ಮಡಿಕೇರಿ, ಅ. ೧೩: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿಯಮಿತ ಮಡಿಕೇರಿ, ಇದರ ೨೦೨೦-೨೧ನೇ ಸಾಲಿನ ೯೬ನೇ ವಾರ್ಷಿಕ ಮಹಾಸಭೆ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಅಧ್ಯಕ್ಷತೆಯಲ್ಲಿ ಮಡಿಕೇರಿಯ ಕೊಡವ ಸಮಾಜದಲ್ಲಿ ನಡೆಯಿತು. ಸಭೆಯಲ್ಲಿ ೨೨೮ ಬ್ಯಾಂಕಿನ ಸದಸ್ಯರು, ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಪ್ರತಿನಿಧಿಗಳು ಹಾಜರಿದ್ದು, ಬ್ಯಾಂಕಿನ ಅಭಿವೃದ್ಧಿಗೆ ಪೂರಕವಾದ ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು. ಸಹಕಾರ ಸಂಘಗಳ ಮುಖಾಂತರ ರೈತರಿಗೆ ರೂ. ೩ ಲಕ್ಷದವರೆಗೆ ಶೂನ್ಯ ಬಡ್ಡಿ ದರ ಹಾಗೂ ೩ ಲಕ್ಷಕ್ಕೆ ಮೇಲ್ಪಟ್ಟ ಸಾಲಕ್ಕೆ ಸಾಮಾನ್ಯ ಬಡ್ಡಿ ದರದಲ್ಲಿ ಕೆಸಿಸಿ ಸಾಲ ಹಾಗೂ ರೂ.೧೦ ಲಕ್ಷದವರೆಗೆ ಶೇ.೩ರ ಬಡ್ಡಿ ದರ ಹಾಗೂ ೧೦ ಲಕ್ಷಕ್ಕೆ ಮೇಲ್ಪಟ್ಟ ಸಾಲಕ್ಕೆ ಸಾಮಾನ್ಯ ಬಡ್ಡಿ ದರದಲ್ಲಿ ನೀಡುವ ಮಧ್ಯಮಾವಧಿ ಸಾಲಕ್ಕೆ ಸಂಬAಧಿಸಿದAತೆ ಸರ್ಕಾರವು ಪರಿಷ್ಕೃತ ಆದೇಶ ಹೊರಡಿಸಿರುವ ಬಗ್ಗೆ ಸರ್ಕಾರಕ್ಕೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು.

ಹಾರಂಗಿ ಅಣೆಕಟ್ಟು ಮುಳುಗಡೆ ಪ್ರದೇಶದಲ್ಲಿನ ಸಹಕಾರ ಸಂಘಗಳ ರೈತರಿಗೆ ಸರ್ಕಾರವು ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯ ಮಾಡುವ ಸಲುವಾಗಿ ಡಿಸಿಸಿ ಬ್ಯಾಂಕಿನಲ್ಲಿ ಜಂಟಿ ಖಾತೆಯನ್ನು ತೆರೆದು ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ಜಿಲ್ಲಾ ಕೇಂದ್ರ ಬ್ಯಾಂಕಿನ ಮುಂದಾಳತ್ವ ವಹಿಸುವಂತೆ ತೀರ್ಮಾನಿಸಲಾಯಿತು. ಬ್ಯಾಂಕು ವರದಿ ಸಾಲಿನಲ್ಲಿ ೯.೧೩ ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯ ಸಹಕಾರ ಸಂಘಗಳಿಗೆ ಬ್ಯಾಂಕು ಮೊದಲು ಶೇ. ೧೧ ಡಿವಿಡೆಂಡ್ ನೀಡಲು ತೀರ್ಮಾನಿಸಿದ್ದು, ಸಹಕಾರ ಸಂಘಗಳ ಪ್ರತಿನಿಧಿಗಳ ಕೋರಿಕೆಯಂತೆ ಶೇ.೧೨ ಡಿವಿಡೆಂಡ್ ಪಾವತಿಸಲು ತೀರ್ಮಾನಿಸಲಾಯಿತು.

ಶತಮಾನವನ್ನು ಪೂರೈಸಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಬಾಂಡ್ ಗಣಪತಿಯವರ ಮುಂದಾಳತ್ವದಲ್ಲಿ ಜನಪರ ಯೋಜನೆಗಳನ್ನು ಹಮ್ಮಿಕೊಂಡು ಉತ್ತಮವಾಗಿ ಕೆಲಸ ನಿರ್ವಹಿಸುತ್ತಾ ಪ್ರಗತಿಪಥದಲ್ಲಿ ಸಾಗುತ್ತಿರುವುದಕ್ಕೆ ಮಹಾಸಭೆಯು ಪ್ರಶಂಸೆಯನ್ನು ವ್ಯಕ್ತಪಡಿಸಿತು. ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರುಗಳಾದ ಬಿ.ಕೆ. ಚಿಣ್ಣಪ್ಪ, ಬಿ.ಡಿ. ಮಂಜುನಾಥ್, ಹೊಟ್ಟೇಂಗಡ ಎಂ. ರಮೇಶ್, ಪಟ್ರಪಂಡ ರಘು ನಾಣಯ್ಯ, ಎಸ್.ಬಿ. ಭರತ್ ಕುಮಾರ್, ಹೊಸೂರು ಜೆ. ಸತೀಶ್ ಕುಮಾರ್, ಕನ್ನಂಡ ಎ. ಸಂಪತ್, ಕೋಲತಂಡ ಎ. ಸುಬ್ರಮಣಿ, ಅಪ್ಪಚೆÀಟ್ಟೋಳಂಡ ಮನು ಮುತ್ತಪ್ಪ, ಕಿಮ್ಮುಡಿರ ಜಗದೀಶ್, ಕೆ. ಅರುಣ್ ಭೀಮಯ್ಯ, ಎ. ಗೋಪಾಲ ಕೃಷ್ಣ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ರವಿಕುಮಾರ್ ಮತ್ತು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಕೋಡಿರ ಕೆ. ಪೂವಯ್ಯ ಸೇರಿದಂತೆ ಬ್ಯಾಂಕಿನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.