ವೀರಾಜಪೇಟೆ, ಅ. ೧೩: ವೀರಾಜಪೇmಯ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿರುವ ದುರ್ಗಾ ಮಾತೆಯ ಗುಡಿಯಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾ ಪೂಜೆ ನಡೆಯಿತು.

ಬೆಳಿಗ್ಗೆನಿಂದಲೇ ಪೂಜಾ ಕಾರ್ಯಕ್ರಮವು ಆರಂಭಗೊAಡು ವಿಶೇಷವಾಗಿ ಕುಂಕುಮಾರ್ಚನೆ, ಪುಷ್ಪಾರ್ಚನೆ, ದುರ್ಗಾ ಶ್ಲೋಕ ಪಠಣ, ಭಜನೆ, ನೈವೇದ್ಯ ಸಮರ್ಪಣೆ ಹಾಗೂ ದೇವಿಗೆ ವಿಶೇಷ ಪೂಜಾ ಸೇವೆಗಳನ್ನು ಸಮರ್ಪಿಸಲಾಯಿತು.

ಮಹಾ ಮಂಗಳಾರತಿಯ ಬಳಿಕ ಪ್ರಸಾದ ವಿತರಣೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಿತು. ಬೇಟೋಳಿ ಹಾಗೂ ಸಮೀಪದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.