ಮಡಿಕೇರಿ, ಅ. ೧೨: ಮಡಿಕೇರಿ ರೇಸ್ಕೋರ್ಸ್ ರಸ್ತೆಯ ಎಲ್.ಐ.ಸಿ ಕಚೇರಿ ಸಮೀಪ ರಸ್ತೆಯಲ್ಲಿ ಮೊನ್ನೆ ಇದ್ದಕ್ಕಿದ್ದಂತೆ ಗುಂಡಿ ಕಾಣಿಸಿಕೊಂಡಿದ್ದು, ನೀರು ಹೊರ ಹರಿಯಲಾರಂಭಿಸಿದೆ. ಯು.ಜಿ.ಡಿ. ಪೈಪ್ ಒಡೆದಿರುವ ಕಾರಣ ಗುಂಡಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಆದರೆ ಇದನ್ನು ಪರಿಶೀಲಿಸದೆ ಗುಂಡಿ ಮುಚ್ಚುವ ಸಲುವಾಗಿ ಕಾಟಾಚಾರಕ್ಕೆ ಮಣ್ಣು ತಂದು ಸುರಿಯಲಾಗಿದೆ. ಇದೀಗ ಸುರಿಯುತ್ತಿರುವ ಅಕಾಲಿಕ ಮಳೆ ಯೊಂದಿಗೆ ಪೈಪ್ ನಿಂದ ಹೊರ ಬರುತ್ತಿರುವ ನೀರು ಸೇರಿಕೊಂಡು ಇಡೀ ರಸ್ತೆ ಕೆಸರುಮಯ ವಾಗಿದೆ. ಅತ್ತ ಗುಂಡಿಯೂ ಮುಚ್ಚದೆ, ಇತ್ತ ಕೆಸರೂ ಆವೃತ ಗೊಂಡಿರುವ ಕಾರಣ ಈ ಬದಿಯಿಂದ ದ್ವಿಚಕ್ರ ವಾಹನ ಸಂಚಾರ ಅಪಾಯಕಾರಿಯಾಗಿದೆ. ಸಂಬAಧಿಸಿದ ನಗರಸಭಾ ಸದಸ್ಯರು ಇತ್ತ ಗಮನಹರಿಸಬೇಕೆಂದು ಸಾರ್ವಜನಿಕರು ಪತ್ರಿಕೆಯ ಮೂಲಕ ಕೋರಿದ್ದಾರೆ.