ಮಡಿಕೇರಿ, ಅ. ೧೧: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ರೂ. ೯.೧೩ ಕೋಟಿ ಲಾಭ ಗಳಿಸಿದೆ. ತಾ. ೧೨ ರಂದು (ಇಂದು) ವಾರ್ಷಿಕ ಮಹಾಸಭೆ ಕೆಳಗಿನ ಕೊಡವ ಸಮಾಜದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ೧೦೦ ವರ್ಷಗಳನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿದೆ. ೧೦೧ನೇ ವರ್ಷದ ವಿಕಾಸದ ಹಾದಿಯಲ್ಲಿ ಮುನ್ನಡೆಯುತ್ತಿರುವ ಬ್ಯಾಂಕು ಪ್ರತಿ ವರ್ಷ ಉತ್ತಮ ಬೆಳವಣಿಗೆ ಯನ್ನು ಸಾಧಿಸಿ ಇಂದು ರಾಜ್ಯ ದಲ್ಲಿರುವ ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಪೈಕಿ ಪ್ರಮುಖ ಬ್ಯಾಂಕು ಎಂದು ಗುರುತಿಸಲ್ಪಟ್ಟಿದೆ.
(ಮೊದಲ ಪುಟದಿಂದ) ಜಿಲ್ಲೆಯ ರೈತರಿಗೆ ಕೃಷಿ ನಿರ್ವಹಣೆಗಾಗಿ ಬೇಕಾಗಿರುವ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳನ್ನು ಬ್ಯಾಂಕಿನಿAದ ನೇರವಾಗಿ ಹಾಗೂ ಜಿಲ್ಲೆಯ ೭೩ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹಾಗೂ ಇತರೆ ಸದಸ್ಯ ಸಹಕಾರ ಸಂಘಗಳ ಮುಖಾಂತರ ನೀಡಲಾಗುತ್ತಿದೆ. ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳಿಗೆ ಸರಿ ಸಮನಾಗಿ ತಂತ್ರಜ್ಞಾನಾಧಾರಿತ ಆಧುನಿಕ ಬ್ಯಾಂಕಿAಗ್ ಸೇವೆಯನ್ನು ನೀಡುತ್ತಿರುವುದಾಗಿ ತಿಳಿಸಿದರು.
೨೮೮ ಸಹಕಾರ ಸಂಘಗಳು ಬ್ಯಾಂಕಿನ ಸದಸ್ಯತ್ವವನ್ನು ಪಡೆದಿದ್ದು, ರೂ.೨೬.೪೪ ಕೋಟಿ ಪಾಲು ಬಂಡವಾಳ ಸಂಗ್ರಹಣೆಯಾಗಿರುತ್ತದೆ. ಕಳೆದ ಸಾಲಿಗೆ ಹೋಲಿಸಿದಾಗ ಹೊಸದಾಗಿ ೪ ಸಹಕಾರ ಸಂಘಗಳು ಸದಸ್ಯತನ ಪಡೆದಿದ್ದು, ಒಟ್ಟಾರೆ ರೂ.೨.೦೨ ಕೋಟಿ ಪಾಲು ಬಂಡಾವಾಳದಲ್ಲಿ ಹೆಚ್ಚಳವಾಗಿದೆ. ಷೇರು ಬಂಡವಾಳ, ಶಾಸನಬದ್ಧ ಮೀಸಲು ನಿಧಿಗಳು ಹಾಗೂ ಬಟವಾಡೆಯಾಗದ ಲಾಭಾಂಶದ ಮೊತ್ತವನ್ನು ಒಳಗೊಂಡAತೆ ಒಟ್ಟು ರೂ.೧೦೩.೪೬ ಕೋಟಿ ಮೊತ್ತದ ಸ್ವಂತ ಬಂಡವಾಳವನ್ನು ಹೊಂದಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ರೂ.೩.೪೪ ಕೋಟಿಗಳಷ್ಟು ಹೆಚ್ಚಳವಾಗಿರುತ್ತದೆ. ರೂ.೧೦೮೧ ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು. ಕಳೆದ ಸಾಲಿಗೆ ಹೋಲಿಸಿದಲ್ಲಿ ರೂ.೧೫೫ ಕೋಟಿ ಹೆಚ್ಚುವರಿ ಠೇವಣಿ ಸಂಗ್ರಹಣೆ ಮಾಡಲಾಗಿರುತ್ತದೆ ಎಂದರು.
