ಸಿದ್ದಾಪುರ, ಅ. ೧೧: ಹುಲಿ ದಾಳಿಗೆ ಜಾನುವಾರುಗಳು ಬಲಿಯಾಗಿರುವ ಘಟನೆ ಚೆನ್ನಂಗಿ ಗ್ರಾಮದ ದಿಡ್ಡಳ್ಳಿಯಲ್ಲಿ ನಡೆದಿದೆ. ಚೆನ್ನಯ್ಯಕೋಟೆ ಗ್ರಾ.ಪಂ. ಸದಸ್ಯ ಹಾಗೂ ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ ಎಂಬವರಿಗೆ ಸೇರಿದ ಹಸು ಹಾಗೂ ಕರು ಭಾನುವಾರದಂದು ಮೇಯಲು ಬಿಟ್ಟಿದ್ದರು. ಸಂಜೆಯಾದರೂ ಕೂಡ ಜಾನುವಾರುಗಳು ಮನೆಗೆ ಬಾರದ ಇರುವ ಹಿನ್ನೆಲೆ ಸಂಶಯದಿAದ ಹುಡುಕಾಡಿದ ಸಂದರ್ಭದಲ್ಲಿ ಜಾನುವಾರುಗಳ ಕಳೇಬರ ದಿಡ್ಡಳ್ಳಿಯ ಕಾಡಿನಲ್ಲಿ ಪತ್ತೆಯಾಗಿವೆ.

ಎರಡು ಜಾನುವಾರುಗಳ ಪೈಕಿ ಒಂದು ಎರಡು ತಿಂಗಳ ಕರು ಇರುವ ಹಾಲು ಕರೆಯುವ ಹಸು ಆಗಿದ್ದು, ಹಸು ಸಾವಿನಿಂದಾಗಿ ಕರು ತಬ್ಬಲಿಯಾಗಿದೆ. ಹುಲಿಯು ಜಾನುವಾರುಗಳ ಮೇಲೆ ದಾಳಿ ನಡೆಸಿ ಅರ್ಧಭಾಗವನ್ನು ತಿಂದು ಹಾಕಿದೆ. ಹುಲಿ ದಾಳಿಯಿಂದಾಗಿ ಜಾನುವಾರುಗಳು ಮೃತಪಟ್ಟಿದ್ದು, ಮಾಲೀಕರಿಗೆ ಅಪಾರ ನಷ್ಟವಾಗಿದೆ.

ಕಳೆದ ಕೆಲವು ತಿಂಗಳಿನಿAದ ದಿಡ್ಡಳ್ಳಿ ಬಸವನಹಳ್ಳಿ ಭಾಗದಲ್ಲಿ ಬೃಹತ್ ಗಾತ್ರದ ಹುಲಿಯೊಂದು ಜನನಿಬಿಡ ಪ್ರದೇಶಗಳಲ್ಲಿ ರಾತ್ರಿ ಸಮಯದಲ್ಲಿ ಸುತ್ತಾಡುತ್ತಿವೆ ಎಂದು ಆದಿವಾಸಿ ಹೋರಾಟಗಾರ್ತಿ ಜೆ.ಕೆ. ಮುತ್ತಮ್ಮ ತಿಳಿಸಿದ್ದಾರೆ. ಈ ಹುಲಿಯು ಜಾನುವಾರುಗಳ ಮೇಲೆ ಹಾಡಹಗಲೇ ದಾಳಿ ನಡೆಸಿ ಸಾಯಿಸುತ್ತಿದೆ. ಕಳೆದೆರಡು ದಿನಗಳ ಹಿಂದೆ ಚೆನ್ನಂಗಿ, ದಿಡ್ಡಳ್ಳಿ ಭಾಗದ ರಾಮಪ್ಪ ಎಂಬವರ ಜಾನುವಾರು ಮೇಲೆ ದಾಳಿ ನಡೆಸಿ ಸಾಯಿಸಿದೆ. ಹುಲಿಯ ಹಾವಳಿ ಈ ಭಾಗದಲ್ಲಿ ಇದ್ದರೂ ಕೂಡ ಅರಣ್ಯ ಇಲಾಖಾಧಿಕಾರಿಗಳು ಹುಲಿಯ ಸೆರೆಗೆ ಮುಂದಾಗದೇ ನಿರ್ಲಕ್ಷö್ಯ ವಹಿಸುತ್ತಿದ್ದಾರೆಂದು ಮುತ್ತಮ್ಮ ಆರೋಪಿಸಿದರು.

ಜಾನುವಾರುಗಳನ್ನು ಕಳೆದು ಕೊಂಡಿರುವ ಮಾಲೀಕರಿಗೆ ಅರಣ್ಯ ಇಲಾಖಾಧಿಕಾರಿಗಳು ಸೂಕ್ತ ಪರಿಹಾರ ವನ್ನು ಕೂಡಲೇ ನೀಡಬೇಕೆಂದು ಒತ್ತಾಯಿಸಿದರು. ತಪ್ಪಿದ್ದಲ್ಲಿ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

-ವಾಸು ಎ.ಎನ್.