ಮಡಿಕೇರಿ, ಅ. ೧೨ : ‘ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ, ಸ್ಥಳಾಂತರಕ್ಕೆ ಕ್ರಮ ತೆಗೆದುಕೊಳ್ಳಿ’ ಎಂದು ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸು ವವರಿದ್ದಾರೆ. ನಾಯಿಮರಿಯೊಂದು ವಾಹನ ಅಪ್ಪಳಿಸಿದ ಪರಿಣಾಮ ಸಾವನ್ನಪ್ಪಿದರೆ, ಆದಷ್ಟು ಬೇಗ ಪೌರಕಾರ್ಮಿಕರನ್ನು ಕರಿಸಿ ಮೃತದೇಹವನ್ನು ಕಸದ ಲಾರಿಗೆ ಹಾಕಿಸಿ ಕಳುಹಿಸುವವರಿದ್ದಾರೆ. ನಾಯಿಯ ವಿಷಯ ನಮಗೇಕೆ ಎನ್ನುತ ಅವರ ಪಾಡಿಗೆ ಅವರು ತೆರಳುವ ಮಂದಿ ಬಹಳಷ್ಟಿದ್ದಾರೆ. ಗಾಯಗೊಂಡ ನಾಯೊಂದು ಬೀದಿಯಲ್ಲಿ ಅಲೆದಾಡುವಾಗ, ‘ಅಯ್ಯೋ ಪಾಪ’À ಎಂದು ಬೇಸರ ವ್ಯಕ್ತಪಡಿಸುವ ಕಾರ್ಯಕ್ಕೆ ಸೀಮಿತವಾಗಿರುವವರ ಸಂಖ್ಯೆ ಅಪಾರ.

ಇಂತಹವರೆಲ್ಲರ ಮಧ್ಯೆ ವಿಶೇಷ ಎಂಬAತೆ ಗಾಯಗೊಂಡಿರುವ ಅಥವಾ ಅನಾಥ ನಾಯಿ-ಬೆಕ್ಕು ಮರಿಗಳಿಗೆ ಆಶ್ರಯ, ಊಟ ನೀಡಿ ಹೊಸ ಬದುಕು ಕಲ್ಪಿಸುವ ಕಾರ್ಯಕ್ಕೆ ತಂಡವೊAದು ಕಾರ್ಯಪ್ರವೃತ್ತವಾಗಿದೆ. ಮಡಿಕೇರಿಯ ‘ಸಿಂಬಾಸ್ ಹೋಮ್’ ಎಂಬ ತಂಡ ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಮಾನವೀಯ ಕಾರ್ಯಕ್ಕೆ ಮುಂದಾಗಿದೆ.

ಬೀದಿಯಲ್ಲಿ ಅನಾಥ ನಾಯಿಮರಿ ಹಾಗೂ ಬೆಕ್ಕು ಮರಿಗಳು ಇರುವುದು ಇವರ ಗಮನಕ್ಕೆ ಬಂದರೆ ತಕ್ಷಣ

(ಮೊದಲ ಪುಟದಿಂದ) ಕಾರ್ಯಪ್ರವೃತ್ತರಾಗಿ ತಂಡದಲ್ಲಿನ ೯ ಸ್ವಯಂ ಸೇವಕರ ಪೈಕಿ ಯಾರಾದರು ಅದನ್ನು ತಮ್ಮ ಮನೆಗೆ ಕರೆದೊಯ್ಯುತ್ತಾರೆ. ಇಲ್ಲಿ ಇವುಗಳನ್ನು ಪೋಷಿಸುತ್ತಾರೆ. ನಾಯಿ, ಬೆಕ್ಕುವಿನ ಫೋಟೋ ಮಾಹಿತಿ ಸಮೇತ ತಮ್ಮ ಸಾಮಾಜಿಕ ಜಾಲತಾಣದ ಪೇಜ್‌ವೊಂದರಲ್ಲಿ ಅಪ್‌ಲೋಡ್ ಮಾಡುತ್ತಾರೆ. ನಾಯಿಯನ್ನು ಸಾಕಲು ಯಾರಾದರು ಬಯಸಿದ್ದಲ್ಲಿ ನೇರವಾಗಿ ಈ ತಂಡದವರನ್ನು ಸಂಪರ್ಕಿಸಿ ಅನಾಥ ಜೀವಿಗೆ ಆಶ್ರಯ, ಆಹಾರ ನೀಡುವ ಮಹಾತ್ಕಾರ್ಯಕ್ಕೆ ಮುಂದಾಗುತ್ತಾರೆ. ಸಾಕಲು ಬಯಸುವವರ ಮನೆಗೆ ಪ್ರಾಣಿಗಳನ್ನು ಸಾಗಿಸುವ ಕೆಲಸವನ್ನು ತಂಡದವರೇ ನೆರವೇರಿಸುತ್ತಾರೆ.