ಬ್ಯಾಂಕು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಬ್ಯಾಂಕಿಗೆ ಸಂಯೋಜಿಸಲ್ಪಟ್ಟ ಸಹಕಾರಿ ಸಂಘಗಳ ಮುಖಾಂತರ ಅಲ್ಪಾವಧಿ ಬೆಳೆ ಸಾಲ, ಮಧ್ಯಮಾವಧಿ ಕೃಷಿ ಸಾಲ, ನಗದು ಸಾಲ ಮತ್ತು ಮಾರ್ಕೆಟಿಂಗ್ ಫೈನಾನ್ಸ್ ಸಾಲ ನೀಡಲಾಗುತ್ತಿದೆ. ಬ್ಯಾಂಕಿನ ಒಟ್ಟಾರೆ ಸಾಲ ವಸೂಲಾತಿಯು ಶೇ.೯೬.೩೬ ರಷ್ಟು ಗುರಿ ಸಾಧಿಸಲಾಗಿದೆ. ಕೋವಿಡ್-೧೯ರ ಹಿನ್ನೆಲೆಯಲ್ಲಿ ಸಾಲ ಪಡೆದ ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕು ತನ್ನ ಎಲ್ಲಾ ತರಹದ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುವ ಮುಖಾಂತರ ಸಾಲಗಾರ ಗ್ರಾಹಕರ ಬಡ್ಡಿ ಹೊರೆಯನ್ನು ಇಳಿಕೆ ಮಾಡಲಾಗಿದೆ. ಇದರಿಂದಾಗಿ ಬ್ಯಾಂಕಿಗೆ ಸುಮಾರು ರೂ.೩ ಕೋಟಿಗಳಷ್ಟು ಆದಾಯದಲ್ಲಿ ಕಡಿಮೆಯಾಗಿದೆ. ಬ್ಯಾಂಕು ವಿತರಿಸುತ್ತಿರುವ ಒಟ್ಟಾರೆ ಸಾಲದ ಪೈಕಿ ನಬಾರ್ಡ್ ವತಿಯಿಂದ ಅಲ್ಪಾವಧಿ ಬೆಳೆ ಸಾಲ ವಿತರಣೆಗೆಂದು ಸುಮಾರು ೧೫೦ ಕೋಟಿಯಷ್ಟು ರಿಯಾಯಿತಿ ಬಡ್ಡಿ ದರದ ಪುನರ್ಧನ ಸಾಲ ಸೌಲಭ್ಯ ದೊರೆಯುತ್ತಿರುವುದನ್ನು ಹೊರತುಪಡಿಸಿ, ಉಳಿದ ಎಲ್ಲಾ ಸಾಲದ ಮೊತ್ತವನ್ನು ಡಿ.ಸಿ.ಸಿ. ಬ್ಯಾಂಕ್ ಠೇವಣಿದಾರರಿಂದ ಸಂಗ್ರಹಿಸಿದ ತನ್ನ ಸ್ವಂತ ಬಂಡವಾಳದಿAದ ವಿತರಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ವಾಯಿದೆ ಮೀರಿದ ಸಾಲ ವಸೂಲಾತಿ ಪ್ರಕ್ರಿಯೆಯನ್ನು ಬ್ಯಾಂಕು ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕಿನ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಬ್ಯಾಂಕು ಅಪೆಕ್ಸ್ ಬ್ಯಾಂಕಿನೊAದಿಗೆ ಒಡಗೂಡಿ ಜಿಲ್ಲೆಯಲ್ಲಿ ಕೋವಿಡ್ ಸಂಕಷ್ಟಕ್ಕೆ ಒಳಗಾಗಿ ಮೃತರಾದ ರೈತ ಕುಟುಂಬದ ಸಾಲ ಮನ್ನಾ ಮಾಡುವ ಚಿಂತನೆಯನ್ನು ನಡೆಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದ ಪ್ರಕಾರ ಡಿಸಿಸಿ ಬ್ಯಾಂಕುಗಳ ನಿವ್ವಳ ಆಸ್ತಿಗೆ ಅನುಗುಣವಾಗಿ ಬಂಡವಾಳ ಸಾಮರ್ಥ್ಯದ ಪ್ರಮಾಣವು ಶೇ.೯ಕ್ಕೆ ಮೇಲ್ಪಟ್ಟು ಇರಬೇಕಾಗಿದ್ದು, ಶೇ.೧೦.೭೩ ರಷ್ಟಿದ್ದು, ಉತ್ತಮವಾದ ಸ್ವಸಾಮರ್ಥ್ಯವನ್ನು ಬ್ಯಾಂಕ್ ಹೊಂದಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟು ೨೧ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಶಾಖೆಗಳು ಕೋರ್ ಬ್ಯಾಂಕಿAಗ್ ವ್ಯವಸ್ಥೆಯಡಿ ಒಳಪಟ್ಟಿದೆ. ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳನ್ನು ಏಕರೂಪದ ತಂತ್ರಾAಶದಲ್ಲಿ ಅಳವಡಿಸುವ ಸಲುವಾಗಿ ಹಾಗೂ ಜಿಲ್ಲೆಯ ಆಯ್ದ ಸಹಕಾರ ಸಂಘಗಳಲ್ಲಿ ಮೈಕ್ರೋ ಎ.ಟಿ.ಎಂ. ಅಳವಡಿಸಲು ೨೦೧೯-೨೦ನೇ ಸಾಲಿನ ಲಾಭಾಂಶದಲ್ಲಿ ರೂ.೧.೨೫ ಕೋಟಿ ಕಾಯ್ದಿರಿಸಲಾಗಿದ್ದು, ಸರ್ಕಾರದ ನಡೆಯನ್ನು ಗಮನಿಸಿ ಕ್ರಮಕೈಗೊಳ್ಳಲಾಗುವುದು. ಬ್ಯಾಂಕು ಶತಮಾನ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಬ್ಯಾಂಕು ೨೦೨೧-೨೨ ನೇ ಸಾಲಿನಲ್ಲಿ ಹೆಚ್ಚಿನ ಠೇವಣಿ ಸಂಗ್ರಹಣೆ, ವಿವಿಧ ಸಾಲ ಸೌಲಭ್ಯ ನೀಡಿಕೆ, ಅಧುನಿಕ ಬ್ಯಾಂಕಿAಗ್ ಸೇವೆಗಳು, ಮಾದಾಪುರ, ಸಂಪಾಜೆ ಹಾಗೂ ಭಾಗಮಂಡಲದಲ್ಲಿ ಬ್ಯಾಂಕಿನ ಹೊಸ ಶಾಖೆ ತೆರೆಯುವುದು ಸೇರಿದಂತೆ ನಾನಾ ಯೋಜನೆ ಕೈಗೊಳ್ಳುವ ಗುರಿ ಇದೆ ಎಂದು ಹೇಳಿದರು.
ಗೋಷ್ಟಿಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರುಗಳಾದ ಹೊಟ್ಟೆಂಗಡ ರಮೇಶ್, ಕನ್ನಂಡ ಸಂಪತ್, ಕಿಮ್ಮುಡಿರ ಜಗದೀಶ್, ಪ್ರಧಾನ ವ್ಯವಸ್ಥಾಪಕ ಕೋಡಿರ ಪೂವಯ್ಯ ಉಪಸ್ಥಿತರಿದ್ದರು.