ಕಣಿವೆ, ಅ. ೧೩: ಸಮಾಜದೆಲ್ಲೆಡೆ ಜನಮಾನಸದಲ್ಲಿ ಇಂದು ಅಶಾಂತಿ ಅತೃಪ್ತಿಯೇ ಹೆಚ್ಚು ತಾಂಡವ ವಾಡುತ್ತಿರುವ ಸಂದರ್ಭದಲ್ಲಿ ಜನರ ಕಲ್ಯಾಣಕ್ಕಾಗಿ ತೊಡಗಿಸಿಕೊಂಡಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವಿಶ್ವಕ್ಕೆ ಮಾದರಿ ಯಾದ ಸಂಸ್ಥೆ ಎಂದು ವೀರಾಜಪೇಟೆ ತಾಲೂಕಿನ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಕುಶಾಲನಗರದ ರಾಧಾಕೃಷ್ಣ ಬಡಾವಣೆಯಲ್ಲಿ ಸಂಸ್ಥೆಯ ವತಿಯಿಂದ ನೂತನವಾಗಿ ನಿರ್ಮಿಸಿರುವ " ದಿವ್ಯ ಸನ್ನಿಧಿ " ಕಟ್ಟಡ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದ ಅವರು, ಸಮಾಜದಲ್ಲಿ ಇಂದು ಯುವ ಸಮೂಹ ದುಶ್ಚಟ ದುರಭ್ಯಾಸಗಳ ದಾಸರಾಗುತ್ತಿರುವುದು ಒಂದೆಡೆಯಾದರೆ, ಮಾಧ್ಯಮಗಳು ಈ ವಿಚಾರವನ್ನೇ

(ಮೊದಲ ಪುಟದಿಂದ) ವೈಭವೀಕರಿಸುತ್ತಿರುವುದು ಮತ್ತೊಂದೆಡೆ ಕಾಣುತ್ತಿರುವುದು ದುರ್ದೈವದ ಸಂಗತಿ ಎಂದು ವಿಷಾದಿಸಿದರು. ಮನುಷ್ಯ ಇಂದು ಕೇವಲ ಸಂಪತ್ತುಗಳ ಗಳಿಕೆಗೆ ನಿತ್ಯವೂ ಓಡುತ್ತಾ ಅಂತರAಗವನ್ನು ಕಲುಷಿತಗೊಳಿಸಿಕೊಂಡು ವಿನಾಶದತ್ತ ಸಾಗುತ್ತಿದ್ದಾನೆ. ಆದರೆ ನೆಮ್ಮದಿಯುಕ್ತ ಬದುಕಿಗೆ ಬೇಕಾದ ಶಾಂತಿ ನೆಮ್ಮದಿಯನ್ನು ಪಡೆಯುವಲ್ಲಿ ವಿಫಲನಾಗುತ್ತಿದ್ದಾನೆ ಎಂದು ಶ್ರೀಗಳು ವಿಷಾದಿಸಿದರು.

ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿ ಶಾಂತಿಯ ಬೀಜವನ್ನು ಬಿತ್ತುವ ಮೂಲಕ ಸಂತರು ಹಾಗೂ ಶರಣ ಶ್ರೇಷ್ಠರ ವಿಚಾರಧಾರೆಗಳನ್ನು ಅರಿತು ಅಂತರAಗವನ್ನು ರೂಪಾಂತರ ಮಾಡಿಕೊಳ್ಳಬೇಕಿದೆ ಕರೆಕೊಟ್ಟರು.

ಮೈಸೂರಿನ ರಾಜಯೋಗಿ ಬ್ರಹ್ಮಕುಮಾರ ಕರುಣಾಜಿ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿ ನಮ್ಮ ದೇಶೀ ಸಂಸ್ಕೃತಿಯ ಬುಡವನ್ನು ಅಲುಗಾಡಿಸದಂತೆ ಎಚ್ಚರವಹಿಸ ಬೇಕಿದೆ. ಸನಾತನ ಶಿಕ್ಷಣ ಪದ್ಧತಿಯನ್ನು ಪ್ರತಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಕಲಿಸುವಂತಾಗಬೇಕು. ತಂದೆ ತಾಯಂದಿರು ಮನೆಗಳಲ್ಲಿಯೇ ಮಕ್ಕಳಿಗೆ ಮೂಲ ಶಿಕ್ಷಣ ಹೇಳಿಕೊಡುವ ಮೂಲಕ ಸನಾತನ ಪರಂಪರೆಯ ಬೇರಿಗೆ ಧಕ್ಕೆಯಾಗದಂತೆ ಮಕ್ಕಳಲ್ಲಿ ಸಚ್ಚಾರಿತ್ರö್ಯ ತುಂಬಬೇಕಿದೆ. ಕಳೆದ ೮೫ ವರ್ಷಗಳಿಂದಲೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಮಕ್ಕಳಿಂದ ವೃದ್ಧರವರೆಗೂ ಆಧ್ಯಾತ್ಮಿಕ ಶಿಕ್ಷಣವನ್ನು ಕಲಿಸಿಕೊಡುತ್ತಿದೆ ಎಂದರು.

ಮೈಸೂರಿನ ಬ್ರಹ್ಮಕುಮಾರಿ ಮಂದಿರದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷಿö್ಮÃಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಸತ್ಯದ ಅನುಭೂತಿಗಾಗಿ ರಾಜಯೋಗವನ್ನು ಕಲಿಸಲಾಗುತ್ತಿದೆ. ನಾಶವಾಗುವ ಪಂಚಭೂತದಿAದ ನಿರ್ಮಿತವಾದ ದೇಹದ ಸುಖಕ್ಕಾಗಿ ಆತ್ಮಶಾಂತಿಯನ್ನು ಕಳೆದುಕೊಳ್ಳಬಾರದು. ಪ್ರತಿಯೊಬ್ಬರೂ ವ್ಯರ್ಥ ಚಿಂತನೆಗಳಿAದ ಹೊರಬಂದು ಭಗವಂತನ ನಾಮಸ್ಮರಣೆ ಮಾಡುವ ಮೂಲಕ ಆತ್ಮೋನ್ನತಿ ಸಾಧಿಸಬೇಕಿದೆ. ಪರಚಿಂತೆ, ಪರದ್ವೇಷ, ನಕಾರಾತ್ಮಕ ಆಲೋಚನೆಗಳಿಂದ ಘರ್ಷಣೆ, ದ್ವೇಷ, ಸಂಕಷ್ಟಗಳು ಹೆಚ್ಚಳಗೊಂಡು ದೇಹ ಅನಾರೋಗ್ಯಕ್ಕೆ ತುತ್ತಾಗುತ್ತದೆ. ದ್ವೇಷ ಮುಕ್ತರಾಗಿ ಪಾರಮಾರ್ಥಿಕವಾದ ಸದ್ಭಾವನೆಯನ್ನು ಹೊಂದಲು ಭಗವಂತನ ಸ್ಮರಣೆ, ಧ್ಯಾನ ಹಾಗೂ ಚಿಂತನೆ ಹೊಂದಲು ಕರೆಕೊಟ್ಟರು.

ಕೂಡಿಗೆ ಡಯಟ್ ಪ್ರಾಂಶುಪಾಲ ಕೆ.ವಿ.ಸುರೇಶ್, ಉದ್ಯಮಿಗಳಾದ ಸಾತಪ್ಪನ್, ವಿಶ್ವನಾಥನ್ ಮಾತನಾಡಿದರು.

ಶಾಸಕ ಅಪ್ಪಚ್ಚು ರಂಜನ್ ಧ್ವಜಾರೋಹಣ ನೆರವೇರಿಸಿದರು. ಮಡಿಕೇರಿಯ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸಂಚಾಲಕಿ ಗಾಯತ್ರಿಜೀ, ಕುಶಾಲನಗರ ಸಂಸ್ಥೆಯ ಲಲಿತಾಮಣಿ ಜೀ ಇದ್ದರು.

ಮೈಸೂರಿನ ಯಶವಂತಕುಮಾರ್ ತಂಡ ಪ್ರಾರ್ಥನೆ ನೆರವೇರಿಸಿತು. ಜ್ಞಾನೇಶ್ ಸಂಸ್ಥೆಯ ಪರಿಚಯ ಮಾಡಿದರು. ರಾಜಯೋಗಿನಿ ಶಾರದಾಜೀ ಸಾಮೂಹಿಕ ಯೋಗ ಹೇಳಿಕೊಟ್ಟರು. ಮಡಿಕೇರಿಯ ಧನಲಕ್ಷ್ಮಿಜೀ ಸ್ವಾಗತಿಸಿದರು. ರಂಗನಾಥನ್ ನಿರೂಪಿಸಿದರು. ದೇಚಮ್ಮ ವಂದಿಸಿದರು.