ಮಡಿಕೇರಿ: ಮಡಿಕೇರಿ ನಗರ ಬಿ.ಜೆ.ಪಿಯ ವಾರ್ಡ್ ಸಂಖ್ಯೆ ೪ ರ ಅಧ್ಯಕ್ಷ ಶಿವಪ್ರಸಾದ್ ಭಟ್ ಅವರ ಮನೆಗೆ ವಾರ್ಡ್ ಅಧ್ಯಕ್ಷರು ಎನ್ನುವ ನಾಮಫಲಕವನ್ನು ಅಳವಡಿಸಲಾಯಿತು. ಈ ಸಂದರ್ಭ ಎಂ.ಎಲ್.ಸಿ ಸುನಿಲ್ ಸುಬ್ರಮಣಿ, ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಬಿ.ಜೆ.ಪಿ ನಗರ ಅಧ್ಯಕ್ಷ ಮನು ಮಂಜುನಾಥ್ ಹಾಜರಿದ್ದರು.ಚೆಯ್ಯಂಡಾಣೆ: ಚೆಯ್ಯಂಡಾಣೆಯ ಸ್ಥಾನೀಯ ಸಮಿತಿಗೆ ಸಂಬAಧಿಸಿದ ಪೊದವಾಡ ಬೂತ್ ಅಧ್ಯಕ್ಷರು ಗಿರೀಶ್, ಅರಪಟ್ಟು, ಬೂತ್ ಅಧ್ಯಕ್ಷ ಅಯ್ಯಪ್ಪ, ಕರಡ ಬೂತ್ ಅಧ್ಯಕ್ಷ ಸೂಶ ಮೊಣ್ಣಯ್ಯ, ನರಿಯಂದಡ (ಎ) ಬೂತ್ ಅಧ್ಯಕ್ಷ ಮುಡ್ಯೊಳಂಡ ದಿನು ಗಣಪತಿ, ಚೇಲವಾರ ಬೂತ್ ಅಧ್ಯಕ್ಷ ಕುಟ್ಟನ ರವಿ, ಕೊಕೇರಿ ಬೂತ್ ಅಧ್ಯಕ್ಷ ಪೊನ್ನಚಂಡ ಬಾಬಿ, ನರಿಯಂದಡ (ಬಿ) ಬೂತ್ ಅಧ್ಯಕ್ಷ ಪವನ್ ತೊಟಂಬೈಲ್ ಇವರುಗಳ ಮನೆಗಳಿಗೆ ಸ್ಥಾನೀಯ ಸಮಿತಿ ಅಧ್ಯಕ್ಷರಾದ ದನೋಜ್ ಪೊಕ್ಕೂಳಂಡ್ರ ನೇತೃತ್ವದಲ್ಲಿ ನಾಮಫಲಕ ಅಳವಡಿಸಲಾಯಿತು.
ಪಕ್ಷದ ತತ್ವ ಸಿದ್ಧಾಂತದ ಪರವಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನಂತರ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ದಿ ಕಾರ್ಯ ದೇಶಕ್ಕೆ ಮಾತ್ರವಲ್ಲದೆ ಪ್ರಪಂಚಕ್ಕೆ ಮಾದರಿಯಾಗಿದೆ. ಇನ್ನೂ ಕೂಡ ಬಿಜೆಪಿಯ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಎಲ್ಲ ಬೂತ್ಗಳಲ್ಲಿ ಕಾರ್ಯೋನ್ಮುಖರಾಗಿ ಕಾರ್ಯಾಚರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ರೈತ ಮೋರ್ಚಾದ ಸದಸ್ಯರಾದ ಐತಿಚಂಡ ಭೀಮಯ್ಯ, ತಾಲೂಕು ಒಬಿಸಿ ಘಟಕದ ಅಧ್ಯಕ್ಷ ಕೊಳೆಯಂಡ ಗಿರೀಶ್, ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಮಂಜುಳ, ಸದಸ್ಯೆ ಪುಷ್ಪ, ಮುಡ್ಯೊಳಂಡ ಪ್ರವೀಣ್, ನೇತ್ರಾವತಿ, ಬೆಪುಡಿಯಂಡ ವಿಲಿನ್ ಹಾಜರಿದ್ದರು.ಮಡಿಕೇರಿ: ಭಾರತೀಯ ಜನತಾ ಪಕ್ಷದ ಮಡಿಕೇರಿ ಗ್ರಾಮಾಂತರ ಮಂಡಲದ ವತಿಯಿಂದ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಅಯ್ಯಂಗೇರಿ ಶಕ್ತಿ ಕೇಂದ್ರದ ಬೂತ್ ಒಂದರಲ್ಲಿ ಬೂತ್ ಅಧ್ಯಕ್ಷ ಬಾರಿಕೆ ದೀಪಕ್ ಅವರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಭಾಜಪ ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಂಗಿರ ಅಶ್ವಿ ಸತೀಶ್, ತಾಲೂಕು ಭಾಜಪ ಪ್ರಧಾನ ಕಾರ್ಯದರ್ಶಿಗಳಾದ ಕೋಡಿರ ಪ್ರಸನ್ನ, ಡೀನ್ ಬೋಪಣ್ಣ, ರಾಜ್ಯ ಭಾಜಪ ಕಾರ್ಯಕಾರಿಣಿ ಸದಸ್ಯ ಮನು ಮುತ್ತಪ್ಪ, ಯುವ ಮೋರ್ಚಾದ ಅಧ್ಯಕ್ಷ ಹೇಮಂತ್ ತೋರೆರ, ಹಿಂದುಳಿದ ಮೋರ್ಚಾದ ಅಧ್ಯಕ್ಷ ಕೊಲೆಯಂಡ ಗಿರೀಶ್, ರೈತ ಮೋರ್ಚಾದ ಅಧ್ಯಕ್ಷ ಜಗದೀಶ್ ಶಿವಚಾಳಿಯಂಡ, ಶಕ್ತಿ ಕೇಂದ್ರದ ಪ್ರಮುಖ್ ಜೀವನ್, ಸಹ ಪ್ರಮುಖ್ ಶಿವಣ್ಣ, ಬೂತ್ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.