ಮಡಿಕೇರಿ, ಅ. ೧೨: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ೭೧ನೆಯ ಜನ್ಮದಿನ ಹಾಗೂ ೨೦ ವರ್ಷಗಳ ರಾಷ್ಟç ಸಮರ್ಪಿತ ಸೇವೆಯ ಹಿನ್ನೆಲೆಯಲ್ಲಿ ಅವರ ಜೀವನ ಮತ್ತು ಸಾಧನೆಯ ಕುರಿತು ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ಬಿ.ಜೆ.ಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ "ನವಭಾರತ ಮೇಳ" ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬಿಜೆಪಿಯ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಯುವ ಮೋರ್ಚಾ ಸದಸ್ಯರಾದ ಮಹೇಶ್ ತಿಮ್ಮಯ್ಯ, ಕೊಡಗು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಜೋಯಪ್ಪ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಚಂಗಪ್ಪ, ಯಶ್ವಿನ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಕಾರ್ಯಕ್ರಮದ ಸಂಚಾಲಕ ನವನೀತ್ ಪೊನ್ನೇಟಿ, ಸಹ ಸಂಚಾಲಕ ಶರಣ್ ಪ್ರಕಾಶ್, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿತಾ ಪೂವಯ್ಯ, ಪದಾಧಿಕಾರಿಗಳಾದ ಅಂಜನ್, ವಿನಯ್ ರಾಜ್, ಪ್ರೀತಂ, ವಿಘ್ನೇಶ್, ಪ್ರವೀಣ್, ರಾಮನಾಥನ್, ಸುನೀಲ್, ವಿವೇಕ್ ನರೇನ್ ಹಾಜರಿದ್ದರು.