊಂದಿಗೆ ದಸರಾ ಆಚರಿಸಲಿರುವ ರಾಷ್ಟçಪತಿ

ನವದೆಹಲಿ, ಅ. ೧೩: ರಾಷ್ಟçಪತಿ ರಾಮನಾಥ್ ಕೋವಿಂದ್ ಅವರು ತಾ. ೧೪ ಮತ್ತು ೧೫ ರಂದು ಲಡಾಖ್, ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಗಡಿ ಕಾಯುವ ಯೋಧರೊಂದಿಗೆ ದಸರಾ ಉತ್ಸವ ಆಚರಿಸಲಿದ್ದಾರೆ. ೨೦೨೧ರ ಅಕ್ಟೋಬರ್ ೧೪ ರಂದು, ರಾಷ್ಟçಪತಿಗಳು ಸಿಂಧು ಘಾಟ್, ಲೇಹ್‌ನಲ್ಲಿ ಸಿಂಧು ದರ್ಶನ ಪೂಜೆ ನೆರವೇರಿಸಲಿದ್ದಾರೆ ಎಂದು ರಾಷ್ಟçಪತಿ ಭವನ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಕೋವಿಂದ್ ಅವರು ಸಂಜೆ ಉಧಂಪುರದಲ್ಲಿ ಸೈನ್ಯದೊಂದಿಗೆ ಸಂವಾದ ನಡೆಸಲಿದ್ದಾರೆ. ತಾ. ೧೫ ರಂದು ರಾಷ್ಟçಪತಿಗಳು ಡ್ರಾಸಿನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಗಳಿಗೆ ಗೌರವ ಸಲ್ಲಿಸುತ್ತಾರೆ ಮತ್ತು ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಪ್ರಕಟಣೆ ಹೇಳಿದೆ.