ನಾಪೋಕ್ಲು, ಅ. ೧೨: ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ತಾ. ೧೭ ರಂದು ೨೬ನೇ ವರ್ಷದ ಕಾವೇರಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ತಿಳಿಸಿದ್ದಾರೆ. ಬೆಳಿಗ್ಗೆ ೬ ಗಂಟೆಗೆ ಪೂಜಾ ವಿಧಿವಿಧಾನಗಳೊಂದಿಗೆ ಪಾಲೂರಿನ ಪಾಲೂರಪ್ಪ ದೇವಾಲಯದಿಂದ ಹೊರಟು ೧೦.೩೦ಕ್ಕೆ ಭಾಗಮಂಡಲ ತಲುಪಲಿದೆ. ತಲಕಾವೇರಿಯಲ್ಲಿ ತೀರ್ಥೋದ್ಭವದ ಬಳಿಕ ೩.೩೦ಕ್ಕೆ ಭಾಗಮಂಡಲದಿAದ ರಥಯಾತ್ರೆ ಆರಂಭಗೊAಡು ಚೇರಂಗಾಲ, ಅಯ್ಯಂಗೇರಿ, ಪುಲಿಕೋಟು, ಬಲ್ಲಮಾವಟಿ, ನೆಲಜಿ ಮಾರ್ಗವಾಗಿ ರಾತ್ರಿ ೯.೩೦ಕ್ಕೆ ನಾಪೋಕ್ಲು ತಲುಪಲಿದೆ. ತಾ. ೧೮ ರಂದು ೧೦.೩೦ಕ್ಕೆ ರಥಯಾತ್ರೆ ನಾಪೋಕ್ಲುವಿನಿಂದ ಹೊರಟು ಪಾಲೂರು ಹರಿಶ್ಚಂದ್ರ ದೇವಾಲಯದಲ್ಲಿ ವಿಶೇಷ ಪೂಜೆ ಬಳಿಕ ವಿಸರ್ಜನೆಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.