ನಾಪೋಕ್ಲು, ಅ. ೧೨: ಭಾರತ ದೇಶದ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಒಂದಾದ ಇಂಡಿಯನ್ ಆಯಿಲ್ ಸರ್ವೋ ಸುರ್ಜಿತ್ ಹಾಕಿ ಪಂದ್ಯಾವಳಿ ತಾ. ೨೩ ರಿಂದ ಪಂಜಾಬಿನ ಜಲಂದರ್ನಲ್ಲಿ ನಡೆಯಲಿದ್ದು, ಈ ಪಂದ್ಯಾಟಕ್ಕೆ ತೀರ್ಪುಗಾರರಾಗಿ ಹಾಕಿ ಇಂಡಿಯಾದ ಕೊಡಗಿನ ಕೊಂಡೀರ ಕೀರ್ತಿ ಮುತ್ತಪ್ಪ ಆಯ್ಕೆಯಾಗಿದ್ದಾರೆ. ಇವರು ಕೊಡಗು ಜಿಲ್ಲೆಯ ನಾಪೋಕ್ಲು ಬಳಿಯ ಬೇತು ಗ್ರಾಮದ ನಿವಾಸಿ.