ನಾಪೋಕ್ಲು, ಅ. ೧೩: ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ನವರಾತ್ರಿ ಪ್ರಯುಕ್ತ ಶಾರದ ಪೂಜೆ ನಡೆಸಲಾಯಿತು.

ಶಿಕ್ಷಕ ಮತ್ತು ಅರ್ಚಕರಾದ ಶ್ರೀಪತಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಚಂದ್ರಕಲಾ, ಶಿಕ್ಷಕರಾದ ಸುಬ್ರಮಣಿ, ಗಿರಿಜಾ, ಪುಷ್ಪಾವತಿ, ನೇತ್ರಾವತಿ, ಪೋಷಕರು ಮತ್ತು ವಿದ್ಯಾರ್ಥಿಗಳು ಇದ್ದರು.