ರಕ್ಷಣೆ ಮಾಡಿದ ಪ್ರಾಣಿಗಳಿಗೆ ಗಾಯಗಳಾಗಿದ್ದಲ್ಲಿ, ಮಡಿಕೇರಿಯ ಪಶುವೈದ್ಯ ಡಾ. ಚಿದಾನಂದ ಅವರ ಸಹಕಾರದಿಂದ ಪೋಷಿಸುವ ಕೆಲಸವನ್ನೂ ಇವರುಗಳು ಮಾಡುತ್ತಾರೆ. ತಂಡದಲ್ಲಿನ ಸ್ವಯಂ ಸೇವಕರು ಹೆಚ್ಚಿನವರು ಮಡಿಕೇರಿಯವರೇ ಆಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ವರ್ಕ್ ಫ್ರಮ್ ಹೋಮ್’ ಸೌಲಭ್ಯದ ಮೂಲಕ ಕೆಲಸ ನಿರ್ವಹಿಸು ತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಬೆಂಗಳೂರು, ಮೈಸೂರು ಗಳಂತಹ ಮಹಾನಗರಗಳಲ್ಲಿ ಪ್ರಾಣಿ ರಕ್ಷಣೆಯ ಹಲವಷ್ಟು ಸಂಘ-ಸAಸ್ಥೆಗಳು ಚಾಲ್ತಿಯಲ್ಲಿವೆ. ಕೊಡಗು ಜಿಲ್ಲೆಯಲ್ಲಿ ಇದರ ಕೊರತೆಯಿದ್ದು, ‘ಸಿಂಬಾಸ್ ಹೋಮ್’ ತಂಡದ ಶ್ರಮದಿಂದಾಗಿ ಮೂಕ ಪ್ರಾಣಿಗಳಿಗೆ ಮರು ಜೀವ ಸಿಗುವ ಕೆಲಸವಾಗುತ್ತಿದೆ.

ಈ ತಂಡವು ಯಾವುದೇ ಎನ್.ಜಿ.ಒ ರೀತಿಯ ಸಂಸ್ಥೆಯಲ್ಲ. ಸಾಮಾಜಿಕ ಜಾಲತಾಣವನ್ನು ಸಕಾರಾತ್ಮಕವಾಗಿ ಬಳಸುತ್ತಿರುವ ಕೇವಲ ಸ್ವಯಂ ಸೇವಕರಿಂದ ಕೂಡಿರುವ ತಂಡವಾಗಿದೆ.

ಇನ್ನು ಮುಂದೆ ಬೀದಿ ಬದಿಯಲ್ಲಿ ಅನಾಥ ನಾಯಿ-ಬೆಕ್ಕುಮರಿಗಳು ಅಸಹಾಯಕತೆ ತೋರುತ್ತಿರುವುದು ಗಮನಕ್ಕೆ ಬಂದರೆ ‘ಸಿಂಬಾಸ್ ಹೋಮ್’ ತಂಡದ ಸ್ವಯಂ ಸೇವಕರನ್ನು ಮೊ: ೯೯೦೨೫೫೪೧೮೧, ೮೯೫೧೩೧೮೫೭೦, ೯೫೩೫೩೦೭೭೫೯, ೯೪೮೦೮೯೦೮೪೦ ಮೂಲಕ ಸಂಪರ್ಕಿಸಬಹುದು.

ಅನಾಥ ಪ್ರಾಣಿಗಳನ್ನು ಸಾಕಲು ಬಯಸುವವರು ಇನ್ಸ್ಟಾಗ್ರಾಮ್‌ನಲ್ಲಿ @ಣhe_simbಚಿs_home ಖಾತೆಯನ್ನು ಗಮನಿಸುತ್ತಿರಬಹುದು.