ಶನಿವಾರಸಂತೆ, ಅ. ೧೨: ಸಂಘಟನೆಗಳು ಒಗ್ಗಟ್ಟನ್ನು ಕಾಯ್ದುಕೊಂಡು ದುರ್ಬಲರ ಅಭ್ಯುದಯಕ್ಕಾಗಿ ಒಂದೇ ವೇದಿಕೆಯಡಿ ಕಾರ್ಯನಿರ್ವಹಿಸುವ ಮೂಲಕ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಬೇಕು ಎಂದು ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಸಲಹೆ ನೀಡಿದರು.
ಪಟ್ಟಣದ ಬಸಪ್ಪ ಕಲ್ಯಾಣ ಮಂಟಪದ ಡಾ. ಸಿದ್ಧಲಿಂಗಯ್ಯ ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿ ಒಕ್ಕೂಟ ಹಾಗೂ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಸಂಚಾಲಕ ಜಗದೀಶ್ ಹಡ್ಲಳ್ಳಿ ರಚಿತ ‘ಅಹಿಂದವರ್ಗದ ಅಭಿವೃದ್ಧಿಯ ಮೇರು ಶಿಖರ ಶ್ರೀ ಸಿದ್ದರಾಮಯ್ಯ’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಾಹಿತಿ ಡಾ. ಸಿದ್ಧಲಿಂಗಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯದ ದ.ಸಂ.ಸ. ಸಂಚಾಲಕ ಲಕ್ಷಿö್ಮÃನಾರಾಯಣ ನಾಗವಾರ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ. ದಲಿತರು ಎಲ್ಲಾ ಕಹಿ ಮರೆತು ಒಂದಾಗಿ, ಸಂಘಟಿತರಾಗಿ ಸಮಾಜದಲ್ಲಿ ನೋವುಂಡವರ ಕೆಲಸ ಮಾಡಬೇಕು ಎಂದರು.
ಬೆAಗಳೂರಿನ ಪ್ರೊ. ಕೃಷ್ಣಪ್ಪ ಟ್ರಸ್ಟ್ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ, ವಿಚಾರವಾದಿ ರುದ್ರಪ್ಪ ಹನಗವಾಡಿ, ಸಂಚಾಲಕ ಗುರುಪ್ರಸಾದ್ ಕರಗೂರು, ಸಂಯೋಜಕ ಅಣ್ಣಯ್ಯ, ಒಕ್ಕೂಟದ ಜಿಲ್ಲಾ ಅಧ್ಯಕ್ಷ ಪಾಲಾಕ್ಷ, ತಾಲೂಕು ಅಧ್ಯಕ್ಷ ಜನಾರ್ಧನ್ ಅವರು ಸಂಘಟನೆಯನ್ನು ಬಲಪಡಿಸುವ ಕುರಿತು ಮಾತನಾಡಿದರು.
ರಾಜ್ಯದ ೬ ಸಂಘಟನೆಗಳ ಸಂಚಾಲಕರು ಒಂದೇ ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಡಾ. ಸಿದ್ದಲಿಂಗಯ್ಯ ಅವರ ಕವಿತೆ ಮತ್ತು ನುಡಿಗಳ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಸಂಚಾಲಕ ಮಾವಳ್ಳಿ ಶಂಕರ್, ಮೈಸೂರ್ ರಂಗಾಯಣ ಜನಮನ ಜನಾರ್ಧನ್ ಬನ್ನಿ ಅವರು ವಿಷಯ ಮಂಡಿಸಿದರು.
ಮಾಜಿ ಸಂಸದ ಆರ್. ಧ್ರುವನಾರಾಯಣ್, ಕೆಂಗೇರಿ ಡಿಸಿಪಿ ಸಿದ್ದರಾಜು, ವಕೀಲರಾದ ಎಚ್.ಎಸ್. ಚಂದ್ರಮೌಳಿ, ಶಂಕರ್, ಪ್ರಮುಖರಾದ ಅನಂತಕುಮಾರ್, ಜಗದೀಶ್, ಧರ್ಮಜಾ, ವೀರೇಂದ್ರ, ಗೋವಿಂದರಾಜ್, ಮಧುಸೂದನ್, ಪರಶುರಾಮ್, ಶಿವಲಿಂಗ, ಸಂದೀಪ್, ಇಂದ್ರೇಶ್, ಕಾಂತರಾಜ್, ಶಿಕ್ಷಕ ಡಿ.ಪಿ. ಸತೀಶ್ ಇತರರು ಉಪಸ್ಥಿತರಿದ್ದರು.