ಗೋಣಿಕೊಪ್ಪಲು, ಅ. ೧೦: ಕೊಡಗಿನಲ್ಲಿ ಹೆಸರುವಾಸಿಯಾದ ಕಿತ್ತಳೆ, ಕರಿಮೆಣಸು ಹಾಗೂ ಕಾಫಿ ಬೆಳೆಗಳು ಹಂತ ಹಂತಹAತವಾಗಿ ಕ್ಷೀಣಿಸಲಾರಂಭಿಸಿದೆ. ಇದರ ಸಾಲಿನಲ್ಲಿ ಹಾಕಿ ಕ್ರೀಡೆ ಹಾಗೂ ಸೈನಿಕ ಪರಂಪರೆಯು ಕ್ಷೀಣಿಸುತ್ತಿದೆ. ಪ್ರಮುಖವಾಗಿ ಕೊಡಗಿಗೆ ಹೆಸರಾಂತ ಕ್ರೀಡಾಪಟುಗಳÀನ್ನು ಸರಿ ಸುಮಾರು ೧೯ ಒಲಂಪಿಯನ್ಸ್ಗಳನ್ನು ಹಾಗೂ ನೂರಕ್ಕೂ ಅಧಿಕ ಕ್ರೀಡಾಪಟುಗಳನ್ನು ಕೊಟ್ಟ ಹೆಗ್ಗಳಿಕೆ ಕೊಡಗಿನದ್ದಾಗಿದೆ. ಈಗಾಗಲೇ ಕಳೆದೆರಡು ವರ್ಷದಿಂದ ರಾಷ್ಟçಮಟ್ಟದಲ್ಲಿ ಗಮನ ಸೆಳೆಯುತ್ತಿದ್ದ ಕೌಟುಂಬಿಕ ಹಾಕಿ ಹಬ್ಬವು ಅನಿವಾರ್ಯ ಕಾರಣಗಳಿಂದ ನಿಂತು ಹೋಗಿವೆ.

ಕೊಡಗಿನ ಸಾವಿರಾರು ಕ್ರೀಡಾಪಟುಗಳು ಕೌಟುಂಬಿಕ ಹಾಕಿ ಯಲ್ಲಿ ಪ್ರತಿವರ್ಷವೂ ಪಾಲ್ಗೊಳ್ಳುವ ಮೂಲಕ ಉಳಿದ ಕ್ರೀಡಾಪಟುಗಳಿಗೆ ಸ್ಪೂರ್ತಿಯಾ ಗುತ್ತಿದ್ದರು. ಇದೀಗ ಯುವ ಆಟಗಾರರಿಗೆ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ಪ್ರತಿವರ್ಷ ಶಾಲಾ ಕಾಲೇಜುಗಳಿಗೆ ಸಹಜವಾಗಿ ಅಕ್ಟೋಬರ್, ಏಪ್ರಿಲ್ ತಿಂಗಳಿನ ರಜೆಯ ಸಮಯದಲ್ಲಿ ಹಾಕಿ ಶಿಬಿರವನ್ನು ಏರ್ಪಡಿಸಿದ್ದಲ್ಲಿ ಯುವ ಆಟಗಾರರು ಇಂತಹ ಶಿಬಿರದ ಪ್ರಯೋಜನ ಪಡೆಯಬಹುದು ಹಾಗೂ ಹಾಕಿ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡಬಹುದು. ಈ ನಿಟ್ಟಿನಲ್ಲಿ ಕೊಡಗು ಹಾಕಿ ಅಕಾಡೆಮಿ ಮತ್ತು ಸಂಘ-ಸAಸ್ಥೆಗಳ ಹಿರಿಯರು ಹಾಕಿ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿ ಹಾಕಿ ಶಿಬಿರವನ್ನು ಆಯೋಜಿಸಬೇಕಾಗಿದೆ. ಇದರಿಂದ ಕೊಡಗಿನ ಹಾಕಿ ಕ್ರೀಡಾಪಟುಗಳ ಭವಿಷ್ಯ ಉಜ್ವಲವಾದಂತಾಗಲಿದೆ.

ಅAದಿನ ಕಂದಾಯ ಮಂತ್ರಿಗಳಾದ ಶ್ರೀಕಂಠಯ್ಯನವರು ಹಾಗೂ ಎಂ.ಸಿ. ನಾಣಯ್ಯನವರು ಬಾಳುಗೋಡುವಿನಲ್ಲಿ ೧೪ ಎಕರೆ ಜಾಗವನ್ನು ಮಂಜೂರು ಮಾಡಿ ಈ ಸ್ಥಳವನ್ನು ಸಾಂಸ್ಕೃತಿಕ ಕೇಂದ್ರ, ಕೊಡಗಿನ ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಹಾಗೂ ಕ್ರೀಡೆಯನ್ನು ಬೆಳೆಸಲು ಉತ್ತೇಜನ ನೀಡಿದ್ದರು. ೧೪ ಎಕರೆ ಜಾಗವನ್ನು ಈ ನಿಟ್ಟಿನಲ್ಲಿ ಸರ್ಕಾರ ಮಂಜೂರು ಮಾಡಿತ್ತು. ಆದರೆ ಇದೀಗ ಈ ಪ್ರದೇಶವು ಕೇವಲ ಸಭೆ ಹಾಗೂ ವಿವಾಹ ಸಮಾರಂಭ ಕಷ್ಟೇ ಸೀಮಿತವಾದಂತಾಗಿದೆ. ಬಾಳುಗೋಡುವಿನಲ್ಲಿ ಎರಡು ಮುಖ್ಯ ಹಾಕಿ ಮೈದಾನವಿದೆ. ಇಲ್ಲಿ ಹಾಕಿ ತರಬೇತಿ ಶಿಬಿರ ಏರ್ಪಡಿಸುವುದು ಅನಿವಾರ್ಯ ವಾಗಿದೆ. ಕ್ರೀಡಾಪಟು ಗಳ ಭವಿಷ್ಯದ ದೃಷ್ಟಿಯಿಂದ ವಾರ್ಷಿಕ ಕನಿಷ್ಟ ನೂರು ಕ್ರೀಡಾಪಟುಗಳನ್ನು ಇಲ್ಲಿ ತಯಾರು ಮಾಡುವ ಮೂಲಕ ಇವರ ಮುಂದಿನ ಭವಿಷ್ಯ ಉಜ್ವಲವನ್ನಾಗಿ ಸಬಹುದು. ಬೇಸಿಗೆ ವಸತಿ ಶಿಬಿರಗಳನ್ನು ಆಯೋಜಿಸಿ (ರೆಸಿಡೆನ್ಸಿಯಲ್ ಕ್ಯಾಂಪ್) ಇದರ ಖರ್ಚನ್ನು ಕೊಡವ ಸಮಾಜ ಹಾಗೂ ಸಂಘ-ಸAಸ್ಥೆಗಳು ಭರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಅಲ್ಲದೆ ಹಿರಿಯ ಹಾಕಿ ಆಟಗಾರರನ್ನು ಇಲ್ಲಿ ಬಳಸಿಕೊಳ್ಳಬಹುದಾಗಿದೆ.

ಪಂಜಾಬ್ ರಾಜ್ಯದಲ್ಲಿ ಸುರ್ಜಿತ್ ಸಿಂಗ್ ಹಾಕಿ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದ್ದು ಪ್ರತಿ ವರ್ಷ ಈ ಅಕಾಡೆಮಿಯಿಂದ ಕನಿಷ್ಟ ೮ ಆಟಗಾರರನ್ನು ಭಾರತ ದೇಶಕ್ಕೆ ತಯಾರು ಮಾಡಿ ಕಳುಹಿಸಲಾಗುತ್ತಿದೆ. ಇದರ (ಡೆವಲಪ್‌ಮೆಂಟ್ ಪ್ಲಾನ್) ಪ್ರಯೋಜನವನ್ನು ಕೊಡಗಿನ ಪದ್ಮಶ್ರೀ ಪ್ರಶಸ್ತಿ ವಿಜೇತ ಎಂ.ಪಿ. ಗಣೇಶ್‌ರವರು ಮಾಡಿದ್ದಾರೆ. ಇಂತಹ ಶಿಬಿರ ನಡೆಸಲು ಎಂ.ಪಿ. ಗಣೇಶ್‌ರ ಸಲಹೆಯನ್ನು ಪಡೆಯಬೇಕಾಗಿದೆ. ವೀರಾಜಪೇಟೆಯ ನಿವೃತ್ತ ಅಂರ‍್ರಾಷ್ಟಿçÃಯ ಆಟಗಾರ ಬೋವ್ವೇರಿಯಂಡ ಕುಟ್ಟಪ್ಪ ಹಾಗೂ ಅಂರ‍್ರಾಷ್ಟಿçÃಯ ತೀರ್ಪುಗಾರ ಎ.ಬಿ. ಪಳಂಗಪ್ಪ ಹಾಗೂ ಅಂರ‍್ರಾಷ್ಟಿçÃಯ ರೆಗ್ಬಿ ಆಟಗಾರ ಮಾದಂಡ ತಿಮ್ಮಯ್ಯನವರಂತಹ ಮಹನೀಯರ ಸಲಹೆ ಹಾಗೂ ಮಾರ್ಗದರ್ಶನ ಅವಶ್ಯವಿದೆ. ಇಂತಹವರಿAದ ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ಲಭಿಸಿದಂತಾಗುತ್ತದೆ. ಇವರುಗಳು ತಾವಾಗಿಯೇ ಶಿಬಿರಗಳಿಗೆ ಆಗಮಿಸಿ ಉಚಿತ ತರಬೇತಿ ನೀಡಲು ಆಸಕ್ತರಾಗಿದ್ದಾರೆ. ಇಂತಹ ಹೆಸರಾಂತ ಕ್ರೀಡಾ ಪಟುಗಳು ಸಹಜವಾಗಿಯೇ ಶಿಬಿರಕ್ಕೆ ಆಗಮಿಸಿ ಉಚಿತವಾಗಿ ಸೇವೆ ನೀಡಲಿದ್ದಾರೆ. ಮಾಜಿ ಯೋಧರು ಈ ಬಗ್ಗೆ ಚಿಂತನೆ ನಡೆಸಿದ್ದಾರೆ.

ಮಾಜಿ ಒಲಂಪಿಯನ್ ಆಟಗಾರ, ಕರ್ನಲ್ ಬಿ.ಕೆ. ಸುಬ್ರಮಣಿ ಕೊಡಗಿನಲ್ಲಿರುವುದರಿಂದ ಇವರನ್ನು ಹಾಕಿ ಶಿಬಿರದ ಉಸ್ತುವಾರಿಯನ್ನಾಗಿ ನೇಮಿಸಿದ್ದಲ್ಲಿ ಇವರಿಂದ ಎನ್‌ಡಿಎ(ಆರ್ಮಿ)ಯ ತರಬೇತಿಯ ಪ್ರಯೋಜನವನ್ನು ಕೊಡಗಿನ ಯುವಕರು ಪಡೆಯಲು ಅವಕಾಶವಿದೆ. ಇದರಿಂದ ಯುವಕರು ಹೆಚ್ಚಾಗಿ ಸೈನ್ಯಕ್ಕೆ ಸೇರಲು ಅವಕಾಶ ಲಭಿಸಲಿದೆ. ಈ ವಿಚಾರದಲ್ಲಿ ಇವರಿಂದ ಉಚಿತವಾಗಿ ತರಬೇತಿಯನ್ನು ಪಡೆಯಬಹುದಾಗಿದೆ. ಶಿಬಿರದಲ್ಲಿ ಉಳಿದುಕೊಂಡ ಕ್ರೀಡಾಪಟುಗಳಿಗೆ ಪ್ರತಿನಿತ್ಯದ ಊಟದ ವ್ಯವಸ್ಥೆಗಾಗಿ ದಾನಿಗಳು ಮುಂದೆ ಬರಲಿದ್ದಾರೆ. ಪ್ರತಿನಿತ್ಯ ಪೋಷಕರು ಅವರ ಮಕ್ಕಳನ್ನು ಕರೆತಂದು ಕ್ರೀಡಾಂಗಣಕ್ಕೆ ಬಿಡುವ ಬದಲು ಇಲ್ಲೆ ವಾತ್ಸವ್ಯಕ್ಕೆ ಅವಕಾಶ ಕಲ್ಪಿಸಿ ಕ್ರೀಡೆಯ ನಂತರ ಇವರಿಗೆ ಪ್ರಯೋಜನವಾಗುವ ತರಗತಿಗಳನ್ನು ನೀಡುವಂತಾಗಬೇಕು. ಕ್ರೀಡೆಗೆ ಸಂಬAಧಿಸಿದ ತರಗತಿಗಳನ್ನು ಆರಂಭಿಸಬೇಕು. ವೀಡಿಯೋ ಮೂಲಕ ಅನೆÀಲೈಸಸ್ ಮತ್ತು ಅಂಪೆಯರಿAಗ್ ಕ್ಲಿನಿಕ್‌ನ್ನು ಆಯೋಜಿಸಬೇಕು. ಇದರಿಂದ ಕೊಡಗಿನ ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯ ರೂಪಿಸಿದಂತಾಗುತ್ತದೆ.

ನಿರ್ಲಕ್ಷö್ಯ ಮಾಡಿದೆ

೨೦೨೦ರಲ್ಲಿ ಪದ್ಮಶ್ರೀ ಪಡೆದ ಡಾ. ಎಂ.ಪಿ. ಗಣೇಶ್ ಮತ್ತು ೨೦೨೧ ಟೋಕಿಯೋ ಒಲಂಪಿಯನ್ಸ್ನಲ್ಲಿ ಪಾಲ್ಗೊಂಡ ಕೇಳಪಂಡ ಗಣಪತಿ ಮತ್ತು ಬಾಕ್ಸಿಂಗ್ ತರಬೇತುದಾರ ದ್ರೋಣಾಚಾರ್ಯ ಪುರಸ್ಕೃತ ಚೇನಂಡ ವಿಶು ಕುಟ್ಟಪ್ಪ ಅವರನ್ನು ಜಿಲ್ಲಾಡಳಿತ ಹಾಗೂ ಕೊಡಗಿನ ಎಲ್ಲಾ ಸಂಘ-ಸAಸ್ಥೆಗಳು ನಿರ್ಲಕ್ಷö್ಯ ಮಾಡಿದೆ. ಇದನ್ನು ಫೆಡರೇಷನ್ ಆಫ್ ಕೊಡವ ಸಮಾಜ ಗಂಭೀರವಾಗಿ ಪರಿಗಣಿಸಬೇಕು. ಇದು ಕೊಡಗಿನ ಪ್ರತಿಭೆಗಳಿಗಾದ ದೊಡ್ಡ ಅನ್ಯಾಯ. ಕೊಡಗಿನಲ್ಲಿ ಪ್ರತಿಭಾವಂತ ಯುವತಿಯರು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಮಿಂಚುತ್ತಿದ್ದು ಅವರಿಗೆ ಪ್ರೋತ್ಸಾಹ ಇಲ್ಲದಂತಾಗಿದೆ. ಹಾಕಿಯಲ್ಲಿ ಆಟವಾಡಿ ಉತ್ತಮ ವೃತ್ತಿ ಬದುಕನ್ನು ಕಂಡುಕೊAಡಿರುವ ಎಲ್ಲಾ ಹಳೆಯ ಹಾಗೂ ಹಿರಿಯ ಹಾಕಿ ಆಟಗಾರರು ಇದನ್ನು ಗಂಭೀರವಾಗಿ ಪರಿಗಣಿಸಿ ತಾವೇ ಮುಂದೆ ಬಂದು ಇಲ್ಲಿನ ಕ್ರೀಡಾಪಟುಗಳಿಗೆ ಉಚಿತÀ ತರಬೇತಿಯನ್ನು ಹಾಗೂ ಕೋಚಿಂಗ್ ಕ್ಯಾಂಪ್‌ಗೆ ತಗುಲುವ ವೆಚ್ಚವನ್ನು ಭರಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಡಗಿನಿಂದ ಕ್ರೀಡಾ ಕಲಿಗಳು ಮತ್ತಷ್ಟು ಮುಂದೆ ಬರಲು ಶ್ರಮಿಸಬೇಕಾಗಿದೆ.

ಪಾಂಡAಡ ಕುಟ್ಟಪ್ಪ ದಿವಂಗತರಾದ ನಂತರ ಕೊಡವ ಹಾಕಿ ಅಕಾಡೆಮಿಯು ಒಂದರ್ಥದಲ್ಲಿ ತಬ್ಬಲಿಯಾದಂತಾಗಿದೆ. ಪ್ರಸ್ತುತÀ ಪರಿಸ್ಥಿತಿಯಲ್ಲಿ ಹೆಸರಾಂತ ಬ್ಯಾಂಕುಗಳು ಹಾಗೂ ಕಂಪೆನಿಗಳು ಒಂದಕ್ಕೊAದು ವಿಲಿನವಾಗುತ್ತಿದೆ. ಹಾಗೆಯೇ ಹಾಕಿ ಅಕಾಡೆಮಿಯು ಕೂಡ ಫೆಡರೇಷನ್ ಆಫ್ ಕೊಡವ ಸಮಾಜದ ಜೊತೆಯಲ್ಲಿ ವಿಲಿನವಾಗಿ ಒಂದೇ ವೇದಿಕೆಯಲ್ಲಿ ನಿಂತು ಹಾಕಿ ಹಬ್ಬವನ್ನು ಪುನರಾರಂಭ ಮಾಡಬೇಕು. ಇದರಿಂದ ಕೊಡವ ಹಾಕಿ ಭೀಷ್ಮ ದಿ. ಕುಟ್ಟಪ್ಪನವರ ಕನಸ್ಸು ನನಸಾದಂತಾಗಲಿದೆ.

ಕೊಡಗಿನಲ್ಲಿ ೮೫೬ ಕೊಡವ ಕುಟುಂಬಗಳಿವೆ. ಇವುಗಳಲ್ಲಿ ಕೇವಲ ೩೦೦ ಕುಟುಂಬಗಳು ಮಾತ್ರ ಹಾಕಿ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಕುಟುಂಬದ ಮಕ್ಕಳನ್ನು ಶಿಬಿರದಲ್ಲಿ ಆಯ್ಕೆ ಮಾಡಬೇಕು. ಕೌಟುಂಬಿಕ ಹಾಕಿ ಆಟವು ಕೇವಲ ಆಡಂಬರಕ್ಕೆ ಸೀಮಿತವಾಗಬಾರದು. ಒಂದು ನಿರ್ಧಿಷ್ಟ ಮಟ್ಟದಲ್ಲಿ ಹಬ್ಬವನ್ನು ಆಚರಿಸಬೇಕು ಉಳಿದ ಹಣವನ್ನು ಇಂತಹ ಹಾಕಿ ಶಿಬಿರಕ್ಕೆ ನೀಡುವಂತಾಗಬೇಕು. ಗಿನ್ನಿಸ್ ರೆಕಾರ್ಡ್, ವರ್ಲ್ಡ್ ರೆಕಾರ್ಡ್ ಕಂಡಿರುವ ಕೌಟುಂಬಿಕ ಹಾಕಿಯು ಉತ್ತಮ ಹೆಸರು ಮಾಡಿದೆ.

ಹೆಸರಾಂತ ಆಟಗಾರರು ಇಲ್ಲಿಯ ತನಕ ಬಂದು ಹಾಕಿ ಕ್ರೀಡೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರಮುಖವಾಗಿ ಲೆಸ್ಲಿಕ್ಲಾಡಿಯಸ್, ಅಶೋಕ್‌ಕುಮಾರ್, ಧನರಾಜ್ ಪಿಳ್ಳೆ, ಶಮೀರ್‌ದಾದ್, ಎಂ.ಎA. ಸೋಮಯ್ಯ, ವಿ.ಆರ್. ರಘುನಾಥ್, ಬಿ.ಪಿ. ಗೋವಿಂದ, ಎಸ್.ವಿ. ಸುನೀಲ್, ಜೂಡ್ ಫಿಲಿಕ್ಸ್, ಅರ್ಜುನ್ ಹಾಲಪ್ಪ ಹಾಗೂ ೨೦೧೨ರಲ್ಲಿ ಲಂಡನ್ ಒಲಂಪಿಕ್ಸ್ನಲ್ಲಿ ಪಾಲ್ಗೊಂಡ ಭಾರತದ ತಂಡ ಹಾಗೂ ೨೦೧೦ರಲ್ಲಿ ಚಿತ್ರನಟ ಅಂಬರೀಶ್ ಆಗಮಿಸಿ ಪಂದ್ಯ ವೀಕ್ಷಿಸಿದನ್ನು ಇಲ್ಲಿ ಸ್ಮರಿಸಬಹುದು.

ಕೊಡಗಿನಿಂದ ಡಿವೈಎಸ್‌ಎಸ್ ಹಾಗೂ ಸಾಯಿ ಹಾಗೂ ತಂಡಕ್ಕೆ ಸೇರಬೇಕಾದರೆ ಕಠಿಣ ಅಭ್ಯಾಸದ ಅಗತ್ಯವಿದೆ. ಕೊಡಗಿನ ಕ್ರೀಡಾಪಟುಗಳು ಎಡವಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ ಎಲ್ಲಾ ಕ್ರೀಡಾಪಟುಗಳು ಉತ್ತರ ಕರ್ನಾಟಕದವರು ಆಗಿದ್ದಾರೆ. ಕೊಡಗಿನ ಕ್ರೀಡಾಪಟುಗಳನ್ನು ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ. ಇದಕ್ಕೆ ಸೂಕ್ತವಾಗಿ ಹಿರಿಯರು ಹಾಗೂ ಹಾಕಿ ತಜ್ಞರು ಅಂರ‍್ರಾಷ್ಟಿçÃಯ ತೀರ್ಪುಗಾರರು ಮತ್ತು ಹಾಕಿ ತರಬೇತುದಾರರು ತಮ್ಮ ಪ್ರತಿಷ್ಟೆಯನ್ನು ಬದಿಗಿಟ್ಟು ಈ ಶಿಬಿರದಲ್ಲಿ ಪಾಲ್ಗೊಳ್ಳ ಬೇಕು. ಈಗಾಗಲೇ ಕ್ರಿಕೆಟ್ ಸಂಸ್ಥೆಯು ಸುಮಾರು ೨೦ ಎಕರೆ ಜಾಗ ಮಂಜೂರು ಮಾಡಿ ಮುನ್ನಡೆದಿದೆ ಫುಟ್ಬಾಲ್‌ನಲ್ಲಿ ಐಎನ್‌ಎಸ್ ಗುಡ್ಡೆ ಹೊಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹಾಲೆಂಡ್ ದೇಶದಲ್ಲಿ ಪ್ರತಿ ೧೨ ಕಿ.ಮೀ.ಗಳಿಗೆ ಒಂದು ಹಾಕಿ ತರಬೇತಿಯನ್ನು ತೆರೆಯಲಾಗುತ್ತಿದೆ. ಇದರಂತೆ ಕೊಡಗಿನಲ್ಲಿಯೂ ಕೂಡ ಅಲ್ಲಲ್ಲಿ ಮೈದಾನವೂ ಇದೆ. ಇರುವ ಮೈದಾನದಲ್ಲಿ ಹಾಕಿ ಶಿಬಿರಗಳು ನಿರಂತರವಾಗಿ ನಡೆಯಬೇಕು. ಇಂತಹ ಶಿಬಿರಗಳಿಗೆ ಹಳೆಯ ಹಿರಿಯ ಆಟಗಾರರು ಪಾಲ್ಗೊಂಡಲ್ಲಿ ಯುವ ಪ್ರತಿಭೆಗೆ ಪ್ರೋತ್ಸಾಹ ದೊರೆಯಲಿದೆ. ಇದರಿಂದ ಯಶಸ್ವಿ ನಿರೀಕ್ಷಿಸಬಹುದು. ಕೊಡಗಿನಲ್ಲಿ ಎನ್.ಐ.ಎಸ್. ಕೋಚ್‌ಗಳ ಕಡಿಮೆ ಸಂಖ್ಯೆಯಲ್ಲಿದ್ದು ಇವರಿಗೆ ಆಧುನಿಕ ತರಬೇತಿ ನೀಡಬೇಕಾಗಿದೆ.

ಹಾಕಿಗೆ ಮಾತ್ರ ಯಾವ ಮಾನ್ಯತೆ ಇಲ್ಲದೆ ಸೊರಗುವಂತಾಗಿದೆ. ೨೦೧೦ರಲ್ಲಿ ಕೇಂದ್ರ ಕ್ರೀಡಾ ಸಚಿವರು ಕೊಡಗಿಗೆ ಆಗಮಿಸಿದಾಗ ಇದನ್ನು ಪರಿಗಣಿಸಿದ್ದರು. ಸಾರ್ವಜನಿಕರ ಒತ್ತಾಯದ ಮೇರೆಗೆ ಅಸ್ಟೊçÃಟರ್ಪನ್ನು ಪೊನ್ನಂಪೇಟೆಯಲ್ಲಿ ಅಳವಡಿಸಿದರು. ಈ ಮೈದಾನ ಸಾರ್ವಜನಿಕರಿಗೆ ಸಂಪೂರ್ಣ ಉಪಯೋಗವಾಗಬೇಕು. ಮೈದಾನ ಶುಲ್ಕ ಪಡೆದು ಆಟವಾಡಲು ಕ್ರಮ ವಹಿಸಬೇಕು. ದೇಶದಾದ್ಯಂತ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರತಿ ಕ್ರೀಡಾಪಟುಗಳು ಮನೆಯಲ್ಲಿ ಅನಿವಾರ್ಯವಾಗಿ ಉಳಿಯುವಂತಾಗಿದೆ.

ಹೊರಗೆ ಕೆಲಸ ಮಾಡುವವರು ಕೂಡ ಮನೆಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳದಿದ್ದರೆ ಮಕ್ಕಳು ಸಹಜವಾಗಿಯೇ ದುಷ್ಚಟಕ್ಕೆ ಬಲಿಯಾಗುವ ಆತಂಕವಿದೆ. ಅಖಿಲ ಕೊಡವ ಸಮಾಜ, ಫೆಡರೇಶನ್‌ಆಫ್ ಕೊಡವ ಸಮಾಜ, ಕೊಡವ ಹಾಕಿ ಅಕಾಡೆಮಿ ಹಾಗೂ ಎಲ್ಲಾ ಕೊಡವ ಸಮಾಜಗಳು ವಿಶೇಷ ಆಸಕ್ತಿ ವಹಿಸಿ ಇಲ್ಲಿನ ಕ್ರೀಡಾಪಟುಗಳ ಮುಂದಿನ ಭವಿಷ್ಯ ರೂಪಿಸುವಂತಾಗಬೇಕು. ಪ್ರತಿಷ್ಠಿತ ಕೊಡಗಿನಲ್ಲಿ ರಾಷ್ಟಿçÃಯ ಕ್ರೀಡೆಯಾದ ಹಾಕಿಯನ್ನು ಮತ್ತು ಸೈನಿಕ ಪರಂಪರೆಯನ್ನು ಉಳಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಹಾಕಿ ಕ್ರೀಡೆಯಲ್ಲಿ ದಾಖಲೆಯನ್ನು ಸೃಷ್ಟಿಸಬೇಕು.

- ಹೆಚ್.ಕೆ. ಜಗದೀಶ್