ಮಡಿಕೇರಿ, ಅ. ೧೩ : ನಗರದ ಜನರಲ್ ತಿಮ್ಮಯ್ಯ ವೃತ್ತದ ಸಮೀಪ ಮರ್ಕೆರ ನರ್ಸಿಂಗ್ ಹೋಮ್ ಕಾಂಪೌAಡ್‌ಗೆ ಹೊಂದಿಕೊAಡಿರುವ ಅಂಗಡಿಗಳ ಮುಂದೆ ದ್ವಿಚಕ್ರ ವಾಹನಗಳಿಗೆ ಗುರುತಿಸಿರುವ ಜಾಗದಲ್ಲಿ ಕೆಸರು ಮಿಶ್ರಿತ ಕಸದ ರಾಶಿ ಗುಡ್ಡೆ ಸೇರಿದೆ.

ಮೊದಲೇ ಇಕ್ಕಟ್ಟಾಗಿ ಪಾರ್ಕಿಂಗ್ ಸಮಸ್ಯೆ ಎದುರಿಸುತ್ತಿರುವ ಈ ವ್ಯಾಪ್ತಿಯಲ್ಲಿ ಇದೀಗ ಮತ್ತಷ್ಟು ಸಮಸ್ಯೆ ಎದುರಾಗಿದೆ. ನಗರದಲ್ಲಿ ವಿನೂತನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಮುನ್ನ ಪ್ರಸ್ತುತ ಇರುವ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ನಿರ್ವಹಣೆಯಾಗಬೇಕೆಂದು ಸ್ಥಳೀಯರು ನಗರಸಭೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- ಟಿ.ಜಿ. ಸತೀಶ್