ಸೋಮವಾರಪೇಟೆ, ಅ. ೧೩: ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. ೨.೫೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನುದಾನದ ಚೆಕ್‌ನ್ನು ದೇವಾಲಯ ಸಮಿತಿಗೆ ಹಸ್ತಾಂತರಿಸಲಾಯಿತು.

ಆAಜನೇಯ ದೇವಾಲಯದ ನಿರ್ಮಾಣ ಕಾರ್ಯ ಈಗಾಗಲೇ ಪ್ರಗತಿಯಲ್ಲಿದ್ದು, ಶ್ರೀ ಕ್ಷೇತ್ರದಿಂದ ಬಿಡುಗಡೆಯಾದ ಅನುದಾನದ ಚೆಕ್‌ನ್ನು ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ್ ಅವರು, ಶಾಸಕ ಅಪ್ಪಚ್ಚು ರಂಜನ್ ಅವರ ಮೂಲಕ ದೇವಾಲಯ ಸಮಿತಿಗೆ ನೀಡಿದರು.

ಈ ಸಂದರ್ಭ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ್, ಪ್ರಮುಖರಾದ ನಂದಕುಮಾರ್, ಅಭಿಮನ್ಯುಕುಮಾರ್, ಯೋಜನೆಯ ಯೋಜನಾಧಿಕಾರಿ ರೋಹಿತ್‌ಕುಮಾರ್, ಮೇಲ್ವಿಚಾರಕ ಸಂತೋಷ್‌ಕುಮಾರ್, ಸೇವಾ ಪ್ರತಿನಿಧಿ ಬಿಂಧು, ಪವನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.