*ಗೋಣಿಕೊಪ್ಪ, ಅ. ೧೦: ಬಿಪಿಎಲ್ ಪಡಿತರ ಚೀಟಿ ಹೊಂದಿದ ಫಲಾನುಭವಿಗಳಿಗೆ ಪಡಿತರ ಪಡೆದುಕೊಳ್ಳಲು ಬಟ್ಟೆಯ ಚೀಲಗಳನ್ನು÷ ಶಾಸಕ ಕೆ.ಜಿ. ಬೋಪಯ್ಯ ಅವರು ವಿತರಿಸಿದರು.
ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ನಡೆದ ಸೇವಾ ಮತ್ತು ಸಮರ್ಪಣಾ ಅಭಿಯಾನ ಕಾರ್ಯಕ್ರಮದಲ್ಲಿ ಸುಮಾರು ೧೫೦ಕ್ಕೂ ಬಟ್ಟೆ ಚೀಲಗಳನ್ನು ಹಾತೂರು ಗ್ರಾ.ಪಂ. ವ್ಯಾಪ್ತಿಯ ಕೈಕೇರಿ ನ್ಯಾಂiÀi ಬೆಲೆ ಅಂಗಡಿಯ ಪಡಿತರ ಫಲಾನುಭವಿಗಳಿಗೆ ನೀಡಿದರು.
ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ಹಾತೂರು ಗ್ರಾ.ಪಂ. ಅಧ್ಯಕ್ಷ ಕುಪ್ಪಂಡ ಗಿರಿಪೂವಣ್ಣ, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್, ಜಿಲ್ಲಾ ಬಿಜೆಪಿ ಖಜಾಂಜಿ ಗುಮ್ಮಟ್ಟೀರ ಕಿಲನ್‌ಗಣಪತಿ, ಜಿ.ಪಂ. ಮಾಜಿ ಸದಸ್ಯ ಸಿ.ಕೆ. ಬೋಪಣ್ಣ, ಗೋಣಿಕೊಪ್ಪ ಗ್ರಾ.ಪಂ. ಸದಸ್ಯ ಬಿ.ಎನ್. ಪ್ರಕಾಶ್, ತಾಲೂಕು ಓ.ಬಿ.ಸಿ. ಘಟಕದ ಅಧ್ಯಕ್ಷ ರಾಜೇಶ್. ಕೆ, ಪ್ರಮುಖ ಕೊಕ್ಕಂಡ ಕುಶ ಉಪಸ್ಥಿತರಿದ್ದರು.