ಸೋಮವಾರಪೇಟೆ, ಅ. ೧೦: ಜೆಸಿಐ ಕುಶಾಲನಗರ ಕಾವೇರಿಯ ಅಂಗ ಸಂಸ್ಥೆಯ ವತಿಯಿಂದ ಮಹಿಳೆಯರಿಗಾಗಿ ಸೋಮವಾರಪೇಟೆಯಲ್ಲಿ ಕೂರ್ಗ್ ಕ್ವೀನ್ಸ್ ಪದಗ್ರಹಣ ಕಾರ್ಯಕ್ರಮ ಇಲ್ಲಿನ ಸಫಾಲಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಪದಗ್ರಹಣ ಕಾರ್ಯಕ್ರಮವನ್ನು ವಲಯ ೧೪ರ ವಲಯಾಧ್ಯಕ್ಷ ಎನ್. ಭರತ್ ನೂತನ ಅಧ್ಯಕ್ಷೆಗೆ ನೆರವೇರಿಸಿದರು. ನಂತರ ಮಾತನಾಡಿ, ಸೇವಾವಲಯದಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡು ಬರುತ್ತಿರುವ ಜೇಸಿ ಸಂಸ್ಥೆ, ಹತ್ತು ಹಲವು ಯುವ ನಾಯಕರನ್ನು ಹುಟ್ಟುಹಾಕುತ್ತಿದೆ ಎಂದರು.

ಕಾರ್ಯಕ್ರಮವನ್ನು ಆಯ್ಕೆಯಾದ ಅಧ್ಯಕ್ಷೆ ಮೀನ ಮಂಜುನಾಥ್ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ವಲಯದ ನಿಕಟಪೂರ್ವ ಅಧ್ಯಕ್ಷ ರಾಜೀವ್, ಮಹಿಳಾ ಸೆನೆಟರ್ ಆಶಾ ಜೈನ್, ಜೆಸಿಐ ಕುಶಾಲನಗರ ಕಾವೇರಿಯ ಅಧ್ಯಕ್ಷ ಎನ್.ಜೆ. ಮಂಜುನಾಥ್, ಕಾರ್ಯಕ್ರಮ ಸಂಯೋಜಕ ಪ್ರವೀಣ್, ಕಾರ್ಯದರ್ಶಿ ರಾಕೇಶ್, ಮಹಿಳಾ ಸಮಿತಿಯ ಕಾರ್ಯದರ್ಶಿ ಅಶ್ವಿನಿ ಕೃಷ್ಣಕಾಂತ್, ಉಪಾಧ್ಯಕ್ಷರಾದ ಸುಶ್ಮಾ, ಸರಿತಾ, ಉಷಾ, ಖಜಾಂಚಿ ಸುನಿತಾ ಉಪಸ್ಥಿತರಿದ್ದರು.