ಮಡಿಕೇರಿ, ಅ.೧೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಪೈಲಾರು ಶೌರ್ಯ ಯುವತಿ ಮಂಡಳ ಮತ್ತು ಚೊಕ್ಕಾಡಿ ಮುನ್ನೂರೊಕ್ಲು ಗೌಡ ಬಾಂಧವರ ಸಮಿತಿ ಸಹಯೋಗದಲ್ಲಿ ತಾ.೧೫ ರಂದು ಬೆಳಗ್ಗೆ ೧೦ ಗಂಟೆಗೆ ಅರೆಭಾಷೆ ಸಂಸ್ಕೃತಿ ಶಿಬಿರವು ಸುಳ್ಯ ತಾಲೂಕಿನ ಪೈಲಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಲಿದೆ.
ಚೊಕ್ಕಾಡಿ ಮುನ್ನೋರೊಕ್ಲು ಮಾಗಣಿ ಗೌಡ್ರು ವೆಂಕಟ್ರಮಣ ಕರ್ಮಾಜೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷಿö್ಮÃನಾರಾಯಣ ಕಜೆಗದ್ದೆ, ಮಾಜಿ ಸದಸ್ಯರಾದ ಅಣ್ಣಾಜಿ ಗೌಡ ಪೈಲೂರು, ಚೊಕ್ಕಾಡಿ ಮುನ್ನೂರೊಕ್ಲು ಗೌಡ ಬಾಂಧವರ ಸಮಿತಿ ಗೌರವಾಧ್ಯಕ್ಷರಾದ ಪುಟ್ಟಣ ಗೌಡ ಪೈಲೂರು, ಅಮರಮುಡ್ನೂರು ಗ್ರಾ.ಪಂ. ಅಧ್ಯಕೆÀ್ಷ ಪದ್ಮಪ್ರಿಯಾ, ಪೈಲಾರ್ ಸ.ಹಿ.ಪ್ರಾ.ಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯೋಗೀಶ್ ಮಾಡಬಾಕಿಲು ಇತರರು ಪಾಲ್ಗೊಳ್ಳಲಿದ್ದಾರೆ.
ತಾ.೧೭ ರಂದು ಮಧ್ಯಾಹ್ನ ೨.೩೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ಇತರರು ಪಾಲ್ಗೊಳ್ಳಲಿದ್ದಾರೆ